ಸ್ಟೈಲಿಶ್ ಬ್ಲ್ಯಾಕ್ ಗೌನ್‌ ತೊಟ್ಟು ಪಡ್ಡೆಹೈಕ್ಳ ದಿಲ್ ಕದ್ದ ರಶ್ಮಿಕಾ ಮಂದಣ್ಣ: ಶ್ರೀವಲ್ಲಿ ಇನ್ ಫೈಯರ್ ಎಂದ ಫ್ಯಾನ್ಸ್!

First Published Apr 18, 2024, 10:02 AM IST

ಕನ್ನಡದ ಕಿರಿಕ್ ಪಾರ್ಟಿಯಿಂದಲೇ ದೊಡ್ಡ ಹೆಸರು ಮಾಡಿಕೊಡಿರೋ ರಶ್ಮಿಕಾ ಮಂದಣ್ಣ, ಇದೀಗ ಪರ ಭಾಷೆಯ ಚಿತ್ರದಲ್ಲೂ ಮಿಂಚುತ್ತಿದ್ದಾರೆ. ಪಕ್ಕದ ತೆಲುಗು ಸಿನಿಮಾರಂಗದಲ್ಲಿಯೇ ಟಾಪ್‌ ಅಲ್ಲಿಯೇ ಇದ್ದಾರೆ.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಪಡ್ಡೆಹುಡುಗರ ನ್ಯಾಶನಲ್ ಕ್ರಶ್ ಆಗಿ ಗಮನ ಸೆಳೆಯುತ್ತಿದ್ದಾರೆ. 

ಇದೀಗ ಸ್ಟೈಲಿಶ್ ಬ್ಲ್ಯಾಕ್ ಗೌನ್‌ನಲ್ಲಿ ರಶ್ಮಿಕಾ ಫೋಟೋಶೂಟ್ ಮಾಡಿಸಿದ್ದಾರೆ. ಶ್ರೀವಲ್ಲಿ ನಯಾ ಲುಕ್ ನೋಡುಗರ ಗಮನ ಸೆಳೆಯುತ್ತಿದೆ.‌ ಕಪ್ಪು ಬಣ್ಣದ ಬ್ಲ್ಯಾಕ್ ಸ್ಟೋನ್ ಔಟ್ ಫಿಟ್‌ನಲ್ಲಿ ಮಿರ ಮಿರ ಅಂತ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. 

ಬ್ಲಾಕ್ ಡ್ರೆಸ್‌ಗೆ ಸಿಲ್ವರ್ ಇಯರಿಂಗ್ಸ್ ಮ್ಯಾಚ್ ಮಾಡಿರುವ ರಶ್ಮಿಕಾ ಲುಕ್‌, ನಿಂತಿರುವ ಭಂಗಿ ಮತ್ತು ಆಕೆಯ ಕಿಲ್ಲಿಂಗ್ ಲುಕ್ ಪಡ್ಡೆಹುಡುಗರ ದಿಲ್ ಕದ್ದಿದೆ. ಶ್ರೀವಲ್ಲಿಯ ಫೋಟೋ ನೋಡಿ ಅಭಿಮಾನಿಗಳು ಪುಷ್ಪ ಇನ್ ಫೈಯರ್ ಎಂದು ಬಣ್ಣಿಸಿದ್ದಾರೆ. 

ರಶ್ಮಿಕಾ‘ಪುಷ್ಪ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಶ್ರೀವಲ್ಲಿ ಪಾತ್ರದಲ್ಲಿ ಮಿಂಚಿದ್ದರು. ಪುಷ್ಪ ಪಾರ್ಟ್ ಒನ್‌ಗಿಂತ ಭಾಗ 2ರಲ್ಲಿ ನಟಿಯ ಲುಕ್ ವಿಭಿನ್ನವಾಗಿದೆ. ಕತ್ತಿನಲ್ಲಿ ಬಂಗಾರ ಹೇರಿಕೊಂಡು ಕಣ್ಣಿನ ಬಳಿ ಕೈ ಹಿಡಿದು ಸೂಪರ್ ಎಂದು ರಶ್ಮಿಕಾ ಪೋಸ್ ಕೊಟ್ಟಿದ್ದರು.

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಟಾಲಿವುಡ್​​ನಲ್ಲಿ ಕೆಲ ಬ್ಲಾಕ್ ಬಸ್ಟರ್  ಸಿನಿಮಾಗಳನ್ನು ನೀಡಿದ್ದಾರೆ. ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಚೆಲುವೆ ಅನಿಮಲ್ ಸಿನಿಮಾ ಮೂಲಕ ಬಿಗ್ ಸಕ್ಸಸ್ ಕಂಡಿದ್ದಾರೆ.

ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅನಿಮಲ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ಸದ್ಯ ರಶ್ಮಿಕಾ ಪುಷ್ಪ 2, ಗರ್ಲ್​ಫ್ರೆಂಡ್, ಬಾಲಿವುಡ್​ನ ಎರಡು ಸಿನಿಮಾ, ತಮಿಳಿನ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

click me!