ಎಲಿಜಬೆತ್‌ ರಾಣಿ ತೊಡುತ್ತಿದ್ದ ರೆಡ್‌ ವೆಲ್ವೆಟ್‌ ಗೌನ್‌ನಲ್ಲಿ ಮಿಂಚಿದ ಜಾನ್ವಿ ಕಪೂರ್‌!

First Published | Dec 28, 2024, 11:00 AM IST

ರೆಡ್‌ ವೆಲ್ವೆಟ್‌ ಗೌನ್‌ಗೆ ಒಂದು ಕಾಲಾತೀತ ಗುಣ ಇದೆ. ಇಂಗ್ಲೆಂಡ್‌ನ ಎಲಿಜಬೆತ್‌ ರಾಣಿಯೂ ತೊಡುತ್ತಿದ್ದ ಈ ರೆಡ್‌ ವೆಲ್ವೆಟ್‌ ಗೌನ್‌ ಸದ್ಯ ಬಿ ಟೌನ್‌ ಸುಂದರಿಯ ಹಾಟ್‌ ಫೇವರಿಟ್‌ ಆಗಿದೆ. 

ಝಗಮಗಿಸುವ ಬೆಳಕು, ಮಂದ ಮ್ಯೂಸಿಕ್‌.. ಚೆಂದವೇ ತಾನಾದಂಥಾ ಹುಡುಗಿಯೊಬ್ಬಳು ಬೆಕ್ಕಿನಂತೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ನಡೆದು ಬರುತ್ತಿದ್ದರೆ ಆ ಬಟ್ಟೆ ಚೆಂದವೋ, ಅದನ್ನು ತೊಟ್ಟವಳು ಅಂದವೋ ಎಂದು ಅಮಾಯಕ ಹುಡುಗರು ಎವೆ ಮುಚ್ಚದೇ ನೋಡುತ್ತಿರುತ್ತಾರೆ.

ಹೀಗೆ ಬಾಲಿವುಡ್‌ ನಟಿಯರು ರ್‍ಯಾಂಪ್‌ ವಾಕ್‌ನಲ್ಲೋ, ಏರ್‌ಪೋರ್ಟಿನಲ್ಲೋ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡರೆ ಒಂದಿಷ್ಟು ಜನ ಆಕೆ ತೊಟ್ಟಿರೋ ಡ್ರೆಸ್‌ನ ಬೆಲೆ ಎಷ್ಟಿರಬಹುದು ಅಂತ ಸರ್ಚ್‌ ಮಾಡುತ್ತಾರೆ. ಇದೀಗ ಬಾಲಿವುಡ್‌ ನಟಿಯರ ಡ್ರೆಸ್‌ ಟ್ರೆಂಡಿಂಗ್‌ನಲ್ಲಿದೆ.

Tap to resize

ರೆಡ್‌ ವೆಲ್ವೆಟ್‌ ಗೌನ್‌ಗೆ ಒಂದು ಕಾಲಾತೀತ ಗುಣ ಇದೆ. ಇಂಗ್ಲೆಂಡ್‌ನ ಎಲಿಜಬೆತ್‌ ರಾಣಿಯೂ ತೊಡುತ್ತಿದ್ದ ಈ ರೆಡ್‌ ವೆಲ್ವೆಟ್‌ ಗೌನ್‌ ಸದ್ಯ ಬಿ ಟೌನ್‌ ಸುಂದರಿಯ ಹಾಟ್‌ ಫೇವರಿಟ್‌ ಆಗಿದೆ. 

ಇದೀಗ ತಾನೇ ರೆಡ್‌ ವೆಲ್ವೆಟ್‌ ಗೌನ್‌ನಲ್ಲಿ ಮಾದಕ ಭಂಗಿಯಲ್ಲಿ ಜಾನ್ವಿ ಕಪೂರ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಇವರ ಈ ಉಡುಗೆ ಯದ್ವಾತದ್ವಾ ಓಡುತ್ತಿದ್ದು ಟ್ರೆಂಡಿಂಗ್‌ನಲ್ಲಿದೆ.

ಗೋಲ್ಡನ್‌ ಸುಂದರಿ ಜಾಹ್ನವಿ ಕಪೂರ್‌: ನಟಿ ಜಾಹ್ನವಿ ಕಪೂರ್‌ ಮತ್ತೊಮ್ಮೆ ತಮ್ಮ ಹಾಟ್‌ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿ ಆಗುತ್ತಿದ್ದಾರೆ. ಈ ಬಾರಿ ತಮ್ಮ ತಾಯಿ ಶ್ರೀದೇವಿ ಅವರನ್ನು ನೆನಪಿಸುವ ಲುಕ್‌ ಒ‍ಗೊಂಡ ಫೋಟೋಶೂಟ್‌ ಮೂಲಕ ಗಮನ ಸೆಳೆದಿದ್ದಾರೆ. 

ನ್ಯೂಡ್ ನೆಟೆಡ್ ಕ್ರೀಮಿ ಗೌನ್‌ನಲ್ಲಿ ಜಾನ್ವಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಈ ಫೋಟೊಗಳನ್ನು ‘ಇನ್‌ ದಿ ಗಾರ್ಡೆನ್‌ ಆಫ್‌ ದಿ ಈಡೆನ್‌’ ಎನ್ನುವ ಕ್ಯಾಪ್ಷನ್ ಕೊಟ್ಟು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ಜಾಹ್ನವಿ ಅವರೇ ಹಂಚಿಕೊಂಡಿದ್ದಾರೆ.

ಜಾಹ್ನವಿ ಕಪೂರ್‌ ಅವರ ಫೋಟೋಗಳನ್ನು ನೋಡಿ ‘ಗೋಲ್ಡನ್‌ ಕ್ವೀನ್‌, ಬಂಗಾರದ ಅಪ್ಸರೆ’ ಎಂದು ಅವರ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಅವರ ಈ ಹೊಸ ಲುಕ್ ‘ಮಿ.ಇಂಡಿಯಾ’ ಚಿತ್ರದ ‘ಹವಾ ಹವಾಯಿ’ ಹಾಡಿನಲ್ಲಿ ಶ್ರೀದೇವಿ ಲುಕ್ ನೆನಪಿಸುತ್ತಿವೆ. 

ಅಂದಹಾಗೆ ಇತ್ತೀಚೆಗೆ ಚೆನ್ನೈನಲ್ಲಿರುವ ಶ್ರೀದೇವಿ ಅವರ ಹಳೆಯ ಬಂಗಳೆಯಲ್ಲಿ ಜಾನ್ವಿ ಕಪೂರ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಸಂಭ್ರಮ ಹಂಚಿಕೊಂಡಿದ್ದರು.

Latest Videos

click me!