ರಜನಿಕಾಂತ್ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ನಟರೆಲ್ಲಾ ನಟಿಸುತ್ತಿದ್ದಾರೆ. ರಜನಿಕಾಂತ್ ಸಿನಿಮಾ ಎಂದರೆ ಯಾರೂ ಇಲ್ಲ ಎನ್ನುವುದಿಲ್ಲ ಅನ್ನುವುದಕ್ಕೆ ಇದೀಗ ಬಂದಿರುವ ಉತ್ತಮ ಪುರಾವೆಯಾಗಿದೆ.
25
ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಈ ಚಿತ್ರದಲ್ಲಿ ಕ್ಯಾಮಿಯೋ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.
35
‘45’ ಪ್ರಚಾರದಲ್ಲಿ ನಿರತರಾಗಿರುವ ಉಪೇಂದ್ರ, ‘ಈ ಚಿತ್ರದಲ್ಲಿ ರಜನಿಕಾಂತ್, ನಾಗಾರ್ಜುನ ಮತ್ತು ಅಮೀರ್ ಖಾನ್ ಜೊತೆ ನಟಿಸಿದ್ದೇನೆ’ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
45
ಇನ್ನೊಂದೆಡೆ ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗೆ ನೋಡಿದರೆ ಪಾರ್ಟ್ 1ರಲ್ಲೇ ಬಾಲಕೃಷ್ಣ ನಟಿಸಬೇಕಿತ್ತಂತೆ.
55
ಕಾರಣಾಂತರಗಳಿಂದ ಆಗಿಲ್ಲ. ಈಗ ಪಾರ್ಟ್ 2 ಕತೆಗೆ ಅವರನ್ನು ಕರೆತರುತ್ತಿದ್ದಾರೆ ನಿರ್ದೇಶಕ ನೆಲ್ಸನ್. ಈ ಮೂಲಕ ರಜನಿಕಾಂತ್ ಸಿನಿಮಾಗಳಲ್ಲಿ ಇಡೀ ಭಾರತೀಯ ಚಿತ್ರರಂಗದ ಘಟಾನುಘಟಿಗಳೇ ನಟಿಸುತ್ತಿರುವಂತಾಗಿದೆ.