ಸಿನಿಮಾದಲ್ಲಿ ಗುರುವನ್ನ ಮೀರಿಸೋ ಶಿಷ್ಯರು ತುಂಬಾ ಕಡಿಮೆ. ಆದರೆ ಆ ಸಾಲಿಗೆ ಸೇರ್ತಿರೋ ಈ ನಿರ್ದೇಶಕ ಡೈರೆಕ್ಟ್ ಮಾಡಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್.ನಟ ವಿಜಯ್‌ರನ್ನೇ ಇಟ್ಕೊಂಡು ಹ್ಯಾಟ್ರಿಕ್ ಹಿಟ್ ಕೊಟ್ಟ ಈ ನಿರ್ದೇಶಕ, ಬಾಲಿವುಡ್‌ನಲ್ಲಿ ಮೊದಲ ಸಿನಿಮಾದಲ್ಲೇ 1000 ಕೋಟಿ ಗಳಿಸಿದ್ದಾರೆ. ಈ ಜೀರೋ ಫ್ಲಾಪ್ ನಿರ್ದೇಶಕನ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಆ ನಿರ್ದೇಶಕ ಬೇರೆ ಯಾರು ಅಲ್ಲ, ಅಟ್ಲೀ. ನಿಜವಾದ ಹೆಸರು ಅರುಣ್ ಕುಮಾರ್. ಸಿನಿಮಾ ನಿರ್ದೇಶಕ ಆಗಬೇಕು ಅಂತ 25ನೇ ವಯಸ್ಸಿಗೆ ಚೆನ್ನೈಗೆ ಬಂದ ಅಟ್ಲಿ, ಶಂಕರ್ ಹತ್ರ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ರು. ನಂತರ ಎಂದಿರನ್, ನನ್ಬನ್ ಸಿನಿಮಾಗಳಲ್ಲಿ ಕೆಲಸ ಮಾಡಿದ ಅಟ್ಲಿ, ಆಮೇಲೆ ತಮ್ಮದೇ ನಿರ್ದೇಶನದಲ್ಲಿ ಆರ್ಯ ಹಾಗೂ ನಯನತಾರಾ ನಟನೆಯ ರಾಜಾ ರಾಣಿ ಸಿನಿಮಾವನ್ನು ನಿರ್ದೇಶನ ಮಾಡಿದರು.
ಈ ಸಿನಿಮಾದಲ್ಲಿ ಮದುವೆ ನಂತರದ ಪ್ರೀತಿಯನ್ನ ತುಂಬಾ ಚೆನ್ನಾಗಿ ತೋರಿಸಿದ್ರು ಅಟ್ಲೀ. ರಾಜಾ ರಾಣಿ ಸಿನಿಮಾ ಸೂಪರ್ ಹಿಟ್ ಆಯ್ತು. ಮುಂದಿನ ಸಿನಿಮಾನೇ ಬಾಕ್ಸ್ ಆಫೀಸ್ ಕಿಂಗ್ ವಿಜಯ್ ಜೊತೆ. ವಿಜಯ್‌ರನ್ನ ಇಟ್ಕೊಂಡು ಮೊದಲು ಡೈರೆಕ್ಟ್ ಮಾಡಿದ್ದು ತೆರಿ ಸಿನಿಮಾ. ಸಮಂತಾ, ಎಮಿ ಜಾಕ್ಸನ್ ಈ ಸಿನಿಮಾದ ನಾಯಕಿಯರು. ಈ ಸಿನಿಮಾ 100 ಕೋಟಿ ಗಳಿಸಿತು.
ಅಟ್ಲೀ, ಶಾರುಖ್ ಖಾನ್
ತೆರಿ ಸಿನಿಮಾ ರಿಸಲ್ಟ್ ನೋಡಿ ವಿಜಯ್ ಇಂಪ್ರೆಸ್ ಆಗಿ, ಮೆರ್ಸಲ್ ಸಿನಿಮಾ ಡೈರೆಕ್ಟ್ ಮಾಡೋ ಚಾನ್ಸ್ ಕೊಟ್ರು. ಅದೂ ಸೂಪರ್ ಹಿಟ್ ಆಯ್ತು. ಮೂರನೇ ಸಿನಿಮಾ ಬಿಗಿಲ್. ಅದೂ ಹಿಟ್. ಹೀಗೆ ವಿಜಯ್-ಅಟ್ಲೀ ಹ್ಯಾಟ್ರಿಕ್ ಹಿಟ್ ಕಾಂಬಿನೇಷನ್ ಆಯ್ತು. ಬಿಗಿಲ್ ವಿಜಯ್‌ಗೆ 300 ಕೋಟಿ ಗಳಿಸಿಕೊಟ್ಟ ಮೊದಲ ಸಿನಿಮಾ.
ಪ್ರಿಯಾ, ಅಟ್ಲೀ
ನಾಲ್ಕು ಹಿಟ್ ಸಿನಿಮಾ ಕೊಟ್ಟರೂ, ಅಟ್ಲೀ ಮೇಲೆ ಒಂದು ಆರೋಪ ಇದೆ. ಅವರು ಕಥೆ ಕದಿಯುತ್ತಾರೆ ಅಂತ. ಮಣಿರತ್ನಂ ಅವರ ಮೌನರಾಗಂ ನಕಲು ರಾಜಾ ರಾಣಿ ಅಂತ, ತೆರಿ ವಿಜಯಕಾಂತ್‌ರ ಸತ್ರಿಯನ್ ನಕಲು ಅಂತ, ಮೆರ್ಸಲ್ ಅಪೂರ್ವ ಸಹೋದರರ್ಗಳ್‌ನ ನಕಲು, ಹಾಗೆಯೇ ಬಿಗಿಲ್ ಶಕ್ತಿ ಇಂಡಿಯಾ ಕಾಪಿ ಅಂತ ನೆಟ್ಟಿಗರು ಟ್ರೋಲ್ ಮಾಡಿದ್ದರು.
ಜವಾನ್ ಜೋಡಿ ಅಟ್ಲೀ, ಶಾರುಖ್
ಆದರೆ ತಮ್ಮ ವಿರುದ್ಧದ ಎಲ್ಲಾ ನಕರಾತ್ಮಕ ವಿಮರ್ಶೆಗಳನ್ನ ತಮ್ಮ ಯಶಸ್ಸಿನಿಂದಲೇ ಸರಿ ಮಾಡ್ತಾರೆ ಅಟ್ಲೀ. ಕಾಲಿವುಡ್‌ನಲ್ಲಿ ಗೆದ್ದ ಅಟ್ಲೀಗೆ ಬಾಲಿವುಡ್‌ನಿಂದ ಕರೆ ಬಂತು. ಶಾರುಖ್ ಖಾನ್ ಸಿನಿಮಾ ಡೈರೆಕ್ಟ್ ಮಾಡೋ ಚಾನ್ಸ್ ಸಿಕ್ತು. ಅದನ್ನ ಚೆನ್ನಾಗಿ ಉಪಯೋಗಿಸಿಕೊಂಡ ಅಟ್ಲಿ ಜವಾನ್ ಸಿನಿಮಾವನ್ನ ಸೂಪರ್ ಹಿಟ್ ಮಾಡಿದ್ರು. ಈಗ ಬಾಲಿವುಡ್‌ನಲ್ಲೂ ಬೇಡಿಕೆ ಇರೋ ನಿರ್ದೇಶಕ ಎನಿಸಿದ್ದಾರೆ ಅಟ್ಲಿ.
ಬಾಲಿವುಡ್‌ನಲ್ಲಿ ಮೊದಲ ಸಿನಿಮಾನೇ 1000 ಕೋಟಿ ಗಳಿಸಿದ್ದರಿಂದ ಸಂಭಾವನೆ ಜಾಸ್ತಿ ಮಾಡ್ಕೊಂಡ ಅಟ್ಲೀ ಈಗ ಒಂದು ಸಿನಿಮಾಗೆ 60 ಕೋಟಿ ತಗೋತಾರೆ. ನಿರ್ದೇಶಕರಾಗಿ ಮಾತ್ರ ಅಲ್ಲ, ನಿರ್ಮಾಪಕರಾಗಿಯೂ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬೇಬಿ ಜಾನ್ ಅನ್ನೋ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಇದು ತೆರಿ ಸಿನಿಮಾ ರಿಮೇಕ್. ಮುಂದಿನ ತಿಂಗಳು ರಿಲೀಸ್. 2014ರಲ್ಲಿ ಪ್ರಿಯಾ ಜೊತೆ ಮದುವೆ ಆಗಿರುವ ಅಟ್ಲಿಗೆ. 9 ವರ್ಷಗಳ ನಂತರ ಗಂಡು ಮಗು ಜನಿಸಿದ್ದು, ಮಗುವಿಗೆ ಮೀರ್ ಅಂತ ಹೆಸರಿಟ್ಟಿದ್ದಾರೆ.