ಆದರೆ, ಅವನಿಗಿದ್ದ ನ್ಯೂನತೆಯನ್ನು ಯಾರೂ ಹೇಳುತ್ತಿರಲಿಲ್ಲ. ಆ ಹೀರೋ ಬಗ್ಗೆ ಹೇಳಬೇಕೆಂದರೆ, ತೆಲುಗು ಹೀರೋ ಆದರೂ ತೆಲುಗು ಮಾತಾಡೋಕೆ ಬರುತ್ತಿರಲಿಲ್ಲ. ಒಂದೊಂದು ಸೀನ್‌ಗೂ ತುಂಬಾ ಟೇಕ್‌ಗಳು ವೇಸ್ಟ್ ಆಗುತ್ತಿತ್ತು. ನಾನು ತೆಲುಗು ಹುಡುಗಿ ಅಲ್ಲದಿದ್ದರೂ ಡೈಲಾಗ್‌ಗಳನ್ನು ಚೆನ್ನಾಗಿ ಕಲಿತು ಹೇಳುತ್ತಿದ್ದೆ. ಆ ಹೀರೋಗೆ ತೆಲುಗಲ್ಲಿ ಡೈಲಾಗ್ ಹೇಳೋಕೆ ಬರುತ್ತಿರಲಿಲ್ಲ. ಎತ್ತರ ನನ್ನ ಕೈಯಲ್ಲಿ ಇಲ್ಲ. ಆದರೆ ಡೈಲಾಗ್ ಹೇಳೋದು ನನ್ನ ಕೈಯಲ್ಲಿತ್ತು. ಅದನ್ನು ಪರ್ಫೆಕ್ಟ್ ಆಗಿ ಮಾಡಿದೆ. ಆದರೆ, ಎಲ್ಲರೂ ನನ್ನ ಎತ್ತರದ ಬಗ್ಗೆ ಅವಮಾನ ಮಾಡಿದ್ದು ಬೇಸರ ತರಿಸಿತು ಅಂತ ಶ್ವೇತಾ ಬಸು ಹೇಳಿದ್ದಾರೆ.