'ನನ್ನೆಲ್ಲ ಒಳ್ಳೆ ನಿರ್ಧಾರಗಳಿಗೆ ಮುಖವಿದ್ದಿದ್ದರೆ..' ಬೆಸ್ಟೀ ಹೊಗಳಿದ ಸಮಂತಾ

First Published | Feb 19, 2024, 1:54 PM IST

'ನನ್ನೆಲ್ಲ ಒಳ್ಳೆ ನಿರ್ಧಾರಗಳಿಗೆ ಮುಖವಿದ್ದಿದ್ದರೆ..' ಎಂದು ನಟಿ ಸಮಂತಾ ತಮ್ಮ ಬೆಸ್ಟ್ ಫ್ರೆಂಡ್ ಮೇಘನಾ ವಿನೋದ್‌ರನ್ನು ಅಪ್ಪಿಕೊಂಡಿದ್ದಾರೆ. ಸಮಂತಾ ಮೇಘನಾ ಸಂಬಂಧ ಎಂಥದ್ದು ಗೊತ್ತಾ?

ನಟಿ ಸಮಂತಾ ರುತ್ ಪ್ರಭು ಸೋಷ್ಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಅವರು ಈ ಬಾರಿ ತಮ್ಮ ಗೆಳತಿಯನ್ನು ಅಪ್ಪಿಕೊಂಡು 'ನನ್ನೆಲ್ಲ ಉತ್ತಮ ನಿರ್ಧಾರಗಳಿಗೆ ಮುಖ ಇದ್ದಿದ್ದರೆ' ಎಂದು ಪೋಸ್ಟ್ ಹಾಕಿದ್ದಾರೆ.

ಊ ಅಂಟಾವಾ ನಟಿಯ ಬದುಕಿನ ಎಲ್ಲ ಒಳ್ಳೆಯ ನಿರ್ಧಾರಗಳಲ್ಲಿ ಪಾಲನ್ನು ಪಡೆದು ಅದರ ಕ್ರೆಡಿಟ್ಟನ್ನೂ ಗಳಿಸಿದ ಈ ಗೆಳತಿಯೇ ಮೇಘನಾ ವಿನೋದ್.

Tap to resize

ಸಮಂತಾ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಯಾರು ಈ ಮೇಘನಾ ವಿನೋದ್, ಇವರ ಸಂಬಂಧ ಎಂಥದ್ದು ಎಂಬ ಕುತೂಹಲ ಹಲವರಲ್ಲಿ ಹುಟ್ಟಿದೆ. 

ಈ ಮೇಘನಾ ಸಮಂತಾಗೆ 14 ವರ್ಷದಿಂದ ಆಪ್ತ ಗೆಳತಿಯಾಗಿದ್ದು, ಇವರಿಬ್ಬರೂ ಸೋಲ್ ಸಿಸ್ಟರ್ಸ್ ಎಂಬ ಮಟ್ಟಿಗೆ ಕ್ಲೋಸ್ ಆಗಿದ್ದಾರೆ. 

ಪ್ಯಾನ್ ಇಂಡಿಯನ್ ನಟಿ ಸಮಂತಾ ರುತ್ ಪ್ರಭು ತಮ್ಮ ವಿವಾಹ ಸಂಬಂಧದಿಂದ ಹೊರ ಬಂದಾಗ, ಈ ಗೆಳತಿಯ ಜೊತೆ ಕೇರಳ ಪ್ರವಾಸ ಕೈಗೊಂಡಿದ್ದರು. 

ಮೇಘನಾ ವಿನೋದ್ ಉದ್ಯಮಿಯಾಗಿದ್ದು, ತನ್ನದೇ ಆದ ಆಭರಣಗಳ ಶಾಪ್ ಹೊಂದಿ, ಪತಿ ಮತ್ತು ಎರಡು ಮಕ್ಕಳ ಕುಟುಂಬದೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. 

ಹಿಂದೊಮ್ಮೆ ಮೇಘನಾ ತಮ್ಮ ಮಗುವನ್ನು ಸಮಂತಾ ಎತ್ತಿಕೊಂಡಿರುವ ಪೋಟೋ ಶೇರ್ ಮಾಡಿ, 'ಜನರನ್ನು ಸಂತೋಷಪಡಿಸುವ ಚಾತುರ್ಯ ನಿನ್ನಲ್ಲಿದ್ದು, ಅದಕ್ಕಾಗಿ ಯಾವುದೇ ಅವಕಾಶ ನೀನು ಮಿಸ್ ಮಾಡಿಕೊಳ್ಳುವುದಿಲ್ಲ. ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ ಮೈ ಲವ್' ಎಂದಿದ್ದರು. 

2013ರಲ್ಲಿ ಮೇಘನಾ ವಿವಾಹ ಜೀವನಕ್ಕೆ ಕಾಲಿಟ್ಟಾಗ 'ಮಿಸ್ಡ್ ಮೈ ಬೆಸ್ಟ್ ಫ್ರೆಂಡ್ಸ್ ಮ್ಯಾರೇಜ್, ಕಂಗ್ರಾಜುಲೇಶನ್ಸ್ ಡಾರ್ಲಿಂಗ್' ಎಂದು ಸಮಂತಾ ವಿಶ್ ಮಾಡಿದ್ದರು.
 

ಮೇಘನಾ ಜೊತೆಗಿನ ಬಾಂಡಿಂಗ್ ಬಗ್ಗೆ ಸಮಂತಾ ಹಲವು ಬಾರಿ ಬರೆದಿದ್ದು, 'ನಾನು ಯಾರನ್ನೂ ಅಷ್ಟು ಬೇಗ ಫ್ರೆಂಡ್ಸ್ ಮಾಡಿಕೊಳ್ಳುವುದಿಲ್ಲ. ಬಹಳ ಸ್ನೇಹಶೀಲಳಾಗಿಯೂ ನಾನೇಕೆ ಸುಲಭವಾಗಿ ಯಾರಿಗೂ ಫ್ರೆಂಡ್ ಆಗುವುದಿಲ್ಲ ಎಂದು ಯೋಚಿಸುತ್ತಿದ್ದೆ. ನನಗೆ ಗೊತ್ತು ಯಾಕೆ ಅಂತ. ಏಕೆಂದರೆ, ನಾನು ಭೇಟಿ ಮಾಡುವ ಪ್ರತಿಯೊಬ್ಬರಲ್ಲೂ ನಿನ್ನನ್ನೇ ಹುಡುಕುತ್ತೇನೆ. ನಾನು ನಿನ್ನನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತೇನೆ' ಎಂದಿದ್ದರು.

Latest Videos

click me!