ಪರಿಣಿತಿ ಮದುವೆಗೆ ಗೈರಾಗಿ ಸ್ನೇಹಿತೆಯ ಸಮಾರಂಭದಲ್ಲಿ ಪ್ರಿಯಾಂಕಾ, ತಂಗಿಗಿಂತ ಸ್ನೇಹಿತರೇ ಹೆಚ್ಚಾ?

Published : Sep 24, 2023, 05:17 PM ISTUpdated : Sep 24, 2023, 05:23 PM IST

ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಇಂದು ಉದಯಪುರದಲ್ಲಿ ವಿವಾಹವಾಗಿದ್ದಾರೆ. ಮದುವೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್  ಸೇರಿದಂತೆ ರಾಜಕಾರಣಿಗಳು, ಬಾಲಿವುಡ್‌ ಅನೇಕ ಮಂದಿ, ಸ್ನೇಹಿತರು ಆಪ್ತರು ಬಂದಿದ್ದಾರೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾ ಬಾರದೆ ಲಾಸ್‌ಎಂಜಲೀಸ್‌ನಲ್ಲಿ ತನ್ನ ಸ್ನೇಹಿತೆಯ ಸಮಾರಂಭವದಲ್ಲಿ ಕಾಣಿಸಿಕೊಂಡ ಫೋಟೋ, ವಿಡಿಯೋ ವೈರಲ್ ಆಗಿದೆ.

PREV
17
ಪರಿಣಿತಿ ಮದುವೆಗೆ ಗೈರಾಗಿ ಸ್ನೇಹಿತೆಯ ಸಮಾರಂಭದಲ್ಲಿ ಪ್ರಿಯಾಂಕಾ, ತಂಗಿಗಿಂತ ಸ್ನೇಹಿತರೇ ಹೆಚ್ಚಾ?

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹ ಸಮಾರಂಭ ಭಿಗಿ ಭದ್ರತೆಯಲ್ಲಿ ಆಪ್ತರ ಸಮ್ಮುಖದಲ್ಲಿ ನಡೆದಿದ್ದು, ಈವರೆಗೆ ಮದುವೆಯ ಒಂದೇ ಒಂದು ಫೋಟೋ ಕೂಡ ರಿವೀಲ್ ಆಗಿಲ್ಲ. ಮದುವೆಗೂ ಮುನ್ನ ನಿನ್ನೆ 90 ಥೀಮ್‌ ನಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಇದರ ಕೆಲವು ಫೋಟೋಗಳು ಲೀಕ್ ಆಗಿದೆ.

27

ಇನ್ನು  ಪರಿಣಿತಿ ಚೋಪ್ರಾ  ಮದುವೆಗೆ ಸಹೋದರಿ (ಸೋದರ ಸಂಬಂಧಿ) ಹಾಲಿವುಡ್‌, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದಾರೆ. ಇದಕ್ಕೂ ಮುನ್ನ ತಾನು ಗೈರಾಗುತ್ತಿರುವ ಬಗ್ಗೆ ಹಿಂಟ್‌ ಕೊಟ್ಟಿದ್ದ ನಟಿ, ಕಸಿನ್ ಪರಿಣಿತಿಗೆ ವಿಶ್ ಮಾಡಿ ಪೋಸ್ಟ್ ಹಾಕಿದ್ದರು.

37

ಇದೀಗ ಚೋಪ್ರಾ ಭಾಗವಹಿಸಿದ್ದಕ್ಕೆ ಕಾರಣ ಬಹಿರಂಗವಾಗಿದೆ ಮತ್ತು ಸ್ನೇಹಿತರ ಜೊತೆಗೆ ಇರುವ ಫೋಟೋ ವಿಡಿಯೋ ವೈರಲ್ ಆಗಿದೆ. ವೈರಲ್‌ ಆಗಿರುವ ಫೋಟೋ ವಿಡಿಯೋಗೆ ಕಮೆಂಟ್‌ ಮಾಡಿರುವ ನೆಟಿಜನ್‌ ಗಳು ಆಕೆ ಫ್ಯಾಮಿಲಿ ಬಿಟ್ಟು ಸ್ನೇಹಿತರ ಜೊತೆಗೆ ಹೆಚ್ಚಾಗಿ ಇರುತ್ತಾಳೆ. ಫ್ಯಾಮಿಲಿಯ ಬೆಲೆ ಆಕೆಗೆ ತಿಳಿದಿಲ್ಲ. ಅವಳು ಕುಟುಂಬಕ್ಕಿಂತ ಹೆಚ್ಚಾಗಿ ಸ್ನೇಹಿತರಿಗೆ ತನ್ನ ಸಮಯವನ್ನು ಮೀಸಲಿಡುತ್ತಾಳೆ ಎಂದು ಕಮೆಂಟ್‌ ಮಾಡಿದ್ದಾರೆ.

47

ಲಾಸ್ ಏಂಜಲೀಸ್‌ನ ಮಾಲಿಬುನಲ್ಲಿರುವ ಸೊಹೊ ಹೌಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಸ್ನೇಹಿತೆಯ ಬೇಬಿ ಶವರ್‌ನಲ್ಲಿ ಭಾಗವಹಿರುವ ಫೋಟೋಗಳನ್ನು ಅಭಿಮಾನಿಗಳ ಖಾತೆಯಲ್ಲಿ  ಹಂಚಿಕೊಳ್ಳಲಾಗಿದೆ. ಪಿಗ್ಗಿ ಬಿಳಿ ಮಿಡಿ ಧರಿಸಿದ್ದಳು.
 

57

ಬೇಬಿ ಶವರ್‌ಗೆ ಮೊದಲು, ಪ್ರಿಯಾಂಕಾ ಲಾಸ್‌ ಎಂಜಲೀಸ್‌ ನಲ್ಲಿನ ಗ್ರೀಕ್ ಥಿಯೇಟರ್‌ನಲ್ಲಿ ಕಾಣಿಸಿಕೊಂಡರು. ಅವರ ಸೋದರ ಮಾವ ಫ್ರಾಂಕ್ಲಿನ್ ಜೋನಾಸ್ ಅವರೊಂದಿಗೆ ಜೈ ವುಲ್ಫ್ ಅವರ ಸಂಗೀತ ಕಚೇರಿಯನ್ನು ಆನಂದಿಸಿದರು. ಬಾಂಗ್ಲಾದೇಶದ ನಟ-ನೃತ್ಯ ನಿರ್ದೇಶಕ ಬುಶ್ರಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ನಟಿಯನ್ನು ಭೇಟಿಯಾದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.  

67

ಇನ್ನು ಭಾರೀ ಭಿಗಿ ಭ್ರತೆಯ ನಡುವೆಯೂ ಪರಿಣಿತಿ ಚೋಪ್ರಾ ಅವರ ಭಾವೀ ಗಂಡ ರಾಘವ್ ಚಡ್ಡಾ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  
 

77

ರಾಘವ್ ಚಡ್ಡಾ ಅವರು ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಮದುವೆಯ ಥೀಮ್ ಎಂದು ಹೇಳಲಾಗುತ್ತದೆ. ವರ ಮತ್ತು ಬರಾತ್ (ವರನ ಮೆರವಣಿಗೆ) ದೋಣಿಯಲ್ಲಿ ಮದುವೆ ಸ್ಥಳಕ್ಕೆ ಬರುತ್ತಿರುವ ಫೋಟೋ ವಿಡಿಯೋ ವೈರಲ್ ಆಗಿದೆ.

Read more Photos on
click me!

Recommended Stories