ತಾಯಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀಲೀಲಾ: ಕಿಸ್ ಬೆಡಗಿ ಹಣೆ ಮೇಲೆ ನಾಮ ಎಳೆದವರು ಯಾರು?

Published : Feb 20, 2024, 12:30 AM IST

ಟಾಲಿವುಡ್​ನಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಶ್ರೀಲೀಲಾ ತಿರುಮಲದಲ್ಲಿ ಶ್ರೀಗಳ ಆಶೀರ್ವಾದ ಪಡೆದರು. ಜೊತೆಗೆ ಕುಟುಂಬ ಸದಸ್ಯರೊಂದಿಗೆ ಸ್ವಾಮಿ ವೆಂಕಟೇಶ್ವರನ ದರ್ಶನವನ್ನು ಪಡೆದರು.

PREV
17
ತಾಯಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀಲೀಲಾ: ಕಿಸ್ ಬೆಡಗಿ ಹಣೆ ಮೇಲೆ ನಾಮ ಎಳೆದವರು ಯಾರು?

ಕಿಸ್ ಬೆಡಗಿ ಶ್ರೀಲೀಲಾ ತನ್ನ ತಾಯಿಯ ಜೊತೆ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ ವಿಐಪಿ ವಿರಾಮದ ವೇಳೆ ಕುಟುಂಬ ಸದಸ್ಯರೊಂದಿಗೆ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದ್ದಾರೆ.

27

ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ವೇದ ವಿದ್ವಾಂಸರು ವೇದಾಶಿರ್ವಚನ ನೀಡಿ, ದೇವಸ್ಥಾನದ ಅಧಿಕಾರಿಗಳು ಶ್ರೀವಾರಿ ತೀರ್ಥ ಪ್ರಸಾದವನ್ನು ನೀಡಿದರು. ನಂತರ ದೇವಸ್ಥಾನದ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಲೀಲಾ ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು ತುಂಬಾ ಸಂತೋಷ ತಂದಿದೆ ಎಂದರು.

37

ಭಾನುವಾರ ರಾತ್ರಿ ತಿರುಮಲದಲ್ಲೇ ನಟಿ ಶ್ರೀಲೀಲಾ ತಂಗಿದ್ದರು. ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದು, ಪ್ರಸಾದ ಸೇವಿಸಿ ವಾಪಸ್ ತೆರಳಿದ್ದಾರೆ. ಇನ್ನು ದೇವಸ್ಥಾನದಲ್ಲಿ ಶ್ರೀಲೀಲಾ ಕಂಡು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.

47

ಶ್ರೀಲೀಲಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಟಾಲಿವುಡ್‌ನಲ್ಲಿ ದೊಡ್ಡ ಹೀರೋಗಳ ಜೊತೆ ಶ್ರೀಲೀಲಾ ಅವಕಾಶ ಗಿಟ್ಟಿಸಿಕೊಂಡರು. ಬಾಲಯ್ಯ ಜೊತೆಗಿನ ಭಗತ್ ಕೇಸರಿ ಮತ್ತು ಮಹೇಶ್ ಜೊತೆಗಿನ ಗುಂಟೂರು ಖಾರಂ ಹಿಟ್ ಆಗಿದೆ.

57

ಶ್ರೀಲೀಲಾ ಕನ್ನಡದಲ್ಲಿ ಕಿಸ್‌ ಚಿತ್ರದ ಬಳಿಕ, ಭರಾಟೆ, ಬೈಟು ಲವ್‌ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿ ಪೆಲ್ಲಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಟಿ, ಇದೀಗ ಸಾಲು ಸಾಲು ತೆಲಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

67

ಇತ್ತೀಚೆಗೆ ನಟಿ ಶ್ರೀಲೀಲಾ ನಟ ಮಹೇಶ್ ಬಾಬು ಜೊತೆಗೆ ತೆರೆ ಹಂಚಿಕೊಂಡಿದ್ದರು. ಗುಂಟೂರು ಖಾರಂ ಸಿನಿಮಾದಲ್ಲಿನ ಅವರ ಅಭಿನಯ ಮತ್ತು ಡ್ಯಾನ್ಸ್ ನೋಡಿ ಅಭಿಮಾನಿಗಳಂತೂ ಶಾಕ್ ಆಗಿದ್ದರು. ಮಹೇಶ್ ಬಾಬುಗೆ ಟಕ್ಕರ್ ಕೊಡುವಂತೆ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದರು.

77

ಸದ್ಯ ಭಗವಂತ ಕೇಸರಿ ಚಿತ್ರದ ಯಶಸ್ಸಿನೊಂದಿಗೆ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಒಂದೂವರೆ ಕೋಟಿವರೆಗೂ ತೆಗೆದುಕೊಂಡ ಶ್ರೀಲೀಲಾ, ಮುಂದಿನ ಚಿತ್ರಗಳಿಗೆ ರೂ. 3 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories