ಟೀನಾ ಮುನಿಮ್ ಮತ್ತು ಸಂಜಯ್ ದತ್ ಬಾಲ್ಯದಿಂದಲೂ ಸ್ನೇಹಿತರು. ಇಬ್ಬರೂ ಮೊದಲ ಬಾರಿಗೆ ರಾಕಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇದು ಸಂಜಯ್ ಅವರ ಮೊದಲ ಚಿತ್ರವಾಗಿದ್ದು, ಟೀನಾ ಈ ಮೊದಲು ಕೆಲವು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ರಾಕಿ ಚಿತ್ರದ ಶೂಟಿಂಗ್ ವೇಳೆ ಟೀನಾ-ಸಂಜಯ್ ಪರಸ್ಪರ ಹತ್ತಿರವಾಗಿದ್ದರು.
'ನಾನು ಟೀನಾಳನ್ನು ಪ್ರೀತಿಸುತ್ತಿದ್ದೆ. ನನ್ನ ಅನ್‌ಸ್ಕ್ರೀನ್ ಕೆಮಿಸ್ಟ್ರಿಯನ್ನು ಬಹಿರಂಗಪಡಿಸಲು ನಾನು ಬಯಸಲಿಲ್ಲ. ನಾನು ತುಂಬಾ ಸ್ವಾರ್ಥಿಯಾಗಿದ್ದೆ. ಟೀನಾ ನನ್ನನ್ನು ಎಂದಿಗೂ ತನ್ನ ಕುಟುಂಬದಿಂದ ದೂರಮಾಡಲಿಲ್ಲ. ನನ್ನ ಪ್ರೀತಿಪಾತ್ರರೊಡನೆ ಯಾವಾಗಲೂ ಸಂಪರ್ಕ ಹೊಂದಲು ಮತ್ತು ಯಾವಾಗಲೂ ಕುಟುಂಬದೊಂದಿಗೆ ಇರಬೇಕೆಂದು ನನಗೆ ಕಲಿಸಿದವರಲ್ಲಿ ಅವಳು ಒಬ್ಬಳು' ಎಂದು ಸಂಜಯ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದರೂ ಸಂಜಯ್ ಮಾತ್ರ ಮಾದಕ ವ್ಯಸನಿಯಾಗಿದ್ದರಿಂದ ಟೀನಾ ದೂರವಾದರು. ಒಮ್ಮೆ ಟೀನಾ ಸಂಜಯ್ ರೂಮಿಗೆ ಹೋದಾಗ ಅವನು ಕುಡಿದಿದ್ದನ್ನು ನೋಡಿ ಗಾಬರಿಯಾದರು. ಟೀನಾಗೆ ಸಂಜಯ್ ಬಗ್ಗೆ ಸಾಕಷ್ಟು ತಿಳಿದಿತ್ತು ಆದರೆ ಅವರು ಡ್ರಗ್ಸ್ ಸೇವಿಸುತ್ತಾರೆ ಎಂದು ತಿಳಿದಿರಲಿಲ್ಲ.
ಕೋಪದಿಂದ ಸಂಜಯ್ ಅಲ್ಲೇ ಇಟ್ಟಿದ್ದ ಬಾಟಲಿಯನ್ನು ಒಡೆದು ಮಣಿಕಟ್ಟು ಸೀಳಿಕೊಂಡಿದ್ದರು. ಟೀನಾ ಕಿರುಚುತ್ತಾ ಹೊರಗೆ ಓಡಿದರು. ಟೀನಾ ಸಂಜಯ್‌ನಿಂದ ದೂರವಾಗಲು ನಿರ್ಧರಿಸಿದ ಕ್ಷಣ ಇದಾಗಿತ್ತು. ಆದರೆ ಟೀನಾರ ಈ ನಿರ್ಧಾರವನ್ನು ಸಂಜಯ್ ಸಹಿಸಲಾಗಲಿಲ್ಲ.
ಯಾಸಿರ್ ಉಸ್ಮಾನ್ ಅವರ ಪುಸ್ತಕ ಸಂಜಯ್ ದತ್: ದಿ ಕ್ರೇಜಿ ಅನ್‌ಟೋಲ್ಡ್ ಲವ್ ಸ್ಟೋರಿ ಆಫ್ ಬಾಲಿವುಡ್ ಬ್ಯಾಡ್ ಬಾಯ್‌ನಲ್ಲಿ ಟೀನಾ ಸಂಜಯ್‌ನನ್ನು ತೊರೆದಾಗ, ಅವರು ತನ್ನ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ಸಂಜಯ್ ದತ್ ಮದ್ಯದ ಅಮಲಿನಲ್ಲಿ ಕೈಯಲ್ಲಿ ಬಂದೂಕು ಹಿಡಿದು ಮಧ್ಯರಾತ್ರಿ ರಸ್ತೆಯಲ್ಲಿ ಗುಂಡು ಹಾರಿಸುತ್ತಲೇ ಓಡಿದ್ದರು. ಇದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಕಾಲ್ ಮಾಡಿದ್ದರು.
ಟೀನಾ ಸಂಜಯ್ ಅವರನ್ನು ತೊರೆದರು ಮತ್ತು ಸಂಜಯ್‌ನಿಂದ ಬೇರ್ಪಟ್ಟ ನಂತರ ಟೀನಾ ರಾಜೇಶ್ ಖನ್ನಾ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ ಈ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ. ರಾಜೇಶ್ ಖನ್ನಾ ಮದುವೆಯಾಗಿದ್ದು, ಪತ್ನಿ ಡಿಂಪಲ್ ಕಪಾಡಿಯಾ ಅವರನ್ನು ಬಿಡಲು ಇಷ್ಟವಿರಲಿಲ್ಲ. ಇದರಿಂದ ಟೀನಾ ಮತ್ತು ರಾಜೇಶ್ ಸಂಬಂಧವೂ ಹಳಸಿತ್ತು. ಅಂತಿಮವಾಗಿ ಟೀನಾ ಉದ್ಯಮಿ ಅನಿಲ್ ಅಂಬಾನಿ ಅವರನ್ನು ವಿವಾಹವಾದರು.
ಟೀನಾ 1978 ರಲ್ಲಿ ದೇಶ್ ಪರದೇಶ್ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಅವರು ಬಾತೋ ಬಾತ್ ಮೇ, ಕರ್ಜ್, ಆಪ್ಕೆ ದೀವಾನೆ, ಖುದಾ ಕಸಮ್, ಯೇ ವಾದ ರಹಾ, ರಜಪೂತ್, ಕ್ಲೂ, ಬಡೇ ದಿಲ್ ವಾಲಾ, ಪುಕಾರ್, ಅಲಗ್ ಡಿಫರೆಂಟ್, ವಾರ್, ಅಧಿಕಾರ್ ಮುಂತಾದ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು ಕೊನೆಯದಾಗಿ 1991 ರ ಜಿಗರ್ವಾಲಾ ಸಿನಿಮಾದಲ್ಲಿ ಕಾಣಿಸಿಕೊಂಡರು.