ಸಾಲು ಸಾಲು ಸಿನಿಮಾ ಸೋತರೂ ಫೋಟೋ‌ಶೂಟ್‌ನಲ್ಲಿ ಅನನ್ಯಾ ಮಿಂಚಿಂಗ್; ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ

Published : Nov 28, 2022, 01:52 PM IST

ಅನನ್ಯಾ ಸಿನಿಮಾಗಳು ಸೋತರೂ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಗಾಗ ಬೋಲ್ಡ್ ಅಂಡ್ ಹಾಟ್ ಫೋಟೋಗಳ ಮೂಲಕ ಮಿಂಚುವ ನಟಿ ಇದೀಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

PREV
16
ಸಾಲು ಸಾಲು ಸಿನಿಮಾ ಸೋತರೂ ಫೋಟೋ‌ಶೂಟ್‌ನಲ್ಲಿ ಅನನ್ಯಾ ಮಿಂಚಿಂಗ್;  ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 3 ವರ್ಷಗಳಾಗಿದೆ. ಆದರೆ ಹೇಳಿಕೊಳ್ಳುವಂತ ಸಕ್ಸಸ್ ಇನ್ನು ಸಿಕ್ಕಿಲ್ಲ. ಸೂಪರ್ ಹಿಟ್ ಸಿನಿಮಾಗಾಗಿ ಅನನ್ಯಾ ಪಾಂಡೆ ಎದುರುನೋಡುತ್ತಿದ್ದಾರೆ. ಈಗಾಗಲೇ ಅನನ್ಯಾ 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವ ಸಿನಿಮಾನೂ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿಲ್ಲ. 
 

26

ಅನನ್ಯಾ ಸಿನಿಮಾಗಳು ಸೋತರೂ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಗಾಗ ಬೋಲ್ಡ್ ಅಂಡ್ ಹಾಟ್ ಫೋಟೋಗಳ ಮೂಲಕ ಮಿಂಚುವ ನಟಿ ಅನನ್ಯಾ ಇದೀಗ ಮತ್ತೊಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

36

ಅನನ್ಯಾ ಹಾಟ್ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪಿಂಕ್ ಮತ್ತು ನೀಲೆ ಬಣ್ಣದ ಡ್ರೆಸ್ ನಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಿನಿ ಡ್ರೆಸ್ ಧರಿಸಿರುವ ಅನನ್ಯಾ ಕಾಲುಗಳು ಹೈಲೆಟ್ ಆಗಿದೆ. 

46

ಅನನ್ಯಾ ಫಿಟ್ನೆಸ್ ನೋಡಿ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಅನನ್ಯಾ ತರಹೇವಾರಿ ಪೋಸ್ ಗಳನ್ನು ನೀಡಿದ್ದಾರೆ. ನಟಿಯ ಮಾದಕ ಪೋಸ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ನೆಟ್ಟಿಗರು ಬೆಂಕಿ, ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತ ಪಡಿಸುತ್ತಿದ್ದಾರೆ. 

56

ನಟಿ ಅನನ್ಯಾ ಪಾಂಡೆ ಕೊನೆಯದಾಗಿ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಅನನ್ಯಾ ಮೊದಲ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿಸಿದ್ದರು. ಭಾರಿ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಹೀನಾಯ ಸೋಲು ಕಂಡಿತು. 

66

ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಜೋಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಪುರಿ ಜಗನ್ನಾಥ್ ಲೈಗರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಬಳಿಕ ಅನನ್ಯಾ ಡ್ರೀಮ್ ಗರ್ಲ್ 2 ಮತ್ತು ಕೊ ಗಯೇ ಹಮ್ ಕಹಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.     

Read more Photos on
click me!

Recommended Stories