ಬದುಕುಳಿಯಲು ವಿಮಾನದಲ್ಲಿ ಅಂಟಿಕೊಳ್ಳುವ ಪ್ರತಿ ಅಫ್ಘಾನ್ ವ್ಯಕ್ತಿಯಲ್ಲಿ ನಾನು ನನ್ನನ್ನು ನೋಡಿದೆ. ಅವರಂತೆಯೇ ನನ್ನ ಜೀವನವೂ ಯುದ್ಧ-ಪೀಡಿತ ದೇಶದಿಂದ ವಲಸೆ ಬಂದ ಪರಿಣಾಮವಾಗಿದೆ. ನನ್ನ ಕುಟುಂಬವು ಉತ್ತಮ ಜೀವನಕ್ಕಾಗಿ ದೇಶದಿಂದ ದೇಶಕ್ಕೆ ಸ್ಥಳಾಂತರಗೊಂಡಿತು. ಅಂತಿಮವಾಗಿ, ನಾವು ಭಾರತಕ್ಕೆ ಬಂದೆವು, ನಮ್ಮನ್ನು ಉದಾರ ಮತ್ತು ಪ್ರೀತಿಯ ದೇಶ ಸ್ವಾಗತಿಸಿತು. ನಾವು ಅದನ್ನು ನಮ್ಮ ಮನೆಯನ್ನಾಗಿಸಿಕೊಂಡೆವು ಎಂದಿದ್ದಾರೆ