ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರೀಲೀಲಾ ಕಳೆದ ಕೆಲವು ದಿನಗಳಿಂದ ತಮ್ಮ ಪ್ರೇಮ ವ್ಯವಹಾರದಿಂದಾಗಿ ಸುದ್ದಿಯಲ್ಲಿದ್ದಾರೆ. ಈಗ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದು ಸಂಚಲನ ಮೂಡಿಸಿದೆ.
25
ಶ್ರೀಲೀಲಾ ಫೋಟೋಗಳನ್ನು ನೋಡಿದರೆ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ತೋರುತ್ತಿದೆ. ಅರಿಶಿನ ಶಾಸ್ತ್ರದ ಫೋಟೋದಲ್ಲಿ ಶ್ರೀಲೀಲಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಈ ಫೋಟೋಗಳ ಹಿಂದಿನ ಸತ್ಯವೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ
35
ಈ ಫೋಟೋಗಳಲ್ಲಿ ಶ್ರೀಲೀಲಾ ಗುಲಾಬಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಮೇಕಪ್‌ನಲ್ಲಿ ಕಾಣಿಸುತ್ತಿರುವ ಶ್ರೀಲೀಲಾ ಮುಂದೆ ಮಹಿಳೆಯೊಬ್ಬರು ಅರಿಶಿನ ಹಚ್ಚುತ್ತಿರೋದನ್ನು ಕಾಣಬಹುದು. ಮಹಿಳೆ ಕೈಯಲ್ಲಿ ಕುಂಕುಮ-ಅರಿಶಿನ ಇರೋದನ್ನು ನೋಡಿದ್ರೆ ಇದು ಅರಿಶಿಣ ಶಾಸ್ತ್ರ ಎಂಬ ಭಾವನೆ ಬರುತ್ತದೆ.
45
ಈ ಫೋಟೋ ನೋಡಿದ ನೆಟ್ಟಿಗರು ಮತ್ತು ಶ್ರೀಲೀಲಾ ಅಭಿಮಾನಿಗಳು, ಸದ್ದಿಲ್ಲದೇ ನಟಿ ಮದುವೆಯಾಗ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಫೋಟೋಗಳು ತುಂಬಾ ಮುದ್ದಾಗಿ ಬಂದಿವೆ. ಇದ್ಯಾವೂದೋ ನಿಶ್ಚಿತಾರ್ಥ ಸಮಾರಂಭದಂತೆ ಕಾಣಿಸುತ್ತಿದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
55
ಶ್ರೀಲೀಲಾ ಅವರ ಹೆಸರು ಈ ದಿನಗಳಲ್ಲಿ ಕಾರ್ತಿಕ್ ಆರ್ಯನ್ ಅವರೊಂದಿಗೆ ಜೋಡಿಯಾಗುತ್ತಿದೆ. ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಮುಂಬರುವ ಚಿತ್ರ ಆಶಿಕಿ 3 ರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅನುರಾಗ್ ಬಸು ನಿರ್ದೇಶಿಸುತ್ತಿದ್ದಾರೆ. ಈಗ ವೈರಲ್ ಆಗಿರುವ ಚಿತ್ರ ಸಹ ಸಿನಿಮಾ ಶೂಟಿಂಗ್‌ದ್ದು ಎಂದು ತಿಳಿದು ಬಂದಿದೆ.