ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುಶ್‌ಅಪ್ಸ್ ಮಾಡ್ತಿರೋ ವಿಡಿಯೋ ಹಾಕಿ, "ಮೊದಲು ನೀವು ಮೂರು ಪುಶ್‌ಅಪ್ಸ್ ಮಾಡಿ, ಆಮೇಲೆ ನಾನು ಸಣ್ಣಗೆ ಇದ್ದೀನಿ, ಅನಾರೋಗ್ಯದಿಂದ ಇದ್ದೀನಿ ಅಂತ ಕಾಮೆಂಟ್ ಮಾಡಿ. ಇಲ್ಲಾಂದ್ರೆ ಮಾಡ್ಬೇಡಿ" ಅಂತ ಡಬಲ್ ಮೀನಿಂಗ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಹೀಗೆ ದೇಹದ ಬಗ್ಗೆ ಬಂದ ಟೀಕೆಗೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಸ್ಯಾಮ್.
ಆದ್ರೆ ಸಮಂತಾ ತೂಕದ ಬಗ್ಗೆ ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಸ್ವಲ್ಪ ತೂಕ ಹೆಚ್ಚಿಸಿಕೊಂಡ್ರೆ ಒಳ್ಳೇದು, ದಕ್ಷಿಣ ಭಾರತದ ನಟಿಯರು ಒಂದು ಮಿನಿಮಮ್ ತೂಕ ಇಟ್ಕೊಳ್ಳಬೇಕು ಅಂತ ಹೇಳ್ತಿದ್ದಾರೆ. ಉತ್ತರ ಭಾರತದ ನಟಿಯರಿಗೆ ಈ ಲುಕ್ ಸರಿ ಹೋಗುತ್ತೆ ಅಂತ ಹೇಳ್ತಿದ್ದಾರೆ.