ನಂದಮೂರಿ ಬಾಲಕೃಷ್ಣ ನಾಯಕರಾಗಿ ನಟಿಸಿರುವ 'ಅಖಂಡ 2' ಸಿನಿಮಾ ಮುಂದೂಡಲ್ಪಟ್ಟಿದ್ದು ಗೊತ್ತೇ ಇದೆ. ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಎಲ್ಲರೂ ನಿರೀಕ್ಷಿಸಿದ ದಿನಾಂಕದಂದೇ ಸಿನಿಮಾ ಬರುತ್ತಿದೆ.
ಬಾಲಕೃಷ್ಣ ನಟನೆಯ 'ಅಖಂಡ 2' ಬೋಯಪಾಟಿಯ ನಿರ್ದೇಶನದ ಚಿತ್ರ. ಕಳೆದ ವಾರ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಆರ್ಥಿಕ ಸಮಸ್ಯೆಯಿಂದ ಮುಂದೂಡಲಾಗಿತ್ತು. ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್, ಈರೋಸ್ ಇಂಟರ್‌ನ್ಯಾಷನಲ್‌ಗೆ ಸುಮಾರು 28 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು.
24
'ಅಖಂಡ 2' ಸಮಸ್ಯೆ ಬಗೆಹರಿಯಿತು
'ಅಖಂಡ 2' ರಿಲೀಸ್ ಹೊತ್ತಲ್ಲೇ ಹಣ ವಸೂಲಿಗೆ ಈರೋಸ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದ ಸಿನಿಮಾ ಮುಂದೂಡಲಾಯ್ತು. ಮಾತುಕತೆ ವಿಫಲವಾಗಿ, ಬಾಕಿ ಮೊತ್ತ 50 ಕೋಟಿ ಎಂದು ತಿಳಿದುಬಂತು. ಟಾಲಿವುಡ್‌ನ ದೊಡ್ಡ ನಿರ್ಮಾಪಕರು ಮಧ್ಯಪ್ರವೇಶಿಸಿದರೂ ಸಮಸ್ಯೆ ಬಗೆಹರಿಯಲಿಲ್ಲ.
34
'ಅಖಂಡ 2' ಹೊಸ ಬಿಡುಗಡೆ ದಿನಾಂಕ
ಕೋರ್ಟ್‌ನಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಮಾತುಕತೆ ಯಶಸ್ವಿಯಾಗಿದೆ. ಚಿತ್ರತಂಡ ಹೊಸ ರಿಲೀಸ್ ದಿನಾಂಕ ಪ್ರಕಟಿಸಿದ್ದು, ಇದೇ ತಿಂಗಳು 12ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. 11ಕ್ಕೆ ಪ್ರೀಮಿಯರ್ ಶೋ ಇರಲಿದೆ. 'ಅಖಂಡ 2' ಬರುವುದರಿಂದ ಬೇರೆ ಚಿತ್ರಗಳಿಗೆ ಹೊಡೆತ ಬಿದ್ದಿದೆ.
ಬಾಲಯ್ಯ ನಟನೆಯ, ಬೋಯಪಾಟಿ ನಿರ್ದೇಶನದ 'ಅಖಂಡ 2 ತಾಂಡವಂ' ಚಿತ್ರದಲ್ಲಿ ಆದಿ ಪಿನಿಶೆಟ್ಟಿ ವಿಲನ್, ಸಂಯುಕ್ತಾ ನಾಯಕಿ. ಇದು 'ಅಖಂಡ' ಚಿತ್ರದ ಸೀಕ್ವೆಲ್ ಆಗಿದ್ದು, ಶಿವತತ್ವ, ಹಿಂದೂ ಧರ್ಮದ ಹಿರಿಮೆಯನ್ನು ಸಾರುವ ಕಥಾಹಂದರ ಹೊಂದಿದೆ.