ಚಾರ್ಮಿ 30ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹಿಟ್ ಸಿನಿಮಾಗಳು ಬೆರಳೆಣಿಕೆಯಷ್ಟು ಮಾತ್ರ. ಮಾಸ್, ಲಕ್ಷ್ಮಿ, ಸ್ಟೈಲ್, ಮಂತ್ರ, ಜ್ಯೋತಿ ಲಕ್ಷ್ಮಿ ಚಿತ್ರಗಳು ಮಾತ್ರ ಚಾರ್ಮಿ ಗೆಲುವು ಅಂತ ಹೇಳಬಹುದು. ಡ್ಯಾನ್ಸ್, ನಟನೆ, ಗ್ಲಾಮರ್‌ನಲ್ಲಿ ಚಾರ್ಮಿ ಕಾಂಪ್ರಮೈಸ್ ಆಗದೆ ನಟಿಸುತ್ತಾರೆ. ನಿರ್ದೇಶಕ ಕೃಷ್ಣವಂಶಿ ಮೂರು ಚಿತ್ರಗಳಲ್ಲಿ ಚಾರ್ಮಿಗೆ ಅವಕಾಶ ನೀಡಿದ್ದರು. ಚಕ್ರಂ, ಶ್ರೀ ಆಂಜನೇಯಂ, ರಾಖಿ ಚಿತ್ರಗಳಲ್ಲಿ ಚಾರ್ಮಿ ನಟಿಸಿದ್ದಾರೆ. ಇವುಗಳಲ್ಲಿ ರಾಖಿ ಮಾತ್ರ ಒಳ್ಳೆಯ ಸಿನಿಮಾ. ಅದೂ ಕೂಡ ದೊಡ್ಡ ಹಿಟ್ ಏನಲ್ಲ.