ನನ್ನ ಸ್ತನದ ಗಾತ್ರ ಎಷ್ಟೆಂದು ಕೇಳಿದ್ದ, ಸ್ಟಾರ್‌ ನಿರ್ದೇಶಕನ ವಿರುದ್ಧ ನಟಿಯ ಕಾಸ್ಟಿಂಗ್ ಕೌಚ್ ಆರೋಪ

First Published | May 25, 2024, 6:25 PM IST

ನಟನೆಯ ಅವಕಾಶಗಳನ್ನು ನೀಡಬೇಕಾದರೆ ಅದಕ್ಕೆ ಬದಲಾಗಿ ಲೈಂಗಿಕ ಸುಖವನ್ನು ಕೋರುವುದಕ್ಕೆ ಕಾಸ್ಟಿಂಗ್ ಕೌಚ್ ಎಂದು ಕರೆಯಲಾಗುತ್ತದೆ. ಇದು ಮನೋರಂಜನಾ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದು, ಚಿತ್ರರಂಗದಲ್ಲಿ ಇದರ ವಿರುದ್ಧ ಮೀ ಟೂ ಅಭಿಯಾನವೇ ಆರಂಭವಾಗಿತ್ತು. ಚಿತ್ರರಂಗದಲ್ಲಿ ಹಲವಾರು ನಟಿಯರು ಈ ಕಿರುಕುಳ ಅನುಭವಿಸಿದ್ದು, ಈ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದರು.

 ಸ್ಟಾರ್‌ ನಿರ್ದೇಶಕನ ವಿರುದ್ಧ ನಟಿಯೊಬ್ಬರು ಗಂಭೀರ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲು ನನನ್ನು ಕೇಳಿಕೊಂಡರು ಈ ಬಗ್ಗೆ ಮಾತನಾಡಲು ಹೋದಾಗ ಚಿಕ್ಕ ಬಟ್ಟೆ ಧರಿಸಬೇಕು ಎಂದು ನನ್ನ ಸ್ತನದ ಗಾತ್ರದ ಬಗ್ಗೆ ಕೇಳಿದ್ದರು ಎಂದು ಆರೋಪಿಸಿದ್ದರು

ಆಕೆ ಭಾರತೀಯ ನಟಿಯಾಗಿದ್ದು. ಅತಿ ಹೆಚ್ಚು ಸಂಭಾವನೆ ಪಡೆಯುವ ಭೋಜ್‌ಪುರಿ ನಟಿಯರಲ್ಲಿ ಒಬ್ಬರಾಗಿದ್ದರು ಅವರೇ ರಾಣಿ ಚಟರ್ಜಿ.  ಅವರು ಸ್ಟಾರ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಮಾಡಿ, ಕರಾಳ ಮುಖವನ್ನು ಬಯಲು ಮಾಡಿದ್ದಾರೆ. 

Tap to resize

ರಾಣಿ ಚಟರ್ಜಿ ಮೊದಲಿಗೆ ಭೋಜ್‌ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಸ್ಟಾರ್‌ ನಟಿಯಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭೋಜ್‌ಪುರಿ ನಟಿಯರಲ್ಲಿ ಒಬ್ಬರು ಎನಿಸಿಕೊಳ್ಳುತ್ತಾರೆ. 

ಸಸುರ ಬಡಾ ಪೈಸಾವಾಲಾ (2004) ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಈ ನಟಿಯ ಮೊದಲ ಚಿತ್ರ ಈಗಲೂ ಅತಿ ಹೆಚ್ಚು ಗಳಿಕೆ ಮಾಡಿದ ಭೋಜ್‌ಪುರಿ ಚಲನಚಿತ್ರವಾಗಿದೆ.

ಸಾಜಿದ್‌ ಖಾನ್‌ ವಿರುದ್ಧ ಮೀ ಟೂ ಆರೋಪಿಸಿದ ನಟಿ,  ಅವರು ಬಾಲಿವುಡ್‌ನಲ್ಲಿ ತುಂಬಾ ದೊಡ್ಡ ನಿರ್ದೇಶಕರಾಗಿರುವುದರಿಂದ, ನಾನು ಅವರ ಮಾತನ್ನು ಕೇಳಿದೆ. ಅವನು ಒಬ್ಬನೇ ಇದ್ದ ಅವನ ಜುಹುವಿನಲ್ಲಿನ ಮನೆಗೆ ಹೋಗಿದ್ದೆ. ‘ಧೋಕಾ ಧೋಕಾ’ ಐಟಂ ಸಾಂಗ್‌ಗೆ ನನ್ನನ್ನು ಆಯ್ಕೆ ಮಾಡುವುದಾಗಿ ಅವರು ಆರಂಭದಲ್ಲಿ ಹೇಳಿದ್ದರು.

ಮಾತು ಮುಂದುವರೆಸಿದ ನಿರ್ದೇಶಕ ನಾನು ಚಿಕ್ಕ ಲೆಹೆಂಗಾ ಧರಿಸಬೇಕು ಎಂದು ಹೇಳಿ, ನನ್ನ ಕಾಲುಗಳನ್ನು ತೋರಿಸಲು ಕೇಳಿದರು. ನಾನು ಉದ್ದನೆಯ ಸ್ಕರ್ಟ್ ಧರಿಸಿದ್ದರಿಂದ, ಬಹುಶಃ ಗೊತ್ತಾಗಲಿಲ್ಲ ಎಂದುಕೊಂಡು ನನ್ನ ಮೊಣಕಾಲುಗಳವರೆಗೆ ನಾನು ಬಟ್ಟೆಯನ್ನು ಎತ್ತಬೇಕಾಗಿತ್ತು.

ಆದರೆ ಬಳಿಕ ಆತ ನನ್ನ ಸ್ತನದ ಗಾತ್ರದ ಬಗ್ಗೆ ಕೇಳಲು ಶುರು ಮಾಡಿದ,  ಆಗ ನಾನು ಹೆದರುತ್ತಿದ್ದೆ. ನಾಚಿಕೆಪಡಬೇಡ, ನಿನಗೆ ಗೆಳೆಯ ಇದ್ದಾನೋ ಇಲ್ಲವೋ? ನೀವು ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಿದ್ದೀರಿ? ಎಂದು ಪ್ರಶ್ನಿಸ ತೊಡಗಿದ.

ನನಗೆ ಇದೆಲ್ಲ ಅಸಹ್ಯವಾಗಿ ಅವನನ್ನು ಕೇಳಿದೆ, ‘ಈ  ಮಾತೆಲ್ಲ ಏಕೆ?’ ಅವನು ಅಂದುಕೊಂಡ ನಾನು ಅವನ ಮಾತಿಗೆ ಒಪ್ಪುತ್ತೇನೆಂದು.  ಅವನು ನನ್ನನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ,  ಆದರೆ ನಾನು ತಕ್ಷಣ ಅಲ್ಲಿಂದ ಹೊರಟೆ ಎಂದು ರಾಣಿ ಚಟರ್ಜಿ ಹೇಳಿದ್ದಾರೆ. 

ಹಲವಾರು ಮಹಿಳೆಯರು ಸಾಜಿದ್‌ ಖಾನ್ ವಿರುದ್ಧ ಲೈಂಗಿಕ ದುರುಪಯೋಗದ ಆರೋಪ ಮಾಡಿದ್ದರು. ಶೆರ್ಲಿನ್ ಚೋಪ್ರಾ, ಮಂದನಾ ಕರಿಮಿ, ಕನಿಷ್ಕಾ ಸೋನಿ, ಅಹಾನಾ ಕುಮ್ರಾ, ಸಲೋನಿ ಚೋಪ್ರಾ, ರಾಚೆಲ್ ವೈಟ್ ಸೇರಿದಂತೆ ಹಲವಾರು ಮಹಿಳೆಯರು ಲೈಂಗಿಕ ದುರ್ವರ್ತನೆ ಆರೋಪ ಮಾಡಿದ್ದಾರೆ.

Latest Videos

click me!