ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರೀಕರಣದಿಂದಲೇ ಇಬ್ಬರು ಡೇಟಿಂಗ್ ನಲ್ಲಿದ್ದರು. ಆಲಿಯಾ ಮತ್ತು ರಣಬೀರ್ ಮದುವೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗಲೇ ಗಂಗೂಬಾಯಿ ಕಥಿಯಾವಾಡಿ ನಟಿ ಆಲುಯಾ ಒಪ್ಪಿಕೊಂಡಿದ್ದಾರೆ.
ಆಲಿಯಾ ಉಟ್ಟ ಸೀರೆ ಬೆಲೆ ಅಬ್ಬಬ್ಬಾ
ರಾಜೀವ್ ಮಸಂದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದ ಆಲಿಯಾ, ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮದುವೆಗಳು ಹೇಗೆ ಆಗುತ್ತಿವೆ ಎನ್ನುವುದು ನಿಮ್ಮೆಲ್ಲರಿಗೆ ಗೊತ್ತು. ಕೊರೋನಾ ಬರದಿದ್ದರೆ ಈಗಾಗಲೇ ಮದುವೆ ಆಗಿರುತ್ತಿದ್ದೇವು ಎಂದು ಹೇಳಿದ್ದರು.
ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಆಲಿಯಾಗೆ ಪ್ರಪೋಸ್ ಮಾಡಿದ್ದ ಕಪೂರ್ 'ಹಮಾರಿ ಶಾದಿ ಕಬ್ ಹೋಗಿ ಅಲಿಯಾ?' ಎಂದಿದ್ದರು. ಬ್ರಹ್ಮಾಸ್ತ್ರ ಟ್ರೈಲರ್ ಲಾಂಚ್ ವೇಳೆ ಪ್ರಪೋಸ್ ಮಾಡಿದ್ದರು.
ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿನ ಆಲಿಯಾ ಮದುವೆ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಮದುವೆಯಾಗಿ ಈಗಾಗಲೇ ನಾಲ್ಕು ವರ್ಷ ಕಳೆದಿದೆ ಎಂದಿದ್ದಾರೆ.
ಇಬ್ಬರಿಗೂ ಅವರಿಬ್ಬರ ಕುಟುಂಬಗಳ ಆಶೀರ್ವಾದವಿದೆ - ಸೋನಿ ರಜ್ದಾನ್, ಆಲಿಯಾಳ ತಾಯಿ, ರಣಬೀರ್ ಅನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅದೇ ರೀತಿ, ರಣಬೀರ್ ಅವರ ತಾಯಿ ನೀತು ಕಪೂರ್ ಗೆ ಆಲಿಯಾ ಮೇಲಿದೆ.
ಹಾಗಾದರೆ ಈಗ ಪರಿಸ್ಥಿತಿ ಸುಧಾರಿಸಿದ್ದು ಇನ್ನೊಮ್ಮೆ ಅದ್ದೂರಿ ವಿವಾಹ ಅಭಿಮಾನಿಗಳಿಗಾಗಿ ಏರ್ಪಡಿಸುತ್ತಿರೋ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರ ಸಿಗಲಿಲ್ಲ.
ಒಂದು ಕಡೆ ರಣಬೀರ್ ಕಪೂರ್ ಅವರ ಶಂಶೇರಾ ಜುಲೈ 22, 2022 ರಂದು ಬಿಡುಗಡೆಯಾಗಲಿದೆ. ಇನ್ನೊಂದು ಕಡೆ ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಫೆಬ್ರವರಿ 25 ರಂದು ಬೆಳ್ಳಿ ಪರದೆ ಮೇಲೆ ಬರಲಿದೆ.