ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 14, 2022 ರಂದು ವಿವಾಹವಾದರು. ಐದು ವರ್ಷಗಳಿಂದ ಡೇಟ್ ಮಾಡಿದ ಈ ಜೋಡಿಗೆ ಈ ವರ್ಷ ಮದುವೆಯಾಗಿದ್ದಾರೆ ಮತ್ತು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಲಿಯಾ ಗರ್ಭಿಣಿಯಾಗುವುದರ ಜೊತೆಗೆ ತನ್ನ ಮೊದಲ ಕರ್ವಾ ಚೌತ್ ಅನ್ನು ಆಚರಿಸುತ್ತಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9, 2021 ರಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಇವರು ಬಾಲಿವುಡ್‌ನ ಫೇವರೇಟ್ ಜೋಡಿಗಳು ಎಂದು ಹೇಳಲಾಗುತ್ತದೆ. ಈ ವರ್ಷ ದಂಪತಿಗಳ ಮೊದಲ ಕರ್ವಾ ಚೌತ್ ಆಗಿದೆ.
ಈ ವರ್ಷ ಮೊದಲ ಬಾರಿಗೆ ಕರ್ವಾ ಚೌತ್ ವೃತ ಆಚರಿಸುವ ಜೋಡಿಗಳಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಪ್ರಮುಖರು. ಅಂಕಿತಾ ಮತ್ತು ವಿಕ್ಕಿ ಅವರು ಡಿಸೆಂಬರ್ 14, 2021 ರಂದು ಗ್ರ್ಯಾಂಡ್ ಸಮಾರಂಭದಲ್ಲಿ ವಿವಾಹವಾದರು.
ಹಿಮಾಚಲ ಪ್ರದೇಶದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ ಸಂಪ್ರದಾಯದ ಪ್ರಕಾರ ವಿವಾಹವಾದರು. ಸುಮಾರು 7 ವರ್ಷಗಳ ಕಾಲ ಡೇಟಿಂಗ್ ಮಾಡಿ ವಿವಾಹವಾದ ಈ ಜೋಡಿಗೆ ಮೊದಲ ಕರ್ವಾ ಚೌತ್ ಆಗಿದೆ. ಈ ವರ್ಷ ಫೆಬ್ರವರಿ 14 ರಂದು ವಿಕ್ರಾಂತ್ ಮತ್ತು ಶೀತಲ್ ಠಾಕೂರ್ ಕಾನೂನುಬದ್ಧವಾಗಿ ವಿವಾಹವಾದರು.
ಫೆಬ್ರವರಿ 5, 2022 ರಂದು ಉದ್ಯಮಿ ಮತ್ತು ಪ್ರಾಪರ್ಟಿ ಡೆವಲಪರ್ ವರುಣ್ ಬಂಗೇರಾ ಅವರನ್ನು ವಿವಾಹವಾದ ನಟಿ ಕರಿಷ್ಮಾ ತನ್ನಾ ಅವರಿಗೆ ಸಹ ಈ ಬಾರಿ ಮೊದಲ ಕರ್ವಾ ಚೌತ್ ಆಗಿದೆ.
ಶಿಬಾನಿ ದಾಂಡೇಕರ್ ಮತ್ತು ಫರ್ಹಾನ್ ಅಖ್ತರ್ ಫೆಬ್ರವರಿ 19 ರಂದು ವಿವಾಹವಾದರು. ಶಿಬಾನಿ ದಾಂಡೇಕರ್ ಕೂಡ ಈ ವರ್ಷ ತನ್ನ ಮೊದಲ ಕರ್ವಾ ಚೌತ್ ಆಚರಿಸುತ್ತಿದ್ದಾರೆ.
ನಟಿ ಮೌನಿ ರಾಯ್ ಅವರು ಜನವರಿ 27, 2022 ರಂದು ಭಾರತೀಯ ಶ್ರೀಮಂತ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿದ್ದಾರೆ. ಮೌನಿ ರಾಯ್ ಸಹ ತನ್ನ ಮೊದಲ ಕರ್ವಾ ಚೌತ್ ಆಚರಿಸಲಿದ್ದಾರೆ.
ದೂರದರ್ಶನ ನಟಿ ಪೂಜಾ ಬ್ಯಾನರ್ಜಿ 2020 ರಲ್ಲಿ ವಿವಾಹವಾದರೂ, ಆದರೆ ಅವರು ಸಂಪ್ರದಾಯವನ್ನು ಅನುಸರಿಸಿ 2021 ರಲ್ಲಿ ಮತ್ತೆ ವಿವಾಹವಾದರು. ಪೂಜಾ ಬ್ಯಾನರ್ಜಿ ಈ ವರ್ಷವೂ ತಮ್ಮ ಮೊದಲ ಕರ್ವಾ ಚೌತ್ ಆಚರಿಸಿದರು.