ರಂಜಾನ್ ಮಾಸ; ಪ್ರಿಯಾಮಣಿ ಕೂಡ ಮಾಡ್ತಿದ್ದಾರಾ ಉಪವಾಸ?

First Published | May 13, 2020, 7:11 PM IST

ರಂಜಾನ್ ಮಾಸ ಶುರುವಾಗಿದೆ. ಮುಸಲ್ಮಾನರು ಕಟ್ಟುನಿಟ್ಟಿನ ಉಪವಾಸ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ನಡುವೆ ನಟಿ ಪ್ರಿಯಾಮಣಿ ಅವರ ಪತಿ ಮುಂಬೈ ಮೂಲದ ಉದ್ಯಮಿ ಮುಸ್ತಫಾ ಅವರು ಮುಸಲ್ಮಾನರಾಗಿರುವುದರಿಂದ ಇವರು ಕೂಡ ಉಪವಾಸ ಇರುತ್ತಾರಾ? ಅವರ ಆಚರಣೆಯಲ್ಲಿ ಇವರು ಭಾಗಿಯಾಗುತ್ತಾರಾ? ಎಂಬ ಪ್ರಶ್ನೆಗೆ ಪ್ರಿಯಾಮಣಿ ಅವರೇ ಉತ್ತರ ನೀಡಿದ್ದಾರೆ ನೋಡಿ .. 

ಪ್ರಿಯಾಮಣಿ ಬಹುಭಾಷಾ ನಟಿಯಾಗಿದ್ದು ಹಲವು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ .
ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಿಯಾಮಣಿ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
Tap to resize

ಈ ಹಿಂದೆ ಶಾರುಖ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಕುಣಿದು ಪ್ರೇಕ್ಷಕರನ್ನು ರಂಜಿಸಿದ್ದರು.
ಪರುತ್ತಿವೀರನ್ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಪ್ರಿಯಾಮಣಿ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ.
ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಅಭಿನಯದ ಮೈದಾನ್ ಎಂಬ ಕ್ರೀಡಾ ಪ್ರಧಾನ ಸಿನಿಮಾದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ.
ಈ ನಡುವೆ ಸಾಯಿ ಪಲ್ಲವಿ ಅವರ ಜೊತೆ ವಿರಾಟ ಪರ್ವಂ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆಗಸ್ಟ್​ 23,2017ರಲ್ಲಿ ಪ್ರಿಯಾಮಣಿ ಮುಂಬೈ ಮೂಲದ ಮುಸ್ತಫಾ ಎಂಬ ಉದ್ಯಮಿಯನ್ನು ವಿವಾಹವಾಗಿದ್ದರು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಸಮಯದಲ್ಲಿ ಸ್ನೇಹವಾಗಿ ನಂತರ ಅದು ಪ್ರೇಮವಾಗಿ ತಿರುಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖಮಯ ಜೀವನ ನಡೆಸುತ್ತಿದ್ದಾರೆ.
ರಂಜಾನ್ ಮಾಸದಲ್ಲಿ ಪ್ರಿಯಾಮಣಿ ಉಪವಾಸ ಮಾಡುತ್ತಾರಾ ಎಂಬ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ನನ್ನ ಪತಿಯಷ್ಟೇ ಉಪವಾಸ ಮಾಡುತ್ತಾರೆ ನಾನು ಮಾಡುವುದಿಲ್ಲ ಎಂದು ಉತ್ತರ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಮುಸ್ಲಿಮನ್ನು ವರಿಸಿದಾಗ ಪ್ರಿಯಾಮಣಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

Latest Videos

click me!