ಪ್ರಗ್ನೆಂಟೂ ಇಲ್ಲ, ಪ್ಲ್ಯಾಸ್ಟಿಕ್ ಸರ್ಜರಿಯೂ ಅಲ್ಲ, ಈ ಕಾರಣಕ್ಕಾಗಿ 15 ಕೆಜಿ ತೂಕ ಏರಿರುವ ಪರಿಣೀತಿ ಚೋಪ್ರಾ!

Published : Apr 17, 2024, 05:08 PM IST

ಪರಿಣೀತಾ ಪ್ರಗ್ನೆಂಟ್ ಆಗಿದಾರೆ, ಪರಿಣೀತಾ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.. ಮುಖ ಊದಿಕೊಂಡಿದೆ ಎಂದೆಲ್ಲ ಹೇಳಿದವರಿಗೆ ನಟಿ ಈಗ ಉತ್ತರಿಸಿದ್ದಾರೆ. ತಾವು 15 ಕೆಜಿ ತೂಕ ಏರಿದ್ದರ ಕಾರಣ ತಿಳಿಸಿದ್ದಾರೆ. 

PREV
19
ಪ್ರಗ್ನೆಂಟೂ ಇಲ್ಲ, ಪ್ಲ್ಯಾಸ್ಟಿಕ್ ಸರ್ಜರಿಯೂ ಅಲ್ಲ, ಈ ಕಾರಣಕ್ಕಾಗಿ 15 ಕೆಜಿ ತೂಕ ಏರಿರುವ ಪರಿಣೀತಿ ಚೋಪ್ರಾ!

ಪರಿಣೀತಾ ಚೋಪ್ರಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಂಡಾಗ ಅವರು ತೊಟ್ಟ ಉಡುಗೆ ನೋಡಿ ಎಲ್ಲರೂ ನಟಿ ಪ್ರಗ್ನೆಂಟ್ ಎಂದು ಅನುಮಾನಿಸಿದ್ದರು. ಕಡೆಗೆ, ನಟಿ ಹಾಗೇನಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

29

ಅದಾದ ಬಳಿಕ ನಟಿ ತಾವು ಹಾಡುತ್ತಿರುವ ವಿಡಿಯೋವೊಂದನ್ನು ಬಿಟ್ಟಾಗ, 'ಆಕೆ ಬೇರೆ ರೀತಿ ಕಾಣುತ್ತಿರುವುದು ನನಗೆ ಮಾತ್ರವಾ' ಎಂದು ನೆಟ್ಟಿಗರೊಬ್ಬರು ಕೇಳುತ್ತಿದ್ದಂತೆ ಅವರ ಮುಖದಲ್ಲಾದ ಬದಲಾವಣೆಗಳು ಎಲ್ಲರ ಗಮನಕ್ಕೂ ಬಂದವು. 

39

ನಟಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಡಬಲ್ ಚಿನ್ ಮಾಡಿಸಿಕೊಳ್ಳಲು ಹೋಗಿ ಜೇನುಹುಳ ಕಡಿದಂತೆ ಕಾಣುತ್ತಿದ್ದಾರೆ ಎಂದೆಲ್ಲ ನೆಟ್ಟಿಗರು ಅನುಮಾನಿಸಿದರು. 

49

ಆದರೆ, ಈ ಎಲ್ಲ ಅಂತೆ ಕಂತೆಗಳಿಗೆ, ಊಹಾಪೋಹಾಗಳಿಗೆ ಬ್ರೇಕ್ ಹಾಕಲು ನಟಿ ತೀರ್ಮಾನಿಸಿದ್ದು, ತಮ್ಮ ಮುಖ, ಮೈಲಿ ಆದ ಬದಲಾವಣೆ ಗರ್ಭಿಣಿಯಾಗಿಯೂ ಅಲ್ಲ, ಪ್ಲ್ಯಾಸ್ಟಿಕ್ ಸರ್ಜರಿಯೂ ಅಲ್ಲ ಎಂದಿದ್ದಾರೆ. 

59

'ಅಮರ್‌ಸಿಂಗ್ ಚಮ್ಕೀಲಾಗಾಗಿ ಇಮ್ತಿಯಾಜ್ ಸರ್ ನನಗೆ 15 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳಲು ಹೇಳಿದರು ಮತ್ತು ನನ್ನ ಮುಖದಲ್ಲಿ ಯಾವುದೇ ಮೇಕ್ಅಪ್ ಇರುವುದಿಲ್ಲ ಎಂದು ಹೇಳಿದರು. ನಾನು ನನ್ನ ಕೆಟ್ಟ ರೂಪದಲ್ಲಿ ಕಾಣಬೇಕಿತ್ತು. ಸರಿ ಎಂದೆ' ಎಂದಿದ್ದಾರೆ. 

69

ಸಾಮಾನ್ಯವಾಗಿ ನಟಿಯರು ಸಣ್ಣಗಾಗುವ ಪ್ರಯತ್ನಗಳನ್ನು ಅವಿರತ ಮಾಡ್ತಾನೇ ಇರ್ತಾರೆ. ಆದರೆ, ದಪ್ಪಗಾಗುವ ಚಾಲೆಂಜ್ ಎಲ್ಲರೂ ಒಪ್ಪಿಕೊಳ್ಳೋದಿಲ್ಲ. ಆದರೆ, ಪರಿಣೀತಿ ಚೋಪ್ರಾ ತಾವು ದಪ್ಪಗೆ ಕಾಣಲು ಒಪ್ಪಿದ್ದಕ್ಕೆ ವಿದ್ಯಾ ಬಾಲನ್ ಸ್ಪೂರ್ತಿ ಎಂದಿದ್ದಾರೆ. 

79

'ದಿ ಡರ್ಟಿ ಪಿಕ್ಚರ್‌ಗಾಗಿ ವಿದ್ಯಾ ಬಾಲನ್ ಇದನ್ನು ಮಾಡಿದ್ದರಿಂದ ನನಗೆ ಸವಾಲನ್ನು ಸ್ವೀಕರಿಸಲು ಪ್ರೇರಣೆ ಸಿಕ್ಕಿತು. ಎರಡು ವರ್ಷಗಳ ಕಾಲ ಚಮ್ಕಿಲಾ ಚಿತ್ರೀಕರಣದಲ್ಲಿ ತೊಡಗಿದ್ದರಿಂದ ಸಾಕಷ್ಟು ಕೆಲಸಗಳನ್ನು ಕಳೆದುಕೊಂಡೆ. ನಾನು ನನ್ನ ಕೆಟ್ಟ ರೂಪ ನೋಡಿದೆ ' ಎಂದು ನಟಿ ಹೇಳಿದ್ದಾರೆ. 

89

'ದಪ್ಪಗಾಗಿದ್ದ ಕಾರಣ ಯಾವುದೇ ರೆಡ್ ಕಾರ್ಪೆಟ್ ಮೇಲೆ ನಾನು ಕಾಣಲಿಲ್ಲ. ನಾನು ನನ್ನಂತೆ ಕಾಣದ ಕಾರಣ ಫ್ಯಾಷನ್ ಹಿಂದಿನ ಸೀಟನ್ನು ತೆಗೆದುಕೊಂಡಿತ್ತು. ಈಗಲೂ ನಾನು ನನ್ನಂತೆ ಕಾಣುತ್ತಿಲ್ಲ. ಆದರೆ ನಾನು ಇನ್ನೂ ರೆಡ್ ಕಾರ್ಪೆಟ್ ನೋಟಕ್ಕಿಂತ 10 ಚಮ್ಕಿಲಾಗಳನ್ನು ಇಷ್ಟಪಡುತ್ತೇನೆ' ಎಂದು ನಟಿ ಹೇಳಿದ್ದಾರೆ. 

99

ಪರಿಣಿತಿ ಚೋಪ್ರಾ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಇಮ್ತಿಯಾಜ್ ಅಲಿ ಅವರ ಚಲನಚಿತ್ರ ಅಮರ್ ಸಿಂಗ್ ಚಮ್ಕಿಲಾದಲ್ಲಿ 'ಅಮರ್‌ಜೋತ್ ಕೌರ್' ಪಾತ್ರ ನಿರ್ವಹಿಸಿದ್ದಾರೆ. 

Read more Photos on
click me!

Recommended Stories