ಇತ್ತೀಚೆಗೆ, ಒಂದು ಸಂದರ್ಶನದಲ್ಲಿ ಶಿವಕಾರ್ತಿಕೇಯನ್ ಸಿನಿಮಾ ರಂಗ ತೊರೆಯುವ ಯೋಚನೆಯಲ್ಲಿದ್ದೆ ಎಂದಿದ್ದಾರೆ. ಮೂರು ವರ್ಷಗಳ ಹಿಂದೆ ಈ ನಿರ್ಧಾರಕ್ಕೆ ಬಂದಿದ್ದರಂತೆ. ಆಗ ಪತ್ನಿ ಆರತಿ, "ಅಜಿತ್ ಮತ್ತು ವಿಕ್ರಮ್ ನಂತರ 20 ವರ್ಷಗಳಲ್ಲಿ ಯಾರಿಗೂ ಸಿನಿಮಾ ಹಿನ್ನೆಲೆ ಇಲ್ಲದೆ ಯಶಸ್ಸು ಸಿಕ್ಕಿಲ್ಲ. ನೀವು ಸಾಧಿಸಿದ್ದೀರಿ. ಇದು ಸಾಮಾನ್ಯ ಸಂಗತಿಯಲ್ಲ. ಹಾಗಾಗಿ ಬಿಡಬೇಡಿ. ನಿಮ್ಮ ಖ್ಯಾತಿಯನ್ನು ಆನಂದಿಸಿ" ಎಂದು ಹೇಳಿದ್ದಾರೆ. ಆರತಿ ಮಾತಿಗೆ ಮನಸು ಬದಲಿಸಿಕೊಂಡ ಶಿವಕಾರ್ತಿಕೇಯನ್ ಸಿನಿಮಾ ರಂಗದಲ್ಲಿ ಮುಂದುವರಿದಿದ್ದಾರೆ.