Rashmika Mandanna ಬ್ಯೂಟಿಗೆ ಮುತ್ತಿಟ್ಟ ಸೂರ್ಯ: ಸೀರೆಲಿ ಹುಡುಗಿರ ನೋಡಲೇಬಾರದು ಎಂದ ಪಡ್ಡೆಹೈಕ್ಳು!

First Published Oct 2, 2023, 12:30 AM IST

ಕಿರಿಕ್‌ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಸಿನಿಮಾ ಅಭಿಮಾನಿಗಳಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಕೂರ್ಗ್‌ನ ಈ ಚೆಲುವೆ ಸಾಲು ಸಾಲು ಹಿಟ್ ಸಿನಿಮಾಗಳೊಂದಿಗೆ ಮುನ್ನುಗ್ಗುತ್ತಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಷನಲ್​ ಕ್ರಶ್​ ನಟಿ ರಶ್ಮಿಕಾ ಮಂದಣ್ಣ ಸಖತ್​ ಸುದ್ದಿಯಲ್ಲಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಕೂರ್ಗ್‌ನ ಚೆಲುವೆ ರಶ್ಮಿಕಾ ಮಂದಣ್ಣ ದುಬೈಗೆ ಹಾರಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. 

Latest Videos


ದುಬೈನಲ್ಲಿದ್ದ ನಟಿ ಚಂದವಾಗಿ ಸೀರೆಯುಟ್ಟು ಟ್ರೆಡಿಷನಲ್‌​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೀಮ್​ ಕಲರ್​ ಸೀರೆ, ಮಿರರ್​ ವರ್ಕ್​ ಬ್ಲೌಸ್​ ಧರಿಸಿರುವ ರಶ್ಮಿಕಾ ಕ್ಯಾಮೆರಾ ನಾಚುವಂತೆ ಪೋಸ್​​ ಕೊಟ್ಟಿದ್ದಾರೆ. ನಟಿಯ ಅಂದ ಕಂಡು ಸೂರ್ಯ ಕೂಡ ಕಣ್ಣು ಹೊಡೆದಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟಿವ್ ಆಗಿರುವ ನಟಿ ರಶ್ಮಿಕಾರ ಈ ಹೊಸ ಫೋಟೋಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಬಾಲಿವುಡ್‌ ನಟ ರಣಬೀರ್​ ಕಪೂರ್ ಜೊತೆಗಿನ ಅನಿಮಲ್​ ಸಿನಿಮಾ ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ರಶ್ಮಿಕಾ ಮಂದಣ್ಣರನ್ನು ಹೊಸ ಲುಕ್​ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. 

click me!