ಟರ್ಕಿ ಫಸ್ಟ್ ಲೇಡಿಯ ಜೊತೆ ಲಗಾನ್ ನಟ ಕುಳಿತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಫಸ್ಟ್ ಲೇಡಿ ಎಮಿನ್ ಎರ್ಡೋಗನ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಮೀರ್ ಖಾನ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಜಗತ್ತಿನಲ್ಲೇ ಫೇಮಸ್ ಆಗಿರುವ ಭಾರತೀಯ ನಟ ಮೀರ್ ಖಾನ್ ಅವರನ್ನು ಇಸ್ತಾನ್‌ಬುಲ್‌ನಲ್ಲಿ ಭೇಟಿಯಾದೆ. ಟರ್ಕಿಯ ವಿವಿಧ ಭಾಗದಲ್ಲಿ ಅಮೀರ್ ಸಿನಿಮಾ ಶೂಟಿಂಗ್ ನಡೆಯಲಿದೆ ಎಂದು ತಿಳಿದು ಸಂತಸವಾಯಿತು. ಸಿನಿಮಾ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಹೂಬರ್ ಬಂಗಲೆಯ ಬಾಲ್ಕನಿಯಲ್ಲಿ ಕುಳಿತು ಅಮೀರ್ ಖಾನ್ ಎಮಿನ್ ಅವರ ಜೊತೆ ಮಾತನಾಡುವುದನ್ನು ಫೋಟೋದಲ್ಲಿ ಕಾಣಬಹುದು.
ಬ್ಲೂ ಹಾಗೂ ವೈಟ್ ಚೆಕ್ಸ್ ಶರ್ಟ್ ಧರಿಸಿದ್ದ ಅಮೀರ್ ಫೋಟೋ ವೈರಲ್ ಆಗಿದೆ.
ಲಾಕ್‌ಡೌನ್‌ನಿಂದಾಗಿ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಸ್ಥಗಿತವಾಗಿತ್ತು. ಊಈ ವರ್ಷ ತೆರೆ ಕಾಣಬೇಕಿದ್ದ ಸಿನಿಮಾ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಈ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ಕೂಡಾ ನಟಿಸಲಿದ್ದಾರೆ. ಇದು ಫಾರೆಸ್ಟ್ ಗಂಪ್ ಹಾಲಿವುಡ್ ಸಿನಿಮಾದ ಹಿಂದಿ ಸಿನಿಮಾವಾಗಿದೆ.