ಸಾಯಿ ಪಲ್ಲವಿ ಮದುವೆ ವಿಚಾರ ಅನೇಕ ದಿನಗಳಿಂದ ಸದ್ದು ಮಾಡುತ್ತಿದ್ದರೂ ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೌನವಾಗಿರುವುದು ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿದೆ. ನಿಜಕ್ಕೂ ಹಸೆಮಣೆ ಏರಲು ಸಜ್ಜಾಗಿದ್ದಾರಾ, ಸಿನಿಮಾ ಒಪ್ಪಿಕೊಳ್ಳದೆ ಸೈಲೆಂಟ್ ಆಗಿರುವುದು ಯಾಕೆ ಎನ್ನುವ ಬಗ್ಗೆ ಸಾಯಿ ಪಲ್ಲವಿನೇ ಬಹಿರಂಗ ಪಡಿಸಬೇಕಿದೆ.