ಮಗಳ ಜೊತೆ ಶ್ರಿಯಾ ಶರಣ್ ಫೋಟೋ ಶೂಟ್; ನೀವು ಹಾಟೆಸ್ಟ್ ಮಮ್ಮಿ ಅನ್ನೋದ ಜನ!

First Published | Feb 24, 2024, 5:16 PM IST

ಬಹುಭಾಷಾ ನಟಿ ಶ್ರೀಯಾ ಶರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಿನ ಮಗಳ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ಜನರು ಮಾತ್ರ ನೀವು ಹಾಟೆಸ್ಟ್ ಮಮ್ಮಿ ಅಂತಿದ್ದಾರೆ. 
 

ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾ ರಂಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮಿಂಚುತ್ತಿರುವ ನಟಿ ಶ್ರಿಯಾ ಶರಣ್ (Shriya Saran). ತಮ್ಮ 41ನೇ ವಯಸ್ಸಿನಲ್ಲೂ ಅದೇ ವರ್ಚಸ್ಸು, ಬೋಲ್ಡ್ ನೆಸ್ ಕಾಯ್ದುಕೊಂಡಿರುವ ನಟಿಯನ್ನು ನೋಡಿದ್ರೆ ಜನ ವಾವ್ ಅಂತಿದ್ದಾರೆ. 

ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಶ್ರಿಯಾ ಹೆಚ್ಚಾಗಿ ತಮ್ಮ ಬೋಲ್ಡ್ ನೆಸ್ ಮತ್ತು ಫ್ಯಾಷನ್ ಸೆನ್ಸ್ ಗೆ ಹೆಸರಾಗಿದ್ದಾರೆ. ಇದೀಗ ತಮ್ಮ ರಿಯಲ್ ಫೋಟೋ ಶೂಟ್ ಮಧ್ಯೆ ಮಗಳ ಜೊತೆ ತೆಗೆದಂತಹ ಕ್ಯಾಂಡಿಟ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

Tap to resize

ಶ್ರಿಯಾ ತಮ್ಮ ಬೇರೆ ಬೇರೆ ಫೋಟೋ ಶೂಟ್ ಸಮಯದಲ್ಲಿ ತೆಗೆದಂತಹ ಫೋಟೊಗಳನ್ನು ಶೇರ್ ಮಾಡಿದ್ದು, ಇದರಲ್ಲಿ ಫೋಟೋ ಶೂಟ್ ಮಧ್ಯೆ ಮಗಳ ಜೊತೆಗೆ ಇದ್ದಂತಹ ಕೆಲವು ಕ್ಯಾಂಡಿಡ್ ಮೂಮೆಂಟ್ ಗಳು ಇವೆ. ಇವನ್ನು ನೋಡಿ ನೆಟ್ಟಿಗರು ಏನೇನೋ ಕಾಮೆಂಟ್ ಮಾಡ್ತಿದ್ದಾರೆ. 

ಫೋಟೊಗಳಲ್ಲಿ ಶ್ರಿಯಾ ಬೋಲ್ಡ್ ನೆಸ್ (bold photo) ನೋಡಿದ ಫ್ಯಾನ್ಸ್ ನೀವು ಹಾಟೆಸ್ಟ್ ಮಮ್ಮಿ ಎಂದಿದ್ದಾರೆ ಅಲ್ಲದೇ, ಮಗುವಿನ ಜೊತೆಗೆ ಈ ರೀತಿಯೆಲ್ಲಾ ಫೋಟೋ ಶೂಟ್ ಮಾಡೊ ಅಮ್ಮನನ್ನು ನಾವು ನೋಡಿಯೇ ಇರಲಿಲ್ಲ ಎಂದು ಸಹ ಕಾಮೆಂಟ್ ಮಾಡಿದ್ದಾರೆ. 

ಮತ್ತೊಬ್ಬರು ನಿಮ್ಮ ತೊಡೆಯ ಮೇಲಿರುವ ಕಪ್ಪು ಮಚ್ಚೆಯೇ ತುಂಬಾನೆ ಆಕರ್ಷಕವಾಗಿದೆ ಅಂದ್ರೆ, ಮಗದೊಬ್ಬರು ನೀವು ಸಂತೂರ್ ಮಮ್ಮಿ, ತುಂಬಾನೆ ಹಾಟ್, ಸೆಕ್ಸಿಯಾಗಿ ಕಾಣಿಸ್ತಿದ್ದೀರ ಎಂದೆಲ್ಲಾ ಹೇಳಿದ್ದಾರೆ. 

ಇನ್ನೂ ಕೆಲವರು ಮೇಡಂ ನೀವು ಚೆನ್ನಾಗಿ ಆರೋಗ್ಯಯುತ ಆಹಾರಗಳನ್ನು ತಿನ್ನಿ, ನಮಗೆ ಮೊದಲಿನ ಚಬ್ಭಿಯಾಗಿರುವ ಶ್ರಿಯಾ ಮೇಡಂ ಬೇಕು ಎಂದರೆ, ಮತ್ತೊಬ್ಬರು ನಿಮ್ಮನ್ನು ನೋಡಿದ್ರೆ ಅಪೌಷ್ಟಿಕತೆಯಿಂದ ಬಳಲುತ್ತಿರೋಹಾಗಿದೆ ಎಂದಿದ್ದಾರೆ. 

ಕನ್ನಡದಲ್ಲಿ ಕಬ್ಜ ಚಿತ್ರದಲ್ಲಿ ನಟಿಸಿರುವ ನಟಿ ಶ್ರಿಯಾ ಶರಣ್ ಮಗಳಿಗೆ ಈಗ ಮೂರು ವರ್ಷ, 2021 ರಲ್ಲಿ ಹುಟ್ಟಿದ ಮಗಳಿಗೆ ರಾಧಾ(Radha) ಎಂದು ಹೆಸರಿಟ್ಟಿದ್ದಾರೆ. ಸದ್ಯ ನಟಿ ಶೋ ಟೈಮ್ ಎನ್ನುವ ಟಿವಿ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಗಳ ಜೊತೆ ಫೋಟೋ ಹಾಕಿ ನಾವಿಬ್ಬರು ಜೊತೆಗಿದ್ರೆ ಚೆಂದ ಎಂದು ಹೇಳಿದ್ದಾರೆ. 

Latest Videos

click me!