ಗಂಗುಬಾಯಿ ಕಥಿಯಾವಾಡಿ - ಸೆಲಬ್ರೆಟಿಗಳಿಂದ ಆಲಿಯಾಗೆ ಮೆಚ್ಚುಗೆ ಸುರಿಮಳೆ!
First Published | Feb 26, 2021, 3:36 PM ISTಆಲಿಯಾ ಭಟ್ ಅಭಿನಯದ ಸಂಜಯ್ ಲೀಲಾ ಭನ್ಸಾಲಿಯ ಗಂಗುಬಾಯಿ ಕಥಿಯಾವಾಡಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಹಿಡಿದು ಅನೇಕ ಸೆಲೆಬ್ರೆಟಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ, ಆಲಿಯಾ ಭಟ್ ಕಾಮತಿಪುರದ ರಾಣಿಯಾದ ಗಂಗುಬಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಗ್ರ, ಫವರ್‌ಫುಲ್ ಮಹಿಳೆಯಾಗಿ ಆಲಿಯಾರ ಅದ್ಭುತ ಅಭಿನಯಕ್ಕೆ ಅಭಿಮಾನಿಗಳು, ಸೆಲೆಬ್ರೆಟಿಗಳ ಜೊತೆ ಮತ್ತು ನೆಟಿಜನ್ಸ್ ಸಹ ಹೊಗಳುತ್ತಿದ್ದಾರೆ. ಆಲಿಯಾರ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?