ಹಿಂದಿ ಚಿತ್ರರಂಗದ ಎವರ್‌ಗ್ರೀನ್ ವರ್ಸಟೈಲ್ ನಟಿ ರೇಖಾ ತಮ್ಮ ವಿಭಿನ್ನ ಸೀರೆ ಮತ್ತು ಆಭರಣ ಕಲೆಕ್ಷನ್‌ನಿಂದ ಫ್ಯಾಷನ್ ಲೋಕದಲ್ಲಿ ಹೆಸರು ಮಾಡಿದ್ದಾರೆ.
28
ಕೆಲವು ದಿನಗಳ ಹಿಂದೆ ಡಿಸೈನರ್ ಮನೀಶ್ ಮಲ್ಹೋತ್ರಾ ನಿವಾಸಕ್ಕೆ ಭೇಟಿ ನೀಡಿದ ರೇಖಾ ಬಿಳಿ ಬಣ್ಣದ ಸೀರೆಗೆ ಕಪ್ಪು ಗ್ಲಾಸ್ ಧರಿಸಿ ಅದಕ್ಕೆ ಸ್ನೀಕರ್ಸ್ ಧರಿಸಿದ್ದಾರೆ.
38
ಈ ಲುಕ್‌ನ ಮತ್ತೊಂದು ಹೈಲೈಟ್ ಏನೆಂದರೆ ಕೂದಲು ಹೈ ಬನ್ ರೀತಿ ಕಟ್ಟಿರುವ ರೇಖಾ ಚಿನ್ನದ ಓಲೆ ಧರಿಸಿ ಕೈಯಲ್ಲಿ ಬಿಳಿ ಬಣ್ಣ ಜೂಟ್ ಬ್ಯಾಗ್ ಹಿಡಿದುಕೊಂಡಿದ್ದಾರೆ.
48
ರೇಖಾ ಕಾರಿನಿಂದ ಇಳಿಯುತ್ತಿದ್ದಂತೆ ಮೇಡಂ ಹೇಗಿದ್ದೀರಾ ನೋಡಲು ಸುಂದರವಾಗಿದ್ದೀರಿ ಎಂದು ಪ್ಯಾಪರಾಜಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ನೆಟ್ಟಿಗರಿಗೂ ಈ ಲುಕ್ ಇಷ್ಟವಾಗಿದೆ.
58
ಸೀರೆಗೆ ಶೂ ಧರಿಸಿರುವುದು ಸೂಪರ್ ಕೂಲ್, ರೇಖಾ ಏನೇ ಸ್ಟೈಲ್ ಮಾಡಿದ್ದರೂ ಚೆನ್ನಾಗಿ ಕಾಣಿಸುತ್ತದೆ, ರೇಖಾ ಮುಖದಲ್ಲಿರುವ ಇರುವ ಗ್ಲೋ ಎಂದು ಮರೆಯಲು ಆಗಲ್ಲ, ಸೀರೆ ವಿಚಾರದಲ್ಲಿ ಇನ್ನಿತರ ನಟಿಯರು ರೇಖಾ ನೋಡಿ ಕಲಿಯಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
68
ರೇಖಾ ಅವರು ತಮ್ಮ ಕೆರಿಯರ್‌ನ ಉಚ್ಛ ಸ್ಥಿತಿಯಲ್ಲಿ ಇದ್ದಾಗ ಅವರು ಒಂದು ವರ್ಷದಲ್ಲಿ 5 ಚಲನಚಿತ್ರಗಳನ್ನು ಪೂರ್ಣಗೊಳಿಸುತ್ತಿದ್ದರು ಮತ್ತು ಹೆಚ್ಚು ಕಡಿಮೆ ಅಷ್ಟೂ ಸಿನಿಮಾಗಳು ಹಿಟ್ ಸಹ ಆಗಿದ್ದವು.
78
ಪತ್ರಿಕಾ ವರದಿಯ ಪ್ರಕಾರ ಆಕೆಯ ಆದಾಯದ ಹೆಚ್ಚಿನ ಭಾಗವು ಮುಂಬೈನ ಅತ್ಯಂತ ದುಬಾರಿ ಪ್ರಮುಖ ಸ್ಥಳಗಳಲ್ಲಿ ಹೊಂದಿರುವ ವಿವಿಧ ಆಸ್ತಿಗಳ ಲೀಸ್‌ನಿಂದ ಪಡೆಯುತ್ತಾರೆ.ಅಷ್ಟೇ ಅಲ್ಲ, ರಾಜ್ಯಸಭಾ ಸದಸ್ಯರಾಗಿದ್ದ ರೇಖಾ ಅವರಿಗೆ ಸರ್ಕಾರದಿಂದ ಸಹ ಸದಸ್ಯತ್ವದ ಪರಿಹಾರ ಸಿಗುತ್ತದೆ. ಇದು ಅವರ ಆದಾಯದ ಒಂದು ಮೂಲವಾಗಿದೆ.
88
ನಟನೆ ಹಾಗೂ ಸಿನಿಮಾದಿಂದ ದೂರ ಉಳಿದರೂರೇಖಾ ಅವರ ಫೇಮ್ ಹಾಗೇ ಉಳಿದಿದೆ.ಇಂದಿಗೂ ರೇಖಾ ಅವರು ಹೈ ಪ್ರೊಫೈಲ್ ಈವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈವೆಂಟ್‌ಗಳಲ್ಲಿ ಭಾಗವಹಿಸುವ ರೇಖಾರ ಪ್ರತಿ ನಿಮಿಷವೂ ಅವರಿಗೆ ದೊಡ್ಡ ಮೊತ್ತದ ಹಣ ತರುತ್ತದೆ ಹಾಗೂ ಈ ರೀತಿಯ ಕಾರ್ಯಕ್ರಮಗಳು ನಟಿಯ ಆದಾಯದ ದೊಡ್ಡ ಮೂಲವಾಗಿದೆ.