ಅಲ್ಲು ಅರ್ಜುನ್, ಪುಷ್ಪ2, ಸುಕುಮಾರ್
ಅಲ್ಲು ಅರ್ಜುನ್ ನಟಿಸಿ, ಸುಕುಮಾರ್ ನಿರ್ದೇಶಿಸಿರುವ ಆಕ್ಷನ್ ಥ್ರಿಲ್ಲರ್ ‘ಪುಷ್ಪ: ದಿ ರೂಲ್’ (Pushpa 2) ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಪ್ರೀ ಸೇಲ್ ಬುಕಿಂಗ್ಸ್‌ನಲ್ಲೇ ಸೂಪರ್ ಹಿಟ್ ಆಗಿದ್ದ ಈ ಚಿತ್ರ ಮೊದಲ ದಿನದ ಕಲೆಕ್ಷನ್‌ನಲ್ಲೂ ಸಕತ್ ಸೌಂಡ್ ಮಾಡ್ತಿದೆ ಅಂತ ಟ್ರೇಡ್‌ನಲ್ಲಿ ಹೇಳ್ತಿದ್ದಾರೆ. ಡಿಸೆಂಬರ್ 4 ರ ರಾತ್ರಿಯಿಂದ ಥಿಯೇಟರ್‌ಗಳಲ್ಲಿ ಸದ್ದು ಮಾಡ್ತಿರೋ ‘ಪುಷ್ಪ 2’ ಕಲೆಕ್ಷನ್‌ಗಳಲ್ಲಿ ಎಲ್ಲೆಡೆ, ಅದರಲ್ಲೂ ಓವರ್ಸೀಸ್‌ನಲ್ಲಿ ಟಾಪ್‌ನಲ್ಲಿದೆ.
ಮೊದಲ ದಿನ ಈ ಚಿತ್ರ ಭಾರತದಾದ್ಯಂತ 175 ಕೋಟಿ ರೂ. ಗಳಿಸಿದೆ ಅಂತ ಟ್ರೇಡ್ ವಲಯ ಹೇಳ್ತಿದೆ. ಇದರಲ್ಲಿ ಎರಡೂ ತೆಲುಗು ರಾಜ್ಯಗಳ ಪಾಲು ಹೆಚ್ಚಿದೆ ಅಂತ ಕೇಳಿಬರ್ತಿದೆ. ಅಮೆರಿಕದಲ್ಲಿ ಈ ಚಿತ್ರ ಮೊದಲ ದಿನ ಸುಮಾರು 4.2 ಮಿಲಿಯನ್ ಡಾಲರ್ (35 ಕೋಟಿ ರೂ. ಗಿಂತ ಹೆಚ್ಚು) ಗಳಿಸಿದೆ ಅಂತ ನಿರ್ಮಾಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ವಿಷಯ ತಿಳಿಸಿ ಪೋಸ್ಟರ್ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಈ ಮಟ್ಟದ ಗಳಿಕೆ ಕಂಡ ಮೂರನೇ ಭಾರತೀಯ ಚಿತ್ರ ‘ಪುಷ್ಪ 2’ ಅಂತ ಹೇಳಿದೆ. ಭಾರತ ಹಾಗೂ ವಿದೇಶಗಳ ಗಳಿಗೆ ಒಗ್ಗೂಡಿಸಿದರೆ ಮೊದಲ ದಿನವೇ ಪುಷ್ಪಾ 2 ಸರಿಸುಮಾರು 200 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಪ್ರೀ ಸೇಲ್ ಬುಕಿಂಗ್ಸ್‌ನಿಂದಲೂ ಬುಕ್ ಮೈ ಶೋನಲ್ಲಿ ‘ಪುಷ್ಪ 2’ ಭರ್ಜರಿಯಾಗಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಒಂದೇ ಗಂಟೆಯಲ್ಲಿ ಒಂದು ಲಕ್ಷ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಪ್ರಭಾಸ್‌ರ ‘ಕಲ್ಕಿ 2898 AD’ ಚಿತ್ರ ಒಂದು ಗಂಟೆಯಲ್ಲಿ 97,700 ಟಿಕೆಟ್‌ಗಳೊಂದಿಗೆ ಟಾಪ್‌ನಲ್ಲಿತ್ತು. ಈಗ ಆ ದಾಖಲೆಯನ್ನ ಪುಷ್ಪ 2 ಮುರಿದಿದೆ.
ಪುಷ್ಪ 2 ಸುಮಾರು 12,000 ಸ್ಕ್ರೀನ್‌ಗಳಲ್ಲಿ ಡಿಸೆಂಬರ್ 5 ರಂದು ಬಿಡುಗಡೆಯಾಗಿ ಹಿಟ್ ಟಾಕ್ ಪಡೆದಿದೆ. ಡಿಸೆಂಬರ್ 4 ರಂದು ಪ್ರೀಮಿಯರ್ ಶೋಗಳಿಗೆ 7 ಕೋಟಿ ರೂ. ಮಾರಾಟವಾಗಿದೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್ಸ್, ಪ್ರೀಮಿಯರ್ಸ್ ಕಲೆಕ್ಷನ್‌ಗಳನ್ನೆಲ್ಲ ಸೇರಿ 77 ಕೋಟಿ ರೂ. ಪ್ರೀ-ಸೇಲ್ಸ್ ಆಗಿದೆ ಅಂತ ಸಿನಿ ವಲಯ ಹೇಳಿದೆ.
ಇದರಲ್ಲಿ ಹಿಂದಿ ವರ್ಷನ್‌ನಲ್ಲೇ 27.12 ಕೋಟಿ, ತೆಲುಗು 2D ವರ್ಷನ್‌ನಲ್ಲಿ 38.37 ಕೋಟಿ ರೂ. ಗಳಿಕೆಯಾಗಿದೆ. Sacnilk ಪ್ರಕಾರ, ಗುರುವಾರ ಪ್ರೀಮಿಯರ್ಸ್‌ನಿಂದಲೇ (ಡಿಸೆಂಬರ್ 4) ಮೊದಲ ದಿನ ಸುಮಾರು 16.03 ಕೋಟಿ ರೂ. ನಿವ್ವಳ ಗಳಿಕೆಯಾಗಿದೆ.
ಭರ್ಜರಿಯಾಗಿ ಬಿಡುಗಡೆಯಾಗಿರುವ ಪುಷ್ಪ 2 ಚಿತ್ರಕ್ಕೆ ಕೇವಲ ತೆಲುಗು ರಾಜ್ಯಗಳಲ್ಲೇ 80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಬರಬಹುದು ಅಂತ ಟ್ರೇಡ್ ವಲಯ ಅಂದಾಜಿಸಿದೆ. ತಮಿಳುನಾಡಿನಲ್ಲಿ 9 ಕೋಟಿ ರೂ., ಕರ್ನಾಟಕದಲ್ಲಿ 15 ಕೋಟಿ ರೂ., ಕೇರಳದಲ್ಲಿ 8 ಕೋಟಿ ರೂ. ಗಳಿಕೆ ಆಗಬಹುದು ಅಂತ ಅಭಿಪ್ರಾಯಪಟ್ಟಿದ್ದಾರೆ. ಓವರ್ಸೀಸ್‌ನಲ್ಲಿ 62 ರಿಂದ 72 ಕೋಟಿ ರೂ. ವರೆಗೆ ಕಲೆಕ್ಷನ್ ಬರಬಹುದು ಅಂತ ಅಂದಾಜಿಸಲಾಗಿದೆ.
‘ಪುಷ್ಪ ದಿ ರೂಲ್’ಗೆ ಎಲ್ಲೆಡೆಯಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ರಶ್ಮಿಕಾ ನಾಯಕಿಯಾಗಿ ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಪುಷ್ಪ ದಿ ರೈಸ್’ನ ಮುಂದುವರಿದ ಭಾಗ ಈ ಚಿತ್ರ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಭಾರೀ ನಿರೀಕ್ಷೆಗಳ ನಡುವೆ ಗುರುವಾರ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ಬುಧವಾರ ಸಂಜೆ ಹಲವು ರಾಜ್ಯಗಳಲ್ಲಿ ಪ್ರೀಮಿಯರ್ಸ್ ಪ್ರದರ್ಶನಗೊಂಡಿವೆ. ಅಲ್ಲು ಅರ್ಜುನ್ ಅಭಿನಯ ಅದ್ಭುತವಾಗಿದೆ ಅಂತ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ.