ಮತ್ತೆ ಹಾಟ್ ‌ಲುಕ್‌ನಲ್ಲಿ Samantha ಮಿಂಚಿಂಗ್; ಬೆಂಕಿ ಪೋಸ್ ಎಂದ ಫ್ಯಾನ್ಸ್

First Published | May 6, 2022, 6:46 PM IST

ಸೌತ್ ಸ್ಟಾರ್ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹೊಸ ಫೋಟೋಶೂಟ್ ಮೂಲಕ ಮಿಂಚುವ ಸಮಂತಾ ಇದೀಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಸುಂದರಿಯ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸೌತ್ ಸ್ಟಾರ್ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹೊಸ ಫೋಟೋಶೂಟ್ ಮೂಲಕ ಮಿಂಚುವ ಸಮಂತಾ ಇದೀಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಸುಂದರಿಯ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಅಂದಹಾಗೆ ಸಮಂತಾ ಮ್ಯಾಗಜಿನ್ ಒಂದಕ್ಕೆ ನೀಡಿದ ಪೋಸ್‌ಗೆ ಅಭಿಮಾನಿಗಳು ಬೆರಗಾರಿದ್ದಾರೆ. ಸಮಂತಾ ಹಾಟ್ ಅವತಾರಕ್ಕೆ ನೆಟ್ಟಿಗರು ಬೆಂಕಿ ಪೋಸ್ ಎನ್ನುತ್ತಿದ್ದಾರೆ. ಹೊಸ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿರುವ ಸಮಂತಾ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸಿಕೊಂಡಿದ್ದಾರೆ.

Tap to resize

ಪಿಕಾಕ್ ಮ್ಯಾಗಜಿನ್‌ಗೆ ಸಮಂತಾ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ತರಹೇವಾರಿ ಔಟ್‌ಫಿಟ್‌ನಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಮಂತಾ ಹೊಸ ಹೊಸ ಅವತಾರಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇತ್ತೀಚಿಗೆ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ನಾಗ ಚೈತನ್ಯರಿಂದ ದೂರ ಆಗಿರುವ ಸಮಂತಾ ಸಿನಿಮಾ, ಜಾಹೀರಾತುಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸ್ಯಾಮ್ ಬಳಿ ಸಾಲು ಸಾಲು ಸಿನಿಮಾಗಳಿವೆ.

ಸದ್ಯ ಸಮಂತಾ ಯಶೋಧ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಾಕುಂತಲಂ ಚಿತ್ರೀಕರಣ ಮುಗಿಸಿರುವ ಸಮಂತಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾಗಳ ಜೊತೆಗೆ ಇತ್ತೀಚಿಗಷ್ಟೆ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸೌತ್ ಸಿನಿಮಾಗಳ ಜೊತೆಗೆ ಸಮಂತಾ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದು, ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಸಮಂತಾ ಅಭಿಮಾನಿಗಳಿಗೆ ಶಾಕುಂತಲಂ ಸಿನಿಮಾದ ಸಖತ್ ಲುಕ್ ದರ್ಶನ ಮಾಡಿಸಿದ್ದರು. ಬಿಳಿ ಬಣ್ಣದ ಬಟ್ಟೆ ಮತ್ತು ಹೂವಿನ ಅಲಂಕಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು.

Latest Videos

click me!