ಫೋನಲ್ಲೇ ನಿರ್ದೇಶಕರಿಟ್ಟ ಬೇಡಿಕೆ ಕೇಳಿ ನಟಿ ಶಾಕ್ : ಕಾಸ್ಟಿಂಗ್ ಕೌಚ್ ಬಗ್ಗೆ ಸನಾಯ ಇರಾನಿ ಮನದ ಮಾತು

First Published | Aug 6, 2024, 5:27 PM IST

ಹಿಂದಿ ಸೀರಿಯಲ್‌ಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಸನಾಯ ಇರಾನಿ ಕಾಸ್ಟಿಂಗ್ ಕೌಚ್ ಕುರಿತಾಗಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 
 

ಈ ಮಧ್ಯೆ ಬಾಲಿವುಡ್ ನಟಿಯರು ದಕ್ಷಿಣ ಭಾರತದ ನಿರ್ದೇಶಕರ ವಿರುದ್ಧ ಕಾಸ್ಟಿಂಗ್ ಕೌಚ್ (casting couch) ಆರೋಪ ಮಾಡುತ್ತಿದ್ದಾರೆ. ಗತಕಾಲದ ನೆನಪುಗಳನ್ನು ಅಗೆದು, ಆರಂಭದಲ್ಲಿ ಅವರೆಷ್ಟು ತೊಂದರೆಗಳನ್ನು ಅನುಭವಿಸಿದ್ದರು ಅನ್ನೋದನ್ನ ಹೇಳುತ್ತಿದ್ದಾರೆ. ನಿರ್ದೇಶಕರು ಮತ್ತು ನಾಯಕರು ತಮ್ಮನ್ನು ಹಾಸಿಗೆಗೆ ಕರೆದದ್ದು, ಒಟ್ಟಿಗೆ ಇರುವಂತೆ ಕೇಳಿದ್ದು, ಎಲ್ಲವನ್ನೂ ನಟಿಯರು ಬಹಿರಂಗ ಪಡಿಸುತ್ತಿದ್ದು, ನಿರ್ದೇಶಕರ ಹೆಸರನ್ನ ಮಾತ್ರ ಹೇಳಿಲ್ಲ. ಇದೀಗ ಬಾಲಿವುಡ್ ನಟಿ ಸನಾಯಾ ಇರಾನಿ ಈ ಪಟ್ಟಿಗೆ ಹೊಸದಾಗಿ ಸೇರಿದ್ದಾರೆ. 

ಅಮೀರ್ ಖಾನ್ ಮತ್ತು ಕಾಜೋಲ್ ಅಭಿನಯದ 'ಫನಾ' ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಸನಾಯಾ ಇರಾನಿ (Sanaya Irani) ನಟನೆಗೆ ಎಂಟ್ರಿ ಕೊಟ್ಟರು. ಸನಾಯ ಶಾರುಖ್ ಖಾನ್ ಮತ್ತು ಕರೀನಾ ಅವರಂತಹ ಜನಪ್ರಿಯ ತಾರೆಗಳೊಂದಿಗೆ ಹಲವಾರು ಟಿವಿ ಜಾಹೀರಾತುಗಳಲ್ಲಿ ಕೂಡ ನಟಿಸಿದ್ದಾರೆ. ಟಿವಿ ಸೀರಿಯಲ್ ಗಳಲ್ಲೂ ಮಿಂಚಿದ ಸನಾಯ 'ಮಿಲೇ ಜಬ್ ಹಮ್ ತುಮ್' ನಲ್ಲಿ ಗುಂಜನ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು. ಹಲವಾರು ಹಿಟ್ ಧಾರಾವಾಹಿಗಳು, 'ಝಲಕ್ ದಿಖ್ಲಾ ಜಾ' ಮತ್ತು 'ನಾಚ್ ಬಲಿಯೆ' ನಂತಹ ರಿಯಾಲಿಟಿ ಶೋಗಳಲ್ಲೂ ಸನಾಯ ಕಾಣಿಸಿಕೊಂಡಿದ್ದರು. 

Tap to resize

ಸನಾಯಾ ತನ್ನ ಸೌಂದರ್ಯ ಮತ್ತು ನಟನೆಯಿಂದಾಗಿ 'ಈಸ್ಟರ್ನ್-ಐ' ನಂತಹ ಅಂತಾರಾಷ್ಟ್ರೀಯ ಮ್ಯಾಗಝಿನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಇವೆಲ್ಲದರ ಹೊರತಾಗಿ ಈ ಟಿವಿ ತಾರೆ ತಮ್ಮ ಕರಿಯರ್ ಆರಂಭದಲ್ಲಿ ಸಾಕಷ್ಟು ಟೀಕೆಗಳು ಮತ್ತು ಅವಮಾನಗಳನ್ನು ಎದುರಿಸಿದ್ದಾರೆ. ಅದರಲ್ಲೂ ಆಡಿಷನ್ ನೀಡುವ ಸಮಯದಲ್ಲಿ ಎದುರಿಸಿದ್ದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ ಸನಾಯ. 

ಸನಾಯಾ ಇರಾನಿ ಚಲನಚಿತ್ರೋದ್ಯಮದ ಬಗ್ಗೆ ದೊಡ್ಡ ಮತ್ತು ಆಘಾತಕಾರಿ ವಿಷ್ಯಗಳನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ, ಸನಾಯಾ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ ಹೇಳಿಕೆ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು. ಆಡಿಷನ್‌ಗೆ ಕರೆದ ನಿರ್ದೇಶಕರೊಬ್ಬರು ಫೋನ್ ಮೂಲಕ ಇಟ್ಟ ಬೇಡಿಕೆ ಕೇಳಿ ಶಾಕ್ ಆಗಿರೋದಾಗಿ ನಟಿ ಹೇಳಿದ್ದಾರೆ. 

ಹಲವು ವರ್ಷಗಳ ಹಿಂದೆ, ದಕ್ಷಿಣದ ಸಿನಿಮಾ ಇಂಡಷ್ಟ್ರಿಯವರೊಬ್ಬರು ಸಿನಿಮಾವೊಂದಕ್ಕೆ ನನ್ನನ್ನು ಭೇಟಿಯಾಗಲು ಬಯಸಿದ್ದರು. ಆ ಸಮಯದಲ್ಲಿ, ನಾನು ಸಿನಿಮಾ ಮಾಡುತ್ತಿರಲಿಲ್ಲ. ಆದರೆ ಆ ವ್ಯಕ್ತಿ ನನ್ನನ್ನು ಭೇಟಿಯಾಗಲೇಬೇಕೆಂದಾಗ, ನಾನು ಹೋದೆ. ಅವರು ತಮಗೆ ಕರ್ವಿ ನಟಿ ಬೇಕೆಂದಿದ್ದರಂತೆ. ಕೆಲವು ಸಿನಿಮಾ ಇಂಡಸ್ಟ್ರಿಯಲ್ಲಿ ತಾವು ಬಯಸಿದಂತೆ ಮಾಡಲು ರೆಡಿಯಾಗಿರುವ, ಮಲಗೋದಕ್ಕೆ ಸಿದ್ಧವಾಗಿರೋ ಹುಡುಗಿಯರನ್ನ ಭೇಟಿ ಮಾಡೋದಕ್ಕೆ ಇಷ್ಟ ಪಡ್ತಾರೆಂದಿದ್ದಾರೆ ಸನಾಯ.
 

ಈ ಸಂದರ್ಶನದಲ್ಲಿ, ಸನಾಯಾ ನಿರ್ದೇಶಕರ ಬಗ್ಗೆಯೂ ವಿಷಯ ಬಹಿರಂಗಪಡಿಸಿದರು. 'ಒಮ್ಮೆ ಮ್ಯೂಸಿಕ್ ವೀಡಿಯೊದಲ್ಲಿ ಕೆಲಸ ಮಾಡುವ ಬಗ್ಗೆ ಸೆಕ್ರೆಟರಿಗೆ ಕರೆ ಬಂದಿತ್ತಂತೆ. ಆದರೆ ನಟಿ ಸನಾಯ ಆಸಕ್ತಿ ತೋರಿಸಲಿಲ್ಲ, ಹಾಗಾಗಿ ಆಕೆ ಇಂಟ್ರೆಸ್ಟ್‌ವಿಲ್ಲವೆಂದರಂತೆ. ಅದಕ್ಕೆ ಸೆಕ್ರೆಟರಿ ಒಮ್ಮೆ ಮಾತನಾಡಿ ನೋಡಿ, ಇಲ್ಲ ಅಂದ್ರೆ ನಿಮ್ಮ ಬಗ್ಗೆ ಕೆಟ್ಟದಾಗಿ  ಮಾತನಾಡಬಹುದು ಎಂದರಂತೆ. ಹಾಗಾಗಿ ನಟಿ ಆ ನಿರ್ದೇಶಕರಿಗೆ ಕಾಲ್ ಮಾಡಿದ್ದಾರೆ. 
 

ಬಾಲಿವುಡ್ ಟಾಪ್ ನಿರ್ದೇಶಕರಾಗಿದ್ರಂತೆ ಅವರು, ಅವರಿಗೆ ಸನಾಯ ಕಾಲ್ ಮಾಡಿದಾಗ, ಅರ್ಧ ಗಂಟೆ ಬಿಟ್ಟು ಕರೆ ಮಾಡು, ನಾನು ಮೀಟಿಗಲ್ಲಿ ಇರೋದಾಗಿ ಹೇಳಿದ್ರಂತೆ. ನಟಿ 45 ನಿಮಿಷದ ನಂತ್ರ ಕರೆ ಮಾಡಿದಾಗ, ನಾನು ಯಾವಾಗ ಕರೆ ಮಾಡೋದಕ್ಕೆ ಹೇಳಿದ್ದು ಅಂತ ಸಿಟ್ಟಲ್ಲಿ ಕೇಳಿದ್ರಂತೆ. ಇದಾದ ನಂತರ ನಟಿ ಸನಾಯ ನೀವು ಯಾಕೆ ಕಾಲ್ ಮಾಡೋದಕ್ಕೆ ಹೇಳಿದ್ರಿ ಅಂದಾಗ ನಿರ್ದೇಶಕರು ಅಹಂ ಪ್ರದರ್ಶಿಸುತ್ತಲೇ ನಾನೊಂದು ದೊಡ್ಡ ಸಿನಿಮಾ ಮಾಡ್ತಿದ್ದೇನೆ, ದೊಡ್ಡ ದೊಡ್ಡ ಹೀರೋಗಳು ಅದರಲ್ಲಿ ಕೆಲಸ ಮಾಡ್ತಿದ್ದಾರೆ ನೀನು ಅದರಲ್ಲಿ ಬಿಕಿನಿ ಹಾಕಬೇಕು ಎಂದರಂತೆ. 
 

ಇದನ್ನ ಕೇಳಿ ಸನಾಯ ಶಾಕ್ ಆಗಿ, ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್ ಏನೆಂಜು ಕೇಳಿದಾಗ, ನಿರ್ದೇಶಕರು ಮತ್ತೆ ಸಿಟ್ಟಿನಿಂದ, ಸಿನಿಮಾದಲ್ಲಿ ನೀನು ಬಿಕಿನಿ ಹಾಕಬೇಕು, ಹಾಕೋದಕ್ಕೆ ಆಗುತ್ತಾ? ಇಲ್ವಾ? ಎಂದು ಕೇಳಿದ್ರಂತೆ. ಇದರಿಂದ ಸನಾಯಗೆ ಕೋಪ ಬಂದು ಕಾಲ್ ಕಟ್ ಮಾಡಿದ್ದರಂತೆ. ಈ ರೀತಿಯಾಗಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟರು ನಟಿ. 

Latest Videos

click me!