ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದು, ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದಾರೆ.
ಬ್ಲ್ಯಾಕ್ ಡ್ರೆಸ್ ತೊಟ್ಟ ಶ್ರುತಿ ಹಾಸನ್, ಕೈಯಲ್ಲಿ ಬಳೆಗಳ ಬದಲಿಗೆ ಕಬ್ಬಿಣದ ಬಾಲ್ ಚೈನ್ಗಳು ಮತ್ತು ಕಿವಿಯಲ್ಲಿ ಅದೇ ವಿನ್ಯಾಸದ ಇಯರ್ ಟಾಪ್ಗಳನ್ನು ಹಾಕಿಕೊಂಡಿದ್ದಾರೆ. ಸದ್ಯ ಟಾಲಿವುಡ್ ಬ್ಯೂಟಿ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಟಾಲಿವುಡ್‌ನ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದ ಶ್ರುತಿ ಹಾಸನ್, ಈಗ ಸ್ವಲ್ಪ ಗ್ಯಾಪ್ ನಂತರ ತೆಲುಗಿನಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ರವಿತೇಜ ಎದುರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿ ಶ್ರುತಿ ಹಾಸನ್ ಹಿಟ್ ಆಗಿದ್ದರು.
ವೈಯಕ್ತಿಕ ವಿಚಾರಕ್ಕೂ ಸುದ್ದಿಯಲ್ಲಿರುವ ಶ್ರುತಿ ಹಾಸನ್, ಶಂತನು ಹಜಾರಿಕಾ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಶಂತನು ತನ್ನ ಜೀವನದಲ್ಲಿ ಬಂದ ನಂತರ ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿದೆ. ನಾವಿಬ್ಬರೂ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದರು.
ಅಂದಹಾಗೆ, ಶ್ರುತಿ ಅವರು, ಸದ್ಯ ‘ಸಲಾರ್’ ಸಿನಿಮಾ ಶೂಟಿಂಗ್ ಈಚೆಗೆ ಮುಗಿದಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಈ ಸಿನಿಮಾಗೆ ಶ್ರುತಿ ಹಾಸನ್ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.
ನನ್ನ ಭಾಗದ ಸಲಾರ್ ಶೂಟಿಂಗ್ ಪೂರ್ಣಗೊಂಡಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಪ್ರಶಾಂತ್ ನಿಮಗೆ ಧನ್ಯವಾದ. ನೀವು ಅಸಾಧಾರಣ ವ್ಯಕ್ತಿ. ಡಾರ್ಲಿಂಗ್ ರೀತಿ ಇದ್ದಿದ್ದಕ್ಕೆ ಪ್ರಭಾಸ್ ನಿಮಗೂ ಥ್ಯಾಂಕ್ಸ್. ಭುವನ್ ನಿಮಗೂ ಥ್ಯಾಂಕ್ಸ್. ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಕೊನೆಯಲ್ಲಿ ಇದು ಕುಟುಂಬದಂತೆ ಭಾಸವಾಗಿದೆ ಎಂದು ಶ್ರುತಿ ಹೇಳಿದ್ದರು.