ದೇಹದಾರ್ಢ್ಯತೆಯ ಬಗ್ಗೆ ಯೂಟ್ಯೂಬರ್ ಮಸೂಮ್ ಮಿನಾವಾಲ ಜೊತೆಗಿನ ಸಂವಾದದಲ್ಲಿ ತಮನ್ನಾ 'ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ದೀರ್ಘ ದಿನದ ಕೆಲಸದ ನಂತರ, ನಾನು ಸ್ನಾನ ಮಾಡುವಾಗ ನನ್ನ ದೇಹದ ಪ್ರತಿಯೊಂದು ಭಾಗವನ್ನು ಮುಟ್ಟಿ ಧನ್ಯವಾದ ಹೇಳುತ್ತೇನೆ. ಇದು ಸ್ವಲ್ಪ ಹುಚ್ಚುತನ ಅಂತ ಅನಿಸಬಹುದು, ಆದರೆ ಯಾಕೆ ಮಾಡಬಾರದು? ಪ್ರತಿದಿನ ನನ್ನ ದೇಹ ಎಷ್ಟೆಲ್ಲಾ ಸಹಿಸಿಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ನನ್ನ ದೇಹದ ಎಲ್ಲಾ ಭಾಗಗಳನ್ನು ನಾನು ಸ್ಪರ್ಶಿಸುತ್ತೇನೆ, ಆ ದಿನವನ್ನು ಉತ್ತಮಗೊಳಿಸಿದ್ದಕ್ಕಾಗಿ ಮತ್ತು ನನ್ನೊಂದಿಗೆ ಇದ್ದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದಿದ್ದಾರೆ.