ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಕಣ್ಣಿನಿಂದಲೇ ಎಲ್ಲರನ್ನೂ ಕೊಲ್ಲುವಂಥ ನಟನೆ ತೋರುವ ನಟಿ. ಕನ್ನಡದಲ್ಲಿಯೂ ನಟಿಸಿರುವ ಇವರು ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಯಾರೇ ನೀ ಅಭಿಮಾನಿ, ಸ್ನೇಹ, ಆಂಧ್ರ ಹೆಂಡತಿ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಗ್ಲಾಮರ್, ನಟನೆ ಎರಡರಲ್ಲೂ ರಮ್ಯಾ ಕೃಷ್ಣನ್ ಗೆ ಒಂದು ಕಾಲದಲ್ಲಿ ಸರಿಸಾಟಿಯೇ ಇರಲಿಲ್ಲ. ನರಸಿಂಹ ಚಿತ್ರದಲ್ಲಿ ರಜನಿಕಾಂತ್ ಜೊತೆ ಪೈಪೋಟಿ ನೀಡುವಂತೆ ನಟಿಸಿದ್ದರು. 1990ರಲ್ಲಿ ಕೆ. ವಿಶ್ವನಾಥ್ ಅವರ ಸೂತ್ರದಾರಲು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ನಂತರ ರಮ್ಯಾಗೆ ಆಫರ್ಸ್ ಹರಿದು ಬರಲು ಶುರುವಾಯಿತು.
ರಮ್ಯಾ ಕೃಷ್ಣನ್ ಟಾಲಿವುಡ್ ನಲ್ಲಿ ನಾಗಾರ್ಜುನ, ವೆಂಕಟೇಶ್, ಚಿರಂಜೀವಿ, ಶ್ರೀಕಾಂತ್, ಬಾಲಕೃಷ್ಣ ಹೀಗೆ ಎಲ್ಲಾ ಹೀರೋಗಳ ಜೊತೆ ನಟಿಸಿದ್ದಾರೆ. ಶುಭಲಗ್ನಂ, ಆಹ್ವಾನಂ, ಎಗೀರೆ ಪಾವುರಮ ಚಿತ್ರಗಳೇ ಇದಕ್ಕೆ ಉದಾಹರಣೆ. ಆಹ್ವಾನಂ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಶ್ರೀಕಾಂತ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್ ಅವರ ಭಾವುಕ ಅಭಿನಯ ಹೈಲೈಟ್ ಆಗಿತ್ತು.
ನಟಿ ರಮ್ಯಾ ಕೃಷ್ಣನ್
ನಟಿಯರನ್ನು ನಿರ್ದೇಶಕ ಎಸ್ ವಿ ಕೃಷ್ಣ ರೆಡ್ಡಿ ಸದಾ ಗೌರವದಿಂದ ನಡೆಸಿ ಕೊಡುತ್ತಾರೆ. ಅದಕ್ಕಾಗಿಯೇ ಅವರ ನಿರ್ದೇಶನದಲ್ಲಿ ನಟಿಸಲು ಕಲಾವಿದೆಯರು ದುಂಬಾಲು ಬೀಳುತ್ತಾರೆ. ನಟಿಸಲು ಸಾಧ್ಯವಾಗದಿದ್ದರೂ, ಕರೆ ಮಾಡಿ ಕ್ಷಮೆ ಕೇಳುತ್ತಾರೆ. ಸೌಂದರ್ಯ ಹಾಗೆಯೇ ಮಾಡಿದ್ದರು. ಯಾಕೆ ಹೀರೋಯಿನ್ಸ್ ಗೌರವಿಸುತ್ತಾರೆ ಎಂದು ನಿರೂಪಕರು ಕೇಳಿದಾಗ ಕೃಷ್ಣ ರೆಡ್ಡಿ ನೀಡಿದ ಉತ್ತರ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಆಹ್ವಾನಂ ಸಿನಿಮಾ ಚಿತ್ರೀಕರಣದ ಕೊನೆಯ ದಿನ ರಮ್ಯಾ ಕೃಷ್ಣನ್ ಗೆ ವೀಳ್ಯ ತಟ್ಟೆಯಲ್ಲಿ ಪಟ್ಟು ಸೀರೆ, ಅರಿಶಿನ ಕುಂಕುಮ, ಹತ್ತು ಸಾವಿರ ರೂಪಾಯಿ ಹಣ ಇಟ್ಟು ತೆಲುಗಿನ ಮನೆಯ ಸೊಸೆಯಂತೆ ತಾಂಬೂಲ ನೀಡಿದೆವು. ಅಷ್ಟೊಂದು ಗೌರವಿಸಿದೆವು. ಅವರನ್ನು ಅಷ್ಟು ಗೌರವದಿಂದ ನೋಡಿ ಕೊಂಡರೆ ನಮ್ಮನ್ನೂ ಗೌರವಿಸುತ್ತಾರೆ. ಆ ದಿನ ರಮ್ಯಾ ಕೃಷ್ಣನ್ ನನ್ನ ಕೈ ಹಿಡಿದು ಭಾವುಕರಾದರು. ಅತ್ತರು ಎಂದು ಎಸ್ ವಿ ಕೃಷ್ಣ ರೆಡ್ಡಿ ಹೇಳಿದ್ದು ದೊಡ್ಡ ಸದ್ದು ಮಾಡಿತ್ತು.
ಇತ್ತೀಚೆಗೆ ರಮ್ಯಾ ಕೃಷ್ಣನ್ ತಾಯಿ, ಅತ್ತೆ ಪಾತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ಎಸ್ ವಿ ಕೃಷ್ಣ ರೆಡ್ಡಿ ಇತ್ತೀಚಿನ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕರು ಹೊಸ ಹೊಸ ವಿಧಾನಗಳೊಂದಿಗೆ ಸಿನಿಮಾ ಮಾಡುತ್ತಿರುವುದು, ಅಶ್ಲೀಲತೆ ನಂತಹ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕನಾಗಿ ನನ್ನ ವಿಧಾನ ಬೇರೆ ಎಂದು ಎಸ್ ವಿ ಕೃಷ್ಣ ರೆಡ್ಡಿ ತಿಳಿಸಿದ್ದಾರೆ. ನನ್ನ ಚಿತ್ರಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸುತ್ತೇನೆ. ಎಲ್ಲಿಯೂ ಬೈಗುಳ ಬರುವ ಸಂಭಾಷಣೆ ಇರಬಾರದು ಎಂಬುದು ಮೊದಲನೆಯದು. ಆಮೇಲೆ ಡಬಲ್ ಮೀನಿಂಗ್ ಸಂಭಾಷಣೆ ಕೂಡ ಇರಬಾರದು. ಕೊನೆಯದಾಗಿ ಹೀರೋಯಿನ್ ಬ್ಲೌಸ್ ಸರಿಯಾಗಿಲ್ಲದಿದ್ದರೆ, ಬ್ಲೌಸ್ ಅಂಚು ಜಾರಿದರೆ ನಾನು ಒಪ್ಪುವುದಿಲ್ಲ. ತಕ್ಷಣ ಕಟ್ ಹೇಳುತ್ತೇನೆ, ಎಂದಿದ್ದರು.