ಮೈಸೂರ್ ಸಿಲ್ಕ್‌ ಆಯ್ತು ಈಗ ಬಾಂದಿನಿ ಸೀರೆಗೂ ಬ್ಲೌಸ್ ಹಾಕಿಲ್ಲ; ನಟಿ ನಿಹಾರಿಕಾ ಹಿಗ್ಗಾಮುಗ್ಗಾ ಟ್ರೋಲ್!

First Published | Nov 3, 2023, 4:09 PM IST

ಪದೇ ಪದೇ ಬ್ಲೌಸ್ ಹಾಕದೆ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಿಹಾರಿಕಾ ಕೊನಿಡೆಲಾ. ಟ್ರೋಲ್ ಆಗುತ್ತಿದ್ದರೂ Dont care....

ಮೆಗಾ ಸ್ಟಾರ್ ಚಿರಂಜೀವಿ ತಮ್ಮ ನಾಗಬಾಬು ಮುದ್ದಿನ ಪುತ್ರಿ ನಿಹಾರಿಕಾ ಕೊನಿಡೆಲಾ ಗುಜರಾತಿ ಸ್ಪೆಷಲ್ ಸೀರೆಯಲ್ಲಿ ಮಿಂಚಿದ್ದಾರೆ.

ಹಸಿರು ಮತ್ತು ಕೆಂಪು ಕಾಂಬಿನೇಷನ್‌ ಸೀರೆಯಲ್ಲಿ ಕಾಣಿಸಿಕೊಂಡಿರುವ ನಿಹಾರಿಕಾ ಸಿಂಪಲ್‌ ಆಗಿ ಸಣ್ಣ ಸರ ಮತ್ತು ಬೈತಲೆ ಬೊಟ್ಟು ಧರಿಸಿದ್ದಾರೆ.

Tap to resize

 ವಿಜಯ ದಶಮಿ ಪ್ರಯುಕ್ತ ಮಾಡಿದ ಫೋಟೋಶೂಟ್ ಇದು ಎನ್ನಲಾಗಿದೆ. ಈ ವಸ್ತ್ರವನ್ನು ಪ್ರಶಾಂತಿ ರಮೇಶ್ ಸ್ಟೈಲಿಂಗ್ ಮಾಡಿದ್ದಾರೆ.

ಮೈಸೂರ್ ಸಿಲ್ಕ್‌ ಸೀರೆಗೆ ಬ್ಲೌಸ್ ಹಾಕಿಲ್ಲ ಅಂತ ನೆಟ್ಟಿಗರು ಗರಂ ಆಗಿದ್ದರು ಈಗ ಗುರಾತಿ ಸೀರೆಗೂ ಹೀಗೆ ಮಾಡಿರುವುದಕ್ಕೆ ಸುಮ್ಮನೆ ಬಿಡುತ್ತಾರಾ?

ಸದ್ಯ ಅಣ್ಣ ವರುಣ್ ಕೊನಿಡೆಲಾ ಮತ್ತು ಲಾವಣ್ಯ ತ್ರಿಪಾಠಿ ಮದುವೆಯಲ್ಲಿ ಬ್ಯುಸಿಯಾಗಿರುವ ನಿಹಾರಿಕಾ ಯಾವ ಟ್ರೋಲ್‌ಗೂ ಕೇರ್ ಮಾಡದೆ ಕೂಲ್ ಆಗಿದ್ದಾರೆ. 

ವೈವಾಹಿಕ ಜೀವನದಿಂದ ದೂರ ಉಳಿದುಕೊಂಡಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ ಸದ್ಯಕ್ಕೆ ನಿಹಾರಿಕಾ ಫೋಟೋಶೂಟ್‌ಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 

Latest Videos

click me!