ಅವರು ನನ್ನ ಬಳಿಗೆ ಏಕೆ ಬಂದರು, ಅವರು ನನ್ನನ್ನು ಮಹಾರಾಣಿಯಾಗಿ ಹೇಗೆ ನೋಡಿದರು ಎಂದು ನನಗೆ ತಿಳಿದಿರಲಿಲ್ಲ. ಅಲ್ಲದೇ ಅಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ನಿಜವಾಗಿಯೂ ಚಿತ್ರದ ಕತೆಯನ್ನು ಕೇಳಿದಾಗ ಗೊಂದಲಕ್ಕೊಳಗಾಗಿದ್ದೆ, ಆಘಾತಕ್ಕೊಳಗಾಗಿದ್ದೆ. ಅದಕ್ಕಿಂತ ಹೆಚ್ಚಾಗಿ ತುಂಬಾ ಕೃತಜ್ಞಳಾಗಿದ್ದೆ, ಇನ್ನು ನಾವು ಇದನ್ನು ಹೇಗೆ ಮಾಡುತ್ತೇವೆ ಎಂದು ತಿಳಿದಿರಲಿಲ್ಲ. ಜೊತೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ಗೊತ್ತಿರಲಿಲ್ಲ.