ಮೊದಲ ಬಾರಿಗೆ ಮಗನ ಫೋಟೋ ಹೊಂಚಿಕೊಂಡ ಕಾಜಲ್; ನನ್ನ ಜೀವನದ ಪ್ರೀತಿ ಎಂದ ನಟಿ

Published : Jun 13, 2022, 06:07 PM IST

ಮೊದಲ ಬಾರಿಗೆ ಮಗನ ಪೋಟೋ ಶೇರ್ ಮಾಡಿದ್ದಾರೆ ನಟಿ  ಕಾಜಲ್ ಅಗರ್ವಾಲ್. ನೀಲು ಕಿಚ್ಲು ವೈಟ್ ಬಟ್ಟೆಯಲ್ಲಿ ಮಿಂಚಿದ್ದಾನೆ. ಫೋಟೋ ಶೇರ್ ಮಾಡಿ ಕಾಜಲ್, ನೀಲ್ ಕಿಚ್ಲು ನನ್ನ ಜೀವನದ ಪ್ರೀತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಹಾರ್ಟ್‌ಬೀಟ್ ಎಂದು ಹ್ಯಾಟ್ ಟ್ಯಾಕ್ ಹಾಕಿದ್ದಾರೆ. 

PREV
17
ಮೊದಲ ಬಾರಿಗೆ ಮಗನ ಫೋಟೋ ಹೊಂಚಿಕೊಂಡ ಕಾಜಲ್; ನನ್ನ ಜೀವನದ ಪ್ರೀತಿ ಎಂದ ನಟಿ

ಖ್ಯಾತ ನಟಿ ಕಾಜಲ್ ಅಗರ್ವಾಲ್ ಸದ್ಯ ಮುದ್ದಾದ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗನಿಗೆ ಜನ್ಮ ನೀಡಿದ ಬಳಿಕ ಕಾಜಲ್ ಸಿನಿಮಾರಂಗದಿಂದ ದೂರ ಉಳಿದಿದ್ದು ಸಂಪೂರ್ಣ ಮಗನ ಕಡೆ ಗಮನ ಹರಿಸಿದ್ದಾರೆ. 

27

ಕಾಜಲ್ ಏಪ್ರಿಲ್ 18 ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ(baby boy) ನೀಡಿದ್ದರು. ಮಗುವಿಗೆ ಜನ್ಮ ನೀಡಿ ಮೂರು ತಿಂಗಳಾದರೂ ಮಗನ ಫೋಟೋವನ್ನು ಎಲ್ಲೂ ಶೇರ್ ಮಾಡಿಲ್ಲ. ಇದೀಗ ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡಿದ್ದಾರೆ. 

37

ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಕಾಜಲ್ ಮತ್ತು ಗೌತಮ್ ದಂಪತಿ ಮಗನಿಗೆ ನೀಲ್ ಕಿಚ್ಲು ಎಂದು ನಾಮಕರಣ ಮಾಡಿದರು. ನೀಲ್ ಕಿಚ್ಲು ಹೇಗಿದ್ದಾನೆ ಎಂದು ನೋಡುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ಎಲ್ಲೂ ಪೋಟೋ ಹಂಚಿಕೊಂಡಿರಲಿಲ್ಲ ಕಾಜಲ್ ಮತ್ತು ಗೌತಮ್ ದಂಪತಿ. 

47

ಇದೀಗ ಮೊದಲ ಬಾರಿಗೆ ಮಗನ ಪೋಟೋ ಶೇರ್ ಮಾಡಿದ್ದಾರೆ ಕಾಜಲ್. ನೀಲು ಕಿಚ್ಲು ವೈಟ್ ಬಟ್ಟೆಯಲ್ಲಿ ಮಿಂಚಿದ್ದಾನೆ. ಫೋಟೋ ಶೇರ್ ಮಾಡಿ ಕಾಜಲ್, ನೀಲ್ ಕಿಚ್ಲು ನನ್ನ ಜೀವನದ ಪ್ರೀತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಹಾರ್ಟ್‌ಬೀಟ್ ಎಂದು ಹ್ಯಾಟ್ ಟ್ಯಾಕ್ ಹಾಕಿದ್ದಾರೆ. 

57

ಕಾಜಲ್ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕೀರ್ತಿ ಸುರೇಶ್ ಕಾಮೆಂಟ್ ಮಾಡಿ, OMG ಎಂದು ಕಾಮೆಂಟ್ ಮಾಡಿದ್ದಾರೆ. ರಾಶಿ ಖನ್ನಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

67

ಮಗಧೀರ, ಆರ್ಯ 2 ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಕಾಜಲ್ ಅರ್ಗವಾಲ್. 2020ರಲ್ಲಿ ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

77

ಹೈದರಾಬಾದ್ ಮತ್ತು ಮುಂಬೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಇದೀಗ ಕಾಜಲ್ ದಂಪತಿ ಮದುವೆಯಾಗಿ 2 ವರ್ಷಗಳಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇದೀಗ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. 

Read more Photos on
click me!

Recommended Stories