ಕರೆ ಸ್ವೀಕರಿಸದ ಬಾಯ್‌ಫ್ರೆಂಡ್‌ಗೆ 50-75 ಬಾರಿ ಕಾಲ್ ಮಾಡಿದ ಅನನ್ಯಾ ಪಾಂಡೆ! ಯಾಕೆ?

First Published | Mar 30, 2024, 2:30 PM IST

ಬಾಲಿವುಡ್ ನಟಿ ಅನನ್ಯಾ ಪಾಂಡೆ ಒಮ್ಮೆ ತಮ್ಮ ಬಾಯ್‌ಫ್ರೆಂಡ್‌ಗೆ 50-75 ಬಾರಿ ನಿರಂತರವಾಗಿ ಕರೆ ಮಾಡುತ್ತಿದ್ದುದಾಗಿ ಹೇಳಿದ್ದಾರೆ. ನೋ ಫಿಲ್ಟರ್ ನೇಹಾ ಕಾರ್ಯಕ್ರಮದಲ್ಲಿ ಅನನ್ಯಾ ಇನ್ನಷ್ಟು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 

'ಖೋ ಗಯೇ ಹಮ್ ಕಹಾನ್' ಎಂಬ ಚಿತ್ರದಲ್ಲಿ ಅನನ್ಯಾ ಪಾಂಡೆ 'ಸೈಕೋ ಆಬ್ಸೆಸಿವ್ ಸ್ಟಾಕರ್ ಗರ್ಲ್‌ಫ್ರೆಂಡ್' ಪಾತ್ರ ಮಾಡಿದ್ದು, ಈ ಪಾತ್ರ ಆಕೆಗೆ ಬಹಳ ಇಷ್ಟವಾಗಿದೆಯಂತೆ. ಈ ಬಗ್ಗೆ 'ನೋ ಫಿಲ್ಟರ್ ನೇಹಾ' ಕಾರ್ಯಕ್ರಮದಲ್ಲಿ ಹೇಳಿದ ಅನನ್ಯಾ ಕುತೂಹಲಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
 

ಸಂಬಂಧದಲ್ಲಿ ತಮ್ಮ ಕ್ರೇಜಿಯೆಸ್ಟ್ ವಿಷಯ ಏನೆಂದು ಕೇಳಿದಾಗ, ಕರೆಯನ್ನು ಸ್ವೀಕರಿಸದ ಕಾರಣ ಒಮ್ಮೆ ತನ್ನ ಗೆಳೆಯನಿಗೆ 50-75 ಬಾರಿ ಕರೆ ಮಾಡಿರುವುದಾಗಿ ಅನನ್ಯಾ ಹೇಳಿದ್ದಾರೆ. 

Tap to resize

'ನನಗೊಂದು ಸಮಸ್ಯೆಯಿದೆ. ಆ ನಿಮಿಷದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಾದ ವ್ಯಕ್ತಿ ನಾನು. ಜನರಿಗೆ ಜಾಗ ಕೊಡುವುದು ನನಗೆ ಇಷ್ಟವಿಲ್ಲ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ' ಎಂದು ನನಗೆ ಗೊತ್ತು ಎಂದು ಅನನ್ಯ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈವೆಂಟ್‌ಗಳು, ಪಾರ್ಟಿಗಳಲ್ಲಿ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಆಗಾಗ್ಗೆ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿದೆ.

'ನನಗೆ ಡ್ರಮ್ಯಾಟಿಕ್ ಆಗಿರುವುದು ಇಷ್ಟ. ಯಾವುದಾದರೂ ವಿಷಯಕ್ಕೆ ನೋವಾದಾಗ 2 ಗಂಟೆ ಜೋರಾಗಿ ಅತ್ತು ಬಿಡುತ್ತೇನೆ, ಅತಿಯಾಗಿ ಪ್ರತಿಕ್ರಿಯಿಸುತ್ತೇನೆ. ಕಡೆಗೆ ಏನೂ ಆಗೇ ಇಲ್ಲವೆಂಬಂತೆ ಸಡನ್ ಆಗಿ ಸರಿಯಾಗುತ್ತೇನೆ. ಹಳೆಯ ವಿಷಯಗಳಿಂದ ಸುಲಭವಾಗಿ ಮುಂದೆ ಹೋಗುತ್ತೇನೆ' ಎಂದೂ ನಟಿ ಹೇಳಿದ್ದಾರೆ. 

ಇದಲ್ಲದೆ, ಅನನ್ಯಾ ಸಹೋದರಿ ರೈಸಾ ಅವರಿಂದ ಹೊರಬಂದ ಸಲಹೆಯನ್ನು ಹಂಚಿಕೊಂಡಿದ್ದಾರೆ. ಬಾಯ್‌ಫ್ರೆಂಡ್ ಹೆಸರಿನಡಿಯಲ್ಲಿ ರೈಸಾಳ ಸಂಪರ್ಕವನ್ನು ಸೇವ್ ಮಾಡಿಕೊಳ್ಳಲು ಸೋದರಿ ಸಲಹೆ ನೀಡಿದ್ದು, ಭಾವನೆಗಳನ್ನು ಹೊರ ಹಾಕಬೇಕಾದ ಸಂಗಾತಿಯನ್ನು ನೇರವಾಗಿ ಎದುರಿಸದೆ ಆಕೆಗೆ ಕರೆ ಮಾಡಲು ಹೇಳಿದ್ದಾಳಂತೆ. 

ಕಾರ್ಯಕ್ರಮದಲ್ಲಿ, ನೇಹಾ ಅನನ್ಯಳನ್ನು 'ತಮ್ಮ ತಂದೆ-ತಾಯಿ ಇಲ್ಲದಿದ್ದಾಗ ತನ್ನ ಲಿವಿಂಗ್ ರೂಮಿನಲ್ಲಿ ಹುಡುಗನೊಂದಿಗೆ ಕ್ಯಾಮೆರಾದಲ್ಲಿ ಸೆರೆಹಿಡಿದ' ಸಮಯದ ಬಗ್ಗೆ ಮಾತನಾಡಲು ಕೇಳಿಕೊಂಡರು. 

ಇದಕ್ಕೆ ಉತ್ತರಿಸಿದ ಅನನ್ಯಾ, 'ನನ್ನ ತಂದೆ ಲಿವಿಂಗ್ ರೂಮಿನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಮತ್ತು ಅವರು ನನ್ನನ್ನು ಹೆದರಿಸಲು ಹಾಗೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸಿದೆ, ನಾನು ದೊಡ್ಡ ಹೇಡಿ, ನಾನು ನನ್ನ ಹೆತ್ತವರಿಗೆ ಎಂದಿಗೂ ಸುಳ್ಳು ಹೇಳುವುದಿಲ್ಲ. ಆದರೆ ಅಂದು ಧೈರ್ಯ ಮಾಡಿ ಬಾಯ್‌ಫ್ರೆಂಡ್ ಜೊತೆ ಮಾತಾಡುತ್ತಾ ಕುಳಿತಿದ್ದೆ '

ತಂದೆ ಚುಂಕಿ ಪಾಂಡೆ ಕರೆ ಮಾಡಿ ಅವರಿಗೆ ನಿರಾಶೆ ಮಾಡಿದೆ ಎಂದರು. ನಂತರ 5 ಪುಟಗಳ ಸಾರಿ ಲೆಟರ್ ಬರೆದೆ ಮತ್ತು ಎಂದಿಗೂ ಅವರಿಂದ ಏನನ್ನೂ ಮುಚ್ಚಿಟ್ಟಿಲ್ಲ ಎಂದು ನಟಿ ಹೇಳಿದ್ದಾರೆ.

ಕೆಲಸದ ವಿಷಯಕ್ಕೆ ಬಂದರೆ ಅನನ್ಯಾ ವಿಕ್ರಮಾದಿತ್ಯ ಮೋಟ್ವಾನೆ ಅವರ ಮುಂಬರುವ ಸೈಬರ್ ಥ್ರಿಲ್ಲರ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊ ಸರಣಿ 'ಕಾಲ್ ಮಿ ಬೇ'ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

Latest Videos

click me!