Khushbu Sundar Weight Loss: 98kg ಇದ್ದ ಖುಷ್ಬು 55ನೇ ವಯಸ್ಸಿನಲ್ಲಿ ಇಷ್ಟು ಸಣ್ಣಗಾಗಿದ್ದು ಹೇಗೆ? ನಟಿ ಸೀಕ್ರೆಟ್

Published : Mar 12, 2026, 12:20 PM IST

Khushbu Sundar Weight Loss: ನಟಿ ಖುಷ್ಬು ಸುಂದರ್ ಅವರು‌ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದಿದ್ದಾರೆ. ಮದುವೆಯಾಗಿ ಮಗು ಆದಬಳಿಕ ಅವರು ದಪ್ಪಗಾಗಿದ್ದರು, ಸಾಕಷ್ಟು ವರ್ಷ ಅವರು ಇದೇ ತೂಕ ಹೊಂದಿದ್ದರು. ಕೊರೊನಾ ಟೈಮ್‌ನಲ್ಲಿ ಅವರು ಸಣ್ಣಗಾದರು. ಹೇಗೆ ಸಣ್ಣಗಾದೆ ಎಂದು ಅವರು ಹೇಳಿಕೊಂಡಿದ್ದಾರೆ. 

PREV
15
ಆಗ 98 ಕೆಜಿ ತೂಕ

ರಜನಿಕಾಂತ್ ಅವರ 'ಅನ್ನಾತ್ತೆ' ಸಿನಿಮಾ ಟೈಮ್‌ನಲ್ಲಿ ಖುಷ್ಬು ತಮ್ಮ ತೂಕ 98 ಕೆಜಿ ಎಂದು ಹೇಳಿದ್ದರು. 55 ವರ್ಷ ವಯಸ್ಸಿನಲ್ಲೂ ನನಗೆ ರಕ್ತದೊತ್ತಡ ಅಥವಾ ಸಕ್ಕರೆ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ಖುಷ್ಬು ಸುಂದರ್‌ ಹೇಳಿಕೊಂಡಿದ್ದಾರೆ.

25
ಬಿಪಿ, ಶುಗರ್‌ ಇಲ್ಲ

"ನನಗೆ ಈಗ 55 ವರ್ಷ, ಬಿಪಿ, ಶುಗರ್ ಇಲ್ಲ. ನನ್ನ ತಾಯಿಗೆ ಹೈ ಬಿಪಿ ಇತ್ತು, ಆದರೆ ನನಗೆ ಮೈಗ್ರೇನ್, ಸೈನಸ್ ಸಮಸ್ಯೆ ಇತ್ತು, ಈಗ ಇಲ್ಲ. ಸಿಕ್ಕಾಪಟ್ಟೆ ತೂಕ ಇದ್ದಿದ್ದರಿಂದ ಮೊಣಕಾಲು ನೋವು, ಉಸಿರಾಟದ ಸಮಸ್ಯೆಯಾಗಿತ್ತು, ನಮ್ಮ ಮನೆಯ ಮೆಟ್ಟಿಲುಗಳನ್ನು ಹತ್ತಲು ಆಗುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.

35
ಮೊಣಕಾಲು ನೋವು ಬಂತು

"ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿದರೆ ಭಯ ಆಗುತ್ತಿತ್ತು, ಆನೆಯಂತೆ ದುಂಡಾಗಿತ್ತು. ಬಿಪಿ ಬೇಡ, ಮೊಣಕಾಲು ನೋವು ಬರಬಾರದು ಎಂದು ತೂಕ ಇಳಿಸಿಕೊಳ್ಳಿ ಎಂದರು. COVID-19 ಲಾಕ್‌ಡೌನ್ ಬಂದಾಗ ನಾನು ತೂಕ ಇಳಿಸಿಕೊಳ್ಳಲು ನೋಡಿದೆ. ಒಟ್ಟೂ ನಾಲ್ಕು ವರ್ಷ ಆಯ್ತು. ನಾನು ತೆಳ್ಳಗಿದ್ದಾಗ, ನಾನು ದಪ್ಪವಾಗಿದ್ದಾಗಲೂ ನನ್ನನ್ನು ಅಭಿಮಾನಿಗಳು ಸ್ವೀಕರಿಸಿದರು” ಎಂದು ಖುಷ್ಬು ಸುಂದರ್ ಹೇಳಿದ್ದಾರೆ.

45
ಆಹಾರ ಹೇಗಿರುತ್ತದೆ?

ಸಂಸ್ಕರಿಸಿದ ಫುಡ್ ಜಂಕ್, ಕರಿದ ತಿಂಡಿ, ಹೆಚ್ಚಿನ ಕ್ಯಾಲೋರಿ ಇರುವ ಊಟಗಳನ್ನು ಮಾಡೋದಿಲ್ಲ. ಊಟ ಸರಿಯಾಗಿ ಮಾಡದೆ, ಹಸಿವಿನಿಂದ ಒದ್ದಾಡುವ ಬದಲು, ಆರೋಗ್ಯಕರ, ಅಧಿಕ ಪ್ರೋಟೀನ್ ಇರುವ ಆಹಾರಗಳನ್ನು ಸೇವಿಸಿದೆ.

ಅಪರೂಪಕ್ಕೆ ಕ್ಯಾಂಡಿ, ಕೇಕ್, ಐಸ್ ಕ್ರೀಮ್‌ ತಿಂದರೂ ಕೂಡ, ಅದನ್ನು ಬ್ಯಾಲೆನ್ಸ್‌ ಮಾಡಬೇಕು. ಮೂರು ತಿಂಗಳಿಗೊಮ್ಮೆ ಮಾತ್ರ ಚಾಕೊಲೇಟ್ ತಿನ್ನುತ್ತಾರಂತೆ. ಕಷ್ಟಕರವಾದ ಡಯೆಟ್‌ ಮಾಡೋ ಬದಲು, ಮನಸ್ಸಿನ ಬಯಕೆಗೆ ತಕ್ಕಂತೆ ತಿನ್ನುತ್ತಾರಂತೆ.

55
ವ್ಯಾಯಾಮ ಹೇಗಿರುತ್ತದೆ?

ದಿನಕ್ಕೆ ಎರಡು ಬಾರಿ 45 ನಿಮಿಷ ವಾಕ್‌ ಮಾಡುತ್ತಾರೆ, ಒಟ್ಟು 1.5 ಗಂಟೆಗಳ ಕಾಲ ಅವರು ವಾಕಿಂಗ್‌ ಮಾಡುತ್ತಾರೆ. ಇದರ ಜೊತೆಗೆ ಯೋಗವನ್ನು ಕೂಡ ಮಾಡ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories