Ponniyin Selvan; ಐಶ್ವರ್ಯಾ ಲುಕ್‌ಗೆ ಫ್ಯಾನ್ಸ್ ಫಿದಾ, ಉಳಿದವರ ಗೆಟಪ್ ಹೇಗಿದೆ?

First Published | Jul 7, 2022, 4:09 PM IST


ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ಇದೀಗ ಭಾರಿ ನೀರಿಕ್ಷೆ ಹುಟ್ಟುಹಾಕಿದೆ. ದೊಡ್ಡ ತಾರಾಬಳಕ ಇರುವ ಈ ಸಿನಿಮಾದ ಆಕರ್ಷಕ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. 
 

ಸೌತ್ ಸಿನಿಮಾರಂಗದಲ್ಲಿ ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಆರ್ ಆರ್ ಆರ್, ಕೆಜಿಎಫ್, 777 ಚಾರ್ಲಿ ಬಳಿಕ ಇದೀಗ ಮತ್ತೊಂದು ಸಿನಿಮಾ ಬಿಡುಗೆಡೆಗೆ ಸಜ್ಜಾಗಿದ್ದು ಸದ್ಯ ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿದೆ. 
 

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ಇದೀಗ ಭಾರಿ ನೀರಿಕ್ಷೆ ಹುಟ್ಟುಹಾಕಿದೆ. ದೊಡ್ಡ ತಾರಾಬಳಕ ಇರುವ ಈ ಸಿನಿಮಾದ ಆಕರ್ಷಕ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. 

Tap to resize

ಪೊನ್ನಿಯನ್ ಸೆಲ್ವನ್ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಇದೊಂದು ಇತಿಹಾಸಹ ಘಟನೆ ಆಧಾರಿತ ಸಿನಿಮಾವಾಗಿದ್ದು ಸದ್ಯ ರಿಲೀಸ್ ಆಗಿರುವ ಕಲಾವಿದರ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿವೆ. 

ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ನಟಿ ತ್ರಿಷಾ, ನಟ ಕಾರ್ತಿ, ಜಯಂ  ರವಿ, ವಿಕ್ರಮ್, ಶೋಭಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಈಗಾಗಲೇ ಇವರೆಲ್ಲರ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಂದಹಾಗೆ ಸಿನಿಮಾ ಚೋಳರ ಸಾಮ್ರಜ್ಯದ ಬಗ್ಗೆ ಇರುವ ಚಿತ್ರವಾಗಿದೆ. ನಟ ವಿಕ್ರಮ್, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಜಯಂ ರವಿ ರಾಜ ರಾಜ ಜೋಳ ಪಾತ್ರದಲ್ಲಿ ಮಿಂಚಿದ್ದಾರೆ.  ನಟ ಕಾರ್ತಿ ವಲ್ಲವರಾಯನ್ ವಂಗಿಯಾದೇವನ್ ಪಾತ್ರ ಮಾಡಿದ್ದಾರೆ. 

ನಟಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರ ಸಾರಾ ಅರ್ಜುನ್ ಪಾತ್ರದಲ್ಲಿ ಮಿಂಚಿದ್ದಾರೆ. ನಟಿ ತ್ರಿಷಾ ಕುಂದವೈ ಪಿರಟ್ಟಿಯಾರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ನಟಿ ಶೋಭಿತಾ ನಾವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 

ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಶರತ್ ಕುಮಾರ್, ಪ್ರಭು, ಪ್ರಕಾಶ್ ರಾಜ್, ಪಾರ್ಥಿಬನ್, ವಿಕ್ರಮ್ ಪ್ರಭು ಸೇರಿದಂತೆ ಸಾಕಷ್ಟು ದೊಡ್ಡ ಕಲಾವಿದರು ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೆಪ್ಟಂಬರ್ 30ರಂದು ತೆರೆಗೆ ಬರುತ್ತಿದೆ.

Latest Videos

click me!