ಆ ಹಾಸ್ಯನಟ ಯಾರು ಅಂದ್ರೆ ಪದ್ಮನಾಭಂ. ಹಾಸ್ಯನಟನಾಗಿ ಹೆಸರು ಮಾಡಿದ್ದ ಪದ್ಮನಾಭಂ, ಹಾಸ್ಯದಲ್ಲಿ ವೈವಿಧ್ಯತೆಗಾಗಿ ತುಡಿಯುತ್ತಿದ್ದ ನಟ. ಹಾಸ್ಯನಟನಾಗಿ ಒಳ್ಳೆ ಹೆಸರು ಗಳಿಸಿ, ಆರ್ಥಿಕವಾಗಿ ಸ್ಥಿರತೆ ಪಡೆದ ನಂತರ ರಾಮರಾವ್, ಸಾವಿತ್ರಿ ಅವರ ಪ್ರೋತ್ಸಾಹದಿಂದ ನಿರ್ಮಾಪಕರಾದರು. ರೇಖಾ & ಮುರಳಿ ಆರ್ಟ್ಸ್ ಬ್ಯಾನರ್ ನಲ್ಲಿ 1964 ರಲ್ಲಿ 'ದೇವತ' ಸಿನಿಮಾದ ಮೂಲಕ ಪದ್ಮನಾಭಂ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು. 'ದೇವತ' ಕಥೆ ಪದ್ಮನಾಭಂಗೆ ತುಂಬಾ ಇಷ್ಟವಾಯಿತು. ಆದರೆ ಬಜೆಟ್ ಜಾಸ್ತಿ ಆಗುತ್ತೆ ಅಂತ ಸಿನಿಮಾ ಮಾಡೋ ಧೈರ್ಯ ಮಾಡಲಿಲ್ಲ.