ಜಾನ್ವಿ-ಖುಷಿ, ಆಲಿಯಾ-ಶಾಹೀನ್‌: ಬಾಲಿವುಡ್‌ನ ಫೇಮಸ್‌ ಸಿಬ್ಲಿಂಗ್‌ ಜೋಡಿ!

Suvarna News   | Asianet News
Published : Aug 24, 2021, 06:01 PM IST

ಜಾನ್ವಿ ಕಪೂರ್‌ ಮತ್ತು ಖುಷಿ ಕಪೂರ್‌, ಆಲಿಯಾ ಭಟ್‌ಮತ್ತು ಶಾಹೀನ್‌ ಭಟ್‌, ತಾಪ್ಸಿ ಪನ್ನು ಮತ್ತು ಶಗುನ್‌ ಪನ್ನು ಇವರೆಲ್ಲ ಬಾಲಿವುಡ್‌ನ ಫೇಮಸ್‌ ಸಿಬ್ಲಿಂಗ್ಸ್‌. ಇದರಲ್ಲಿ ಕೆಲವರು ಬಾಲಿವುಡ್‌ನಲ್ಲಿ ತಮ್ಮ ಕೆರಿಯರ್‌ ರೂಪಿಸಿಕೊಂಡಿದ್ದಾರೆ. ಇನ್ನೂ ಕೆಲವರು ಗ್ಲಾಮರ್‌ ಲೋಕದಿಂದ ದೂರ ಉಳಿದ್ದಾರೆ. ಇಲ್ಲಿದೆ ಮಾಹಿತಿ.

PREV
16
ಜಾನ್ವಿ-ಖುಷಿ, ಆಲಿಯಾ-ಶಾಹೀನ್‌: ಬಾಲಿವುಡ್‌ನ ಫೇಮಸ್‌ ಸಿಬ್ಲಿಂಗ್‌ ಜೋಡಿ!

ಆಲಿಯಾ ಭಟ್, ಶಾಹೀನ್ ಭಟ್ ಅವರಿಂದ ಜಾನ್ವಿ ಕಪೂರ್, ಖುಷಿ ಕಪೂರ್ ವರಗೆ ಅನೇಕ ಒಡ ಹುಟ್ಟಿದವರ ಜೋಡಿಗಳನ್ನು ಕಾಣಬಹುದು. ಇದರಲ್ಲಿ ಕೆಲವರು ಈಗಾಗಲೇ ಸಿನಿಮಾ ಮೂಲಕ ಹೆಸರು ಮಾಡಿದ್ದಾರೆ, ಇನ್ನೂ ಕೆಲವರು ಬಾಲಿವುಡ್‌ಗೆ ಎಂಟ್ರಿ ಕೊಡಲು ತಯಾರಾಗುತ್ತಿದ್ದಾರೆ. ಕೆಲವರು ಸಿನಿಮಾದಿಂದ ದೂರ ಉಳಿದು ಬೇರೆ ಕೆರಿಯರ್‌ ರೂಪಿಸಿಕೊಂಡಿದ್ದಾರೆ.

26

ಆಲಿಯಾ ಭಟ್, ಶಾಹೀನ್ ಭಟ್:
ಮಹೇಶ್‌ ಭಟ್‌ ಮಕ್ಕಳಾದ ಆಲಿಯಾ ಶಾಹೀನ್‌ ಬಾಲಿವುಡ್‌ನ ಫೇಮಸ್‌ ಅಕ್ಕತಂಗಿಯರು.ತನ್ನ ಕ್ಯೂಟ್‌ ಲುಕ್‌ ಹಾಗೂ ಆಭಿನಯದಿಂದ ಜನರ ಮನಗೆದ್ದಿರುವ ಆಲಿಯಾ ದೊಡ್ಡ ಸೂಪರ್ ಸ್ಟಾರ್. ಆದರೆ ಆಲಿಯಾರ ಸಹೋದರಿ ಶಾಹೀನ್ ಭಟ್‌ ಗ್ಲಾಮ್ ಇಂಡಸ್ಟ್ರಿಯಿಂದ ದೂರವಾಗಿದ್ದಾರೆ. ಬರವಣಿಗೆ ಮತ್ತು ಬೌದ್ಧಿಕ ವಿಷಯಗಳ ಒಲವು ಹೊಂದಿರುವ ಶಾಹೀನ್‌ ಅವುಗಳಿಗಾಗಿ ತನ್ನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.


 

36

ರಿಯಾ ಕಪೂರ್ ಮತ್ತು ಸೋನಮ್ ಕಪೂರ್:
ಕೆಲವು ದಿನಗಳ ಹಿಂದೆ ತಮ್ಮ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅನಿಲ್‌ ಕಪೂರ್‌ ಎರಡನೇ ಪುತ್ರಿ ರಿಯಾ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಅನಿಲ್‌ ಕಪೂರ್‌ ಹಿರಿಯ ಮಗಳು ಕಮ್‌ ನಟಿ ಸೋನಮ್‌ ಕಪೂರ್‌ ಬಾಲಿವುಡ್‌ನ ಫ್ಯಾಷನ್ ಐಕಾನ್ ಎಂದೇ ಫೇಮಸ್‌. ಅಕ್ಕ ತೆರೆಯ ಮೇಲೆ ಮಿಂಚಿದರೆ, ತಂಗಿ ರಿಯಾ ಕಪೂರ್‌ ಸಿನಿಮಾಗಳನ್ನು ನಿರ್ಮಿಸುತ್ತಾರೆ. ಜೊತಗೆ ಸೋನಮ್‌ ಸಹೋದರಿ ರಿಯಾ ಫ್ಯಾಶನ್ ಡಿಸೈನರ್ ಕೂಡ ಹೌದು.

46

ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್:
ದಿವಗಂತ ಸೂಪರ್‌ಸ್ಟಾರ್‌ ಶ್ರೀದೇವಿ ಅವರ ಪುತ್ರಿರಾದ ಜಾನ್ವಿ ಹಾಗೂ ಖುಷಿ ಕಪೂರ್ ಫ್ಯಾನ್ಸ್‌ ಫೇವರೇಟ್‌ ಸಹೋದರಿಯರು. ಇವರಿಬ್ಬರ ಜೊತೆಯಾಗಿ ಎಂಜಾಯ್‌ ಮಾಡುವ ಹಾಲಿಡೇ, ಪಾರ್ಟಿ, ಶಾಪಿಂಗ್‌ ಫೋಟೋಗಳು
ಆಗಾಗ ವೈರಲ್‌ ಆಗುತ್ತಿರುತ್ತವೆ. ಈಗಾಗಲೇ ನಟಿಯಾಗಿ  ಜಾನ್ವಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಖುಷಿ ಕಪೂರ್‌ ಇನ್ನೂ ಬಾಲಿವುಡ್‌ಗೆ ಕಾಲಿಟ್ಟಿಲ್ಲ.

56

ಇಬ್ರಾಹಿಂ ಖಾನ್ ಮತ್ತು ಸಾರಾ ಅಲಿ ಖಾನ್:
ಅಮೃತಾ ಸಿಂಗ್‌ ಹಾಗೂ ಸೈಫ್‌ ಆಲಿ ಖಾನ್‌ರ ಮಕ್ಕಳಾದ ಇಬ್ರಾಹಿಂ ಮತ್ತು ಸಾರಾ ಬಾಲಿವುಡ್‌ನ ಫೇಮಸ್‌ ಸಿಬ್ಲಿಂಗ್ಸ್. ಇವರಿಬ್ಬರ 'ನಾಕ್-ನಾಕ್- ಜೋಕ್‌ಗಳು ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಸಾರಾ ಈಗಾಗಲೇ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿಯಾದರೆ, ಆರ್ಚೀಸ್ ಕಾಮಿಕ್ಸ್‌ನಿಂದ ಸ್ಫೂರ್ತಿ ಪಡೆದ ಜೊಯಾ ಅಖ್ತರ್‌ನ ಒಟಿಟಿ ಡಿಜಿಟಲ್ ವೆಬ್ ಸರಣಿಯೊಂದಿಗೆ ಇಬ್ರಾಹಿಂ ಪಾದಾರ್ಪಣೆ ಮಾಡಲಿದ್ದಾರೆ.


 


 

66

ತಾಪ್ಸಿ ಪನ್ನು ಮತ್ತು ಶಗುನ್ ಪನ್ನು:
ತಾಪ್ಸಿ ಮತ್ತು ಶಗುನ್ ಬಾಲಿವುಡ್‌ನ ಮತ್ತೊಂದು ಸುಂದರ ಸಹೋದರಿ ಜೋಡಿ. ಅವರಿಬ್ಬರೂ ತಮ್ಮ ಹಾಲಿಡೇ ಫೋಟೋಗಳೊಂದಿಗೆ ತಮ್ಮ ಅಭಿಮಾನಿಗಳನ್ನು ವಿಸ್ಮಯಗೊಳಿಸುತ್ತಾರೆ. ಶಗುನ್ ಬಾಲಿವುಡ್‌ನಲ್ಲಿಲ್ಲ, ಆದರೆ
ಅವಳು ಯಾವಾಗಲೂ ಈ ಸಹೋದರಿಯರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.   
 

click me!

Recommended Stories