ಕಾಸ್ಟಿಂಗ್ ಕೌಚ್‌ನಿಂದ ಹೀರೋಯಿನ್ ಆಗುವ ಅವಕಾಶ ಕಳೆದುಕೊಂಡೆ: ಪುಷ್ಪ ನಟಿ ಅನಸೂಯ ಆರೋಪವೇನು?

Published : May 12, 2025, 12:42 PM IST

ಟಿವಿ ಪರದೆಯಿಂದ ಬೆಳ್ಳಿತೆರೆಗೆ ಬಂದ ಅನಸೂಯ ಭಾರದ್ವಾಜ್ ತಮ್ಮ ಗ್ಲಾಮರ್ ಮತ್ತು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಬರ್ದಸ್ತ್ ನಂತಹ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ ಅವರು, ಈಗ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.

PREV
16
ಕಾಸ್ಟಿಂಗ್ ಕೌಚ್‌ನಿಂದ ಹೀರೋಯಿನ್ ಆಗುವ ಅವಕಾಶ ಕಳೆದುಕೊಂಡೆ: ಪುಷ್ಪ ನಟಿ ಅನಸೂಯ ಆರೋಪವೇನು?

ಟಿವಿ ಪರದೆಯಿಂದ ಬೆಳ್ಳಿತೆರೆಗೆ ಬಂದ ಅನಸೂಯ ಭಾರದ್ವಾಜ್ ತಮ್ಮ ಗ್ಲಾಮರ್ ಮತ್ತು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಬರ್ದಸ್ತ್ ನಂತಹ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದವರು, ಈಗ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.

26

ಕ್ಷಣಂ, ರಂಗಸ್ಥಳಂ, ಪುಷ್ಪ ಸಿನಿಮಾಗಳಲ್ಲಿ ನಟಿಸಿರುವ ಅನಸೂಯ ಈಗ ಟಿವಿ ಮತ್ತು ಸಿನಿಮಾಗಳೆರಡರಲ್ಲೂ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಫೋಟೋ ಹಾಕುವ ಇವರ ಫೋಟೋಗಳು ಸಖತ್ ವೈರಲ್ ಆಗುತ್ತವೆ.

36

ಅನಸೂಯ ಅವರ ಗ್ಲಾಮರ್ ಫೋಟೋಗಳಿಗೆ ಅಭಿಮಾನಿಗಳಿದ್ದರೆ, ಟ್ರೋಲ್ ಮಾಡುವವರೂ ಇದ್ದಾರೆ. ಆಗಾಗ ಟ್ರೋಲ್‌ಗಳಿಗೆ ತಿರುಗೇಟು ಕೊಡುವ ಇವರು, 'ಆಂಟಿ' ಎಂದು ಕರೆಯುವವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

46

ತಮಗೆ ಇಷ್ಟ ಬಂದ ಹಾಗೆ ಬಟ್ಟೆ ಹಾಕಿಕೊಳ್ಳುವ ಹಕ್ಕು ತಮಗಿದೆ ಎಂದು ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ ಅನಸೂಯ. ಟ್ರೋಲ್ ಆದರೂ ಗ್ಲಾಮರ್ ಮಾತ್ರ ಕಮ್ಮಿ ಮಾಡಿಲ್ಲ. ಇತ್ತೀಚೆಗೆ ಲೆಹೆಂಗಾದಲ್ಲಿ ಕಾಣಿಸಿಕೊಂಡ ಅನಸೂಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

56

ಪುಷ್ಪ 2, ರಾಜಾಕಾರ್ ಸಿನಿಮಾಗಳಲ್ಲಿ ನಟಿಸಿರುವ ಅನಸೂಯ, ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್‌ಗೆ ಒಳಗಾಗಿದ್ದಾಗಿ ಹೇಳಿದ್ದಾರೆ. ಕೆಲವು ಸ್ಟಾರ್ ನಟರು ಮತ್ತು ನಿರ್ದೇಶಕರು ತಮ್ಮನ್ನು ಕಾಸ್ಟಿಂಗ್ ಕೌಚ್‌ಗೆ ಒಳಪಡಿಸಲು ಯತ್ನಿಸಿದ್ದರಿಂದ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

66

ನೀವು ಏಕೆ ನಾಯಕಿ ಆಗಲಿಲ್ಲ ಎಂದು ಅನೇಕರು ಕೇಳುತ್ತಾರೆ. ಅದಕ್ಕೆ ಹಲವು ಕಾರಣಗಳಿವೆ. ಕಾಸ್ಟಿಂಗ್ ಕೌಚ್ ಕೂಡ ಒಂದು ಕಾರಣ. ನಾಯಕಿ ಆಗದೇ ಇರೋದಕ್ಕೆ ಬೇಸರ ಇದೆ. ಆದರೆ ಈಗ ಸಿಗುತ್ತಿರುವ ಅವಕಾಶಗಳಿಂದ ಖುಷಿಯಾಗಿದ್ದೇನೆ ಎಂದಿದ್ದಾರೆ.

Read more Photos on
click me!

Recommended Stories