ಟಾಲಿವುಡ್ ಸ್ಟಾರ್ ರಾಮ್ ಚರಣ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ತುಂಬು ಗರ್ಭಿಣಿ ಉಪಾಸನಾ ಅವರಿಗೆ ಇತ್ತೀಚಿಗಷ್ಟೆ ಅದ್ದೂರಿ ಸೀಮಂತ ಶಾಸ್ತ್ರ ಮಾಡಲಾಗಿದೆ.
29
ಉಪಾಸನಾ ಸೀಮಂತ ಸಂಭ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಹೈದರಾಬಾದ್ ನಲ್ಲಿ ನಡೆದ ಸೀಮಂತ ಸಂಭ್ರಮದಲ್ಲಿ ಚಿರಂಜೀವಿ ಇಡೀ ಕುಟುಂಬ ಜೊತೆಗೆ ಆಪ್ತರು ಹಾಗು ಸಿನಿ ಗಣ್ಯರು ಹಾಜರಾಗಿದ್ದರು.
39
ಸದ್ಯ ಉಪಾಸನಾ ಫೋಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೀಮಂತ ಸಂಭ್ರಮದ ಫೋಟೋಗಳನ್ನು ನಟಿ ಉಪಾಸನಾ ಶೇರ್ ಮಾಡಿ ಎಲ್ಲರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
49
ಅಂದಹಾಗೆ ಸೀಮಂತ ಸಂಭ್ರಮದ ಕಾರ್ಯಕ್ರಮದಲ್ಲಿ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಜಿರಂಜೀವಿ ಅವರ ಇಬ್ಬರೂ ಹೆಣ್ಣು ಮಕ್ಕಳು ಸಹ ಸಂಭ್ರಮದಲ್ಲಿ ಮಿಂಚಿದ್ದಾರೆ.
59
ಚಿರಂಜೀವಿ ಮತ್ತು ಸುರೇಖಾ ಕೊನಿಡೇಲ ದಂಪತಿ, ರಾಮ್ ಚರಣ್ ಸಹೋದರಿಯರಾದ ಸುಶ್ಮಿತಾ ಮತ್ತು ಶ್ರೀಜಾ, ಉಪಾಸನಾ ಅವರ ತಾಯಿ ಶೋಬನಾ ಕಾಮಿನೇನಿ, ಸಂಗೀತಾ ರೆಡ್ಡಿ ಸೇರಿದಂತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.
69
ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಇತ್ತೀಚೆಗಷ್ಟೆ ಭಾರತಕ್ಕೆ ಮರಳಿದ್ದಾರೆ. ಸ್ಟಾರ್ ಜೋಡಿ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಕೆಲವು ಸಮಯ ಕಾಲ ಕಳೆದು ಇದೀಗ ಭಾರತಕ್ಕೆ ಮರಳಿದ್ದಾರೆ. ಅಂದಹಾಗೆ ವಿದೇಶದಲ್ಲೂ ಉಪಾಸನಾ ಸೀಮಂತ ಸಂಭ್ರಮ ಮಾಡಲಾಗಿತ್ತು. ಅನೇಕ ವಿದೇಶಿ ಗಣ್ಯರು ಭಾಗಿಯಾಗಿದ್ದರು.
79
ಉಪಾಸನಾ ಮತ್ತು ರಾಮ್ ಚರಣ್ ದಂಪತಿ ಆರ್ ಆರ್ ಆರ್ ಆಸ್ಕರ್ ಸಂಭ್ರಮದಲ್ಲಿ ಮಿಂಚಿದ್ದರು. ಪತ್ನಿ ಜೊತೆ ರಾಮ್ ಚರಣ್ ಅಮೆರಿಕಾಗೆ ಹಾರಿದ್ದರು. ಆಸ್ಕರ್ ಪ್ರಶಸ್ತಿ ಸ್ವೀಕರಿಸುವ ವೇಳೆಯೂ ಉಪಾಸನಾ ಪತಿಯ ಜೊತೆಯಲ್ಲೇ ಇದ್ದರು.
89
ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ 2012ರ ಜೂನ್ 14ರಂದು ದಾಂಪತ್ಯಕ್ಕೆ ಕಾಲಿಟ್ಟರು. ಇಬ್ಬರೂ ಮದುವೆಯಾಗಿ ಕಾಲಿಟ್ಟು 10 ವರ್ಷಗಳ ಬಳಿಕ ಮೊದಲ ಮಗು ಸ್ವೀಕರಿಸುತ್ತಿದ್ದಾರೆ. ಇಬ್ಬರೂ ಸಹ ಮೊದಲ ಮಗುವನ್ನು ಈ ಪ್ರಪಂಚಕ್ಕೆ ಸ್ವಾಗತಿಸಲು ಉತ್ಸುಕರಾಗಿದ್ದಾರೆ.
99
ram charan
ರಾಮ್ ಚರಣ್ ಸದ್ಯ ಗೇಮ್ ಚೇಂಜರ್ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಕಿಯಾರಾ ಅಡ್ವಾಣಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.