ದೀಪಿಕಾ ಪಡುಕೋಣೆ ರೆಕಾರ್ಡ್‌ ಬ್ರೇಕ್‌ ಮಾಡಿದ ಪ್ರಿಯಾಂಕಾ ಚೋಪ್ರಾ: ರಾಜಮೌಳಿ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

Published : Feb 03, 2025, 04:15 PM ISTUpdated : Feb 03, 2025, 04:17 PM IST

ಮಹೇಶ್‌ ಬಾಬು ಅಭಿನಯದ, ‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟನೆ. ₹30 ಕೋಟಿ ಸಂಭಾವನೆ ಪಡೆದು ದಾಖಲೆ. ‘ಕಲ್ಕಿ’ ಚಿತ್ರಕ್ಕೆ ದೀಪಿಕಾ ಪಡುಕೋಣೆ ₹20 ಕೋಟಿ ಪಡೆದು ನಿರ್ಮಿಸಿದ್ದ ರೆಕಾರ್ಡ್‌ ಬ್ರೇಕ್‌.  

PREV
16
ದೀಪಿಕಾ ಪಡುಕೋಣೆ ರೆಕಾರ್ಡ್‌ ಬ್ರೇಕ್‌ ಮಾಡಿದ ಪ್ರಿಯಾಂಕಾ ಚೋಪ್ರಾ: ರಾಜಮೌಳಿ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

ಎಸ್‌ಎಸ್ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ಹೊಸ ಚಿತ್ರಕ್ಕಾಗಿ ನಟಿ ಪ್ರಿಯಾಂಕ ಚೋಪ್ರಾ 30 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. 

26

ಆ ಮೂಲಕ ರಾಜಮೌಳಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಒಟ್ಟಾರೆಯಾಗಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಂಡಿರುವ ನಟಿಯರ ಸಾಲಿನಲ್ಲಿ ಪ್ರಿಯಾಂಕ ಮೊದಲ ಸ್ಥಾನಕ್ಕೇರಿದ್ದಾರೆ. ಈ ಹಿಂದೆ 'ಕಲ್ಕಿ' ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ 20 ಕೋಟಿ ತೆಗೆದುಕೊಂಡು 2024ರಲ್ಲಿ ಕಾಸ್‌ಟ್ಲಿನಟಿ ಎನಿಸಿಕೊಂಡಿದ್ದರು. 

36

ಈಗ 2025ರಲ್ಲಿ ಪ್ರಿಯಾಂಕ ಚೋಪ್ರಾ ದುಬಾರಿ ನಟಿ ಎನಿಸಿಕೊಂಡಿದ್ದಾರೆ.  ಆರಂಭದಲ್ಲಿ ಅದಕ್ಕಿಂತಲೂ ಜಾಸ್ತಿ ಮೊತ್ತದ ಸಂಭಾವನೆಗೆ ಪ್ರಿಯಾಂಕ ಚೋಪ್ರಾ ಬೇಡಿಕೆ ಇಟ್ಟಿದ್ದರಂತೆ. 

46

ಆದರೆ, ಚಿತ್ರತಂಡದ ಜತೆಗಿನ ಸಾಕಷ್ಟು ಮಾತುಕತೆಯ ಬಳಿಕ ಹಾಗೂ ಗ್ಲೋಬಲ್ ಮಾರುಕಟ್ಟೆಯಲ್ಲಿ ತನಗೆ ಈ ಸಿನಿಮಾ ಮೈಲುಗಲ್ಲು ಸಿನಿಮಾ ಆಗಲಿದೆ ಎಂದು ಭಾವಿಸಿ 30 ಕೋಟಿಗೆ ಲೆಕ್ಕ ಚುಕ್ತಾ ಮಾಡಿಕೊಂಡಿದ್ದಾರಂತೆ ಪ್ರಿಯಾಂಕ. ಇದೊಂದು ಜಂಗಲ್ ಅನ್ವೆಂಚರ್ ಚಿತ್ರವಾಗಿದ್ದು, 2027ಕ್ಕೆ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

56

ಸ್ಟಿವನ್ ಸ್ಪೀಲ್​ಬರ್ಗ್​ ಅವರ ಹಾಲಿವುಡ್​ ಸಿನಿಮಾ 'ಇಂಡಿಯಾನಾ ಜೋನ್ಸ್' ನಿಂದ ಸ್ಪೂರ್ತಿ ಪಡೆದ ಕಥೆ ಇದಾಗಿದ್ದು, ರಾಜಮೌಳಿ ಹಲವು ವರ್ಷಗಳಿಂದಲೂ ಒಂದು 'ಜಂಗಲ್ ಅಡ್ವೇಂಚರ್' ಸಿನಿಮಾ ಮಾಡಲು ಯೋಜಿಸಿದ್ದರಂತೆ. 

66

ಅದರಂತೆ ಈಗ ಮಹೇಶ್ ಬಾಬು ಜೊತೆ ಈ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಅಮೆಜಾನ್ ಕಾಡುಗಳು ಸೇರಿದಂತೆ ಹಲವು ದೇಶಗಳಲ್ಲಿ ನಡೆಯಲಿದೆ. 'ಮಿಷನ್ ಇಂಪಾಸಿಬಲ್' ಸಿನಿಮಾಗಳಲ್ಲಿ ಇರುವಂತೆ ಈ ಸಿನಿಮಾದ ಕಥೆ ಸಹ ಹಲವು ದೇಶಗಳಲ್ಲಿ ನಡೆಯಲಿದೆಯಂತೆ. 

Read more Photos on
click me!

Recommended Stories