ಕೃತಿ ಸನನ್ ಹೈ ಸ್ಲೀಟ್‌ ಡ್ರೆಸ್‌ಗೆ ಅಮಿತಾಬ್‌ ಕಾಮೆಂಟ್‌; ಟ್ರೋಲ್ ಆದ ಬಚ್ಚನ್‌

First Published | Mar 28, 2021, 4:44 PM IST

ಬಾಲಿವುಡ್ ನಟಿ ಕೃತಿ ಸನೋನ್ ತಮ್ಮ ಕೆಲವು ಸೂಪರ್ ಹಾಟ್ ಫೊಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕೃತಿ ಹೈ ಸ್ಲಿಟ್‌ ಗೌನ್‌ ಧರಿಸಿದ್ದಾರೆ. ನಸೋನ್‌ ಫೋಟೋ ಮೆಚ್ಚಿ ಅವಿತಾಬ್‌ ಬಚ್ಚನ್‌ ಕಾಮೆಂಟ್‌ ಮಾಡಿದ್ದಾರೆ. ಈ ಕಾಮೆಂಟ್‌ ಸೋಷಿಯಲ್‌ ಮೀಡಿಯಾ ಯೂಸರ್ಸ್‌ಗೆ ಟ್ರೋಲ್‌ ಮಾಡಲು ದಾರಿ ಮಾಡಿಕೊಟ್ಟ ಹಾಗಾಗಿದೆ. ನೆಟ್ಟಿಗರು‌ ಬಿಗ್‌ ಬಿ ಕಾಲೆಳೆಯುತ್ತಿದ್ದಾರೆ.

ಇತ್ತೀಚೆಗೆ ಕೃತಿ ಸನೋನ್‌ ಥೈ ಸ್ಲಿಟ್‌ ಡ್ರೆಸ್‌ ಧರಸಿರುವ ತಮ್ಮ ಪೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು.
ಫೋಟೋದಲ್ಲಿ ನಟಿ ಪಿಂಕ್‌, ನೀಲಿ, ಹಸಿರು ಮತ್ತು ಕಪ್ಪು ಶೇಡ್‌ಗಳ ಜ್ಯಾಮಿಟ್ರಿ ಡಿಸೈನ್‌ನ ಕ್ರೆಪ್ ಮ್ಯಾಕ್ಸಿ ಡ್ರೆಸ್‌ ಧರಿಸಿದ್ದಾರೆ.
Tap to resize

ನಿರ್ಮೂಹಾ ಬ್ರಾಂಡ್‌ನ ಈ ಹೈ ಸ್ಲಿಟ್‌ ಡ್ರೆಸ್‌ ಬೆಲೆ 12,800 ರೂ.ಗಳು.
ಕೃತಿಯ ಈ ಫೋಟೋ ಇನ್ಸ್ಟಾಗ್ರಾಮ್‌ನ ಲ್ಲಿ 1.7 ಮಿಲಿಯನ್‌ಗಿಂತ ಹೆಚ್ಚು ಲೈಕ್ ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ.
ಬಿಗ್‌ ಬಿ ಅಮಿತಾಬ್ ಬಚ್ಚನ್ ಕೂಡ ಕೃತಿಯ ಫೋಟೋ ಲೈಕ್‌ ಮಾಡಿ 'ವಾವ್' ಜೊತೆ ಹಾರ್ಟ್ ಎಮೋಜಿಯೊಂದನ್ನು ಕಾಮೆಂಟ್‌ಮಾಡಿದ್ದಾರೆ.
ಬಚ್ಚನ್ ಅವರ 'ವಾವ್' ಕಾಮೆಂಟ್ ಸೋಷಿಯಲ್ ಮೀಡಿಯಾ ಬಳಕೆದಾರಿಗೆ ಇಷ್ಟವಾಗಿಲ್ಲ.
ಈ ಕಾರಣಕ್ಕಾಗಿ ಮೇಮ್‌ಗಳನ್ನು ಮಾಡಿ ಸೂಪರ್‌ಸ್ಟಾರ್ ಅನ್ನುವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೋಲ್ಮಾಡುತ್ತಿದ್ದಾರೆ.
ಬಚ್ಚನ್ ರಿಯಾಕ್ಷನ್‌ಗೆ ಕೃತಿ ಕೈ ಜೋಡಿಸಿರುವ ಮತ್ತು ಹೊಳೆಯುವ ಪಿಂಕ್‌ ಹಾರ್ಟ್‌ಎಮೋಜಿ ಅನ್ನು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಶೂಟಿಂಗ್‌ ಮುಗಿಸಿದ್ದಾರೆ. ಸದ್ಯದಲ್ಲೇ ಪ್ರಭಾಸ್ ಜೊತೆ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಮತ್ತು ಗಣಪಥ್ ಸಿನಿಮಾಕ್ಕಾಗಿ ಟೈಗರ್ ಶ್ರಾಫ್ ಅವರೊಂದಿಗೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಕೃತಿ.
ಮತ್ತೊಂದೆಡೆ, ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಮತ್ತು ಚೆಹ್ರೆ ಸಿನಿಮಾಗಳ ಬಿಡುಗಡೆಗಾಗಿ ಅಮಿತಾಬ್ ಬಚ್ಚನ್ ರೆಡಿಯಾಗುತ್ತಿದ್ದಾರೆ. ಮೇಡೇ, ಆಂಖೇನ್ 2, ಪೊನ್ನಿಯಿನ್ ಸೆಲ್ವಾನ್, ಜುಂಡ್ಮುಂತಾದ ಕೆಲವು ಪ್ರಾಜೆಕ್ಟ್‌ಗಳಿವೆ ಬಾಲಿವುಡ್ ಬಿಗ್ ಕೈಯಲ್ಲಿ.
ಒಟ್ಟಿನಲ್ಲಿ ಅಮಿತಾಭ್ ಈ ವಯಸ್ಸಿನಲ್ಲಿಯೂ ಹೀಗೆ ಏಕೆ ಆಡುತ್ತಾರೆ ಎನ್ನೋದು ನೆಟ್ಟಿಗರ ಪ್ರಶ್ನೆ.

Latest Videos

click me!