ಅಲ್ಲು ಅರ್ಜುನ್‌ಗೆ ಮೊದಲಿನಿಂದಲೂ ಕೇರಳದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಅಲ್ಲಿ ಮಮ್ಮುಟ್ಟಿ, ಮೋಹನ್‌ಲಾಲ್ ನಂತರ ಅಲ್ಲು ಅರ್ಜುನ್‌ಗೆ ದೊಡ್ಡ ಕಟೌಟ್‌ಗಳನ್ನು ಹಾಕ್ತಾರೆ. ಅವರು ಬನ್ನಿಯನ್ನು ಮಲ್ಲು ಅರ್ಜುನ್ ಅಂತ ಕರೀತಾರೆ. 'ಪುಷ್ಪ' ಸಿನಿಮಾದಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಇಮೇಜ್ ಪಡೆದಿದ್ದಾರೆ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲೂ ಅಲ್ಲು ಅರ್ಜುನ್ ಅಂದ್ರೆ ಅಭಿಮಾನಿಗಳು ಇಷ್ಟ ಪಡ್ತಿದ್ದಾರೆ. 'ಪುಷ್ಪ 2'ಗಾಗಿ ಬಾಲಿವುಡ್ ಪ್ರೇಕ್ಷಕರು ಕಾಯ್ತಿದ್ದಾರೆ. ಹಾಗಾಗಿ ಕೇರಳದಲ್ಲಿ 'ಪುಷ್ಪ 2' ನಿರೀಕ್ಷೆ ಹೇಗಿರುತ್ತೆ ಅಂತ ಹೇಳಬೇಕಾಗಿಲ್ಲ.