ಸೌತ್ ಸಿನಿಮಾದಲ್ಲಿ ಅಲ್ಲಿಗೆ ಝೂಮ್ ಮಾಡ್ತಾರೆ, ನಟಿ ಮಾಳವಿಕಾ ಮೋಹನನ್ ಹೇಳಿದ್ದು ಯಾವ ಘಟನೆ?

Published : Apr 20, 2025, 12:43 PM ISTUpdated : Apr 20, 2025, 12:58 PM IST

ಸ್ಯಾಂಡಲ್‌ವುಡ್ ಸೇರಿ ದಕ್ಷಿಣ ಭಾರತದ ಸಿನಿಮಾದಲ್ಲಿ ಭಾರಿ ಮೆಚ್ಚುಗೆ ಗಳಿಸಿರುವ ಮಾಳವಿಕಾ ಮೋಹನ್ ಇದೀಗ ಸೌತ್ ಸಿನಿಮಾ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಸೌತ್ ಸಿನಿಮಾ ನಿರ್ಮಿಸುವವರಿಗೆ ಅದರ ಮೇಲೆ ತುಂಬಾ ಆಸಕ್ತಿ, ಹೀಗಾಗಿ ಅಲ್ಲೇ ಝೂಮ್ ಮಾಡ್ತಾರೆ ಎಂದಿದ್ದಾರೆ. ಅಷ್ಟಕ್ಕೂ ಮಾಳವಿಕಾ ಹೇಳಿದ್ದೇನು?

PREV
15
ಸೌತ್ ಸಿನಿಮಾದಲ್ಲಿ ಅಲ್ಲಿಗೆ ಝೂಮ್ ಮಾಡ್ತಾರೆ, ನಟಿ ಮಾಳವಿಕಾ ಮೋಹನನ್ ಹೇಳಿದ್ದು ಯಾವ ಘಟನೆ?

ನಟಿ ಮಾಳವಿಕಾ ಮೋಹನ್ ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಸಿದ್ದಾರೆ. ಕನ್ನಡದಲ್ಲಿ ನಾನು ಮತ್ತು ವರಲಕ್ಷ್ಮಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ತೆಲುಗು, ತಮಿಳು ಹಾಗೂ ಮಲೆಳೆಯಾಂನಲ್ಲೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದ ಮಾಳವಿಕಾ ಮೋಹನ್, ಸಿನಿಮಾ ಅವಕಾಶ ಹೆಚ್ಚು ಪಡೆದಿದ್ದು ದಕ್ಷಿಣ ಭಾರತದಲ್ಲಿ. ಸೌತ್ ಸಿನಿಮಾದ ಆರಭಿಕ ದಿನಗಳನ್ನು ಮಾಳವಿಕ ನೆನೆದಿದ್ದಾರೆ. ಈ ವೇಳೆ ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿದ್ದಾರೆ.

25

ಹೌಟರ್‌ಫ್ಲೈ ಸಂದರ್ಶನದಲ್ಲಿ ಮಾಳವಿಕಾ ಮೋಹನ್ ದಕ್ಷಿಣ ಭಾರತದ ಸಿನಿಮಾ ನಿರ್ಮಾಣ ಮಂದಿಯ ಆಸಕ್ತಿ ಹಾಗೂ ಗೀಳು ಕುರಿತು ಮಾತಾಡಿದ್ದಾನೆ. ಮುಂಬೈನಲ್ಲಿ ಹುಟ್ಟಿ ಬೆಳೆದ ನಾನು, ದಕ್ಷಿಣ ಭಾರತದ ಸಿನಿಮಾದಲ್ಲಿ ಅವಕಾಶ ಪಡೆದೆ. ಎಲ್ಲವೂ ಹೊಸದಾಗಿತ್ತು. ಆದರೆ ನಾನು ಗಮನಿಸದ ರೀತಿಯಲ್ಲಿ ಸೌತ್ ಸಿನಿಮಾದಲ್ಲಿ ನಾಯಕಿ  ಹೊಕ್ಕಳಿನ ಮೇಲೆ ಎಲ್ಲರ ಕಣ್ಣಿರುತ್ತೆ ಎಂದಿದ್ದಾರೆ.

35

 ಹೊಕ್ಕಳು ಝೂಮ್ ಮಾಡುತ್ತಾರೆ. ಕ್ಲೋಸ್ ಅಪ್ ಶಾಟ್ ದೃಶ್ಯಗಳನ್ನು ತೆಗೆಯುತ್ತಾರೆ. ಬಹುತೇಕ ಸಿನಿಮಾದಲ್ಲಿ ಈ ದೃಶ್ಯಗಳಿವೆ. ನಾನು ಅಭಿನಯಿಸಿದ ಕೆಲ ಸಿನಿಮಾದಲ್ಲಿ ಈ ದೃಶ್ಯ ತೆಗೆಯುವುದು ನನಗೆ ಕಸಿವಿಸಿಯಾಗಿತ್ತು ಎಂದು ಮಾಳವಿಕಾ ಮೋಹನ್ ಹೇಳಿದ್ದಾರೆ. ನಮ್ಮ ದೇಹಕ್ಕೆ ಒಪ್ಪುವಂತ, ಮಾಡೆಲ್ ರೀತಿಯಲ್ಲಿ ಡ್ರೆಸ್ ಹಾಕುತ್ತೇವೆ. ಕೆಲವು ಹೊಟ್ಟೆ ಕಾಣುವಂತೆ ಇರುತ್ತೆ. ಆದರೆ ಝೂಮ್ ಮಾಡಿ,  ಅಲ್ಲೇ ಗಮನ ಕೇಂದ್ರೀಕರಿಸುವಾಗ ಕಸಿವಿಸಿಯಾಗುತ್ತೆ ಎಂದು ಮಾಳವಿಕಾ ಮೋಹನ್ ಹೇಳಿದ್ದಾರೆ.

45

ಇದೇ ವೇಳೆ ಬಾಡಿ ಶೇಮಿಂಗ್ ಕುರಿತು ಮಾಳವಿಕಾ ಮೋಹನ್ ಮಾತನಾಡಿದ್ದಾರೆ. ಮಲೆಯಾಳಂನಲ್ಲಿ ಮೊದಲ ಸಿನಿಮಾ ಪಟ್ಟಮ್ ಪೋಲೆ ಮಾಡುವಾಗ ಬಹುತೇಕರು ಬಾಡಿ ಶೇಮಿಂಗ್ ಮಾಡಿದ್ದರು. ತೆಳ್ಳಗಿದ್ದ ನನ್ನನ್ನು ಮೂಳೆ ಹಾಗೂ ಚರ್ಮಕ್ಕೆ ಹೋಲಿಕೆ ಮಾಡುತ್ತಿದ್ದರು. ಸಲ್ಪ ತಿಂದು ದಪ್ಪ ಆಗು ಎನ್ನುತ್ತಿದ್ದರು. ಭಾಷೆ ಬರದೆ ಸಮಸ್ಯೆಗಳನ್ನು ಎದುರಿಸಿದ್ದೆ ಎಂದು ಮಾಳವಿಕಾ ಮೋಹನ್ ಹೇಳಿದ್ದಾರೆ.

55

ಇದೀಗ ಮಾಳವಿಕಾ ಮೋಹನ್ ತೆಲುಗು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಭಾಸ್ ಜೊತೆ ರಾಜಾ ಸಾಬ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಎಪ್ರಿಲ್ 10ಕ್ಕೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಮುಂದೂಡಲಾಗಿದೆ. ಇದು ಬಹು ನಿರೀಕ್ಷಿತ ಸಿನಿಮಾ ಆಗಿದೆ. ಈ ಸಿನಿಮಾಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

Read more Photos on
click me!

Recommended Stories