ಲಂಗ ದಾವಣಿಯಲ್ಲಿ ಮಿರಮಿರ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ: ಈ ಬದಲಾವಣೆಗೆ ಟಾಲಿವುಡ್‌ ಕಾರಣವೆಂದ ಫ್ಯಾನ್ಸ್‌!

First Published | Mar 7, 2024, 5:00 PM IST

ಬಾಲಿವುಡ್‌ನ ಸುಂದರ ನಟಿ ಜಾಹ್ನವಿ ಕಪೂರ್ ಮಾರ್ಚ್ 6 ರಂದು ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಲಂಗ ದಾವಣಿ ತೊಟ್ಟು, ತಲೆಗೆ ಹೂ ಮುಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಹಣೆಗೆ ಸುಂದರವಾದ ಕೆಂಪು ಬಣ್ಣದ ಬಿಂದಿ ಇಟ್ಟಿದ್ದರು ಜಾಹ್ನವಿ ಕಪೂರ್. ಅದರೊಂದಿಗೆ ಸೌತ್ ಇಂಡಿಯನ್ ಸ್ಟೈಲ್​ನಲ್ಲಿ ಹೇರ್​ಸ್ಟೈಲ್ ಮಾಡಿಕೊಂಡು ನೇರಳೆ ಬಣ್ಣದ ಹೂವನ್ನು ಕೂಡಾ ಮುಡಿದಿದ್ದರು.

ಜಾಹ್ನವಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, 'ನನ್ನ ಹುಟ್ಟುಹಬ್ಬದಂದು ಪ್ರೀತಿಯಿಂದ ವಿಶ್‌ ಮಾಡಿದ ನಿಮಗೆಲ್ಲರಿಗೂ ಧನ್ಯವಾದ' ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Tap to resize

ಸದ್ಯ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವುದರಿಂದ ಜಾಹ್ನವಿ ಲುಕ್ ಅಂಡ್ ಸ್ಟೈಲ್ ಬದಲಾಗಿದೆ. ಜೂ.ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ 'ದೇವರ'ದಲ್ಲಿ ನಾಯಕಿಯಾಗಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ.

ಜಾಹ್ನವಿ ಕಪೂರ್‌ ದೇವರ ಎಂಬ ಟಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾಹ್ನವಿ ಹುಟ್ಟುಹಬ್ಬದಂದೇ ಚಿತ್ರತಂಡ ಹೊಸ ಪೋಸ್ಟ್‌ ಬಿಡುಗಡೆ ಮಾಡಿದೆ. ಮೆಗಾಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಅವರ ಮುಂಬರುವ ಚಿತ್ರದಲ್ಲಿ ಜಾನ್ವಿ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಜಾಹ್ನವಿ ಕಪೂರ್ ಆಗಾಗ ತಿರುಪತಿಗೂ ಭೇಟಿ ಕೊಡುತ್ತಾರೆ. ನಟಿ ಇತ್ತೀಚೆಗೆ ಬರ್ತ್​ಡೇ ದಿನ ತನ್ನ ಬಾಯ್​ಫ್ರೆಂಡ್ ಹಾಗೂ ಬೆಸ್ಟ್ ಫ್ರೆಂಡ್ ಜೊತೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಬಂದಿದ್ದರು.

ಇತ್ತೀಚೆಗೆ ಜಾಹ್ನವಿ ಕಪೂರ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಸಿಕ್ಕಾಪಟ್ಟೆ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

Latest Videos

click me!