ಮದುವೆ ಆದ್ಮೇಲೆ ತಾಯಿಯನ್ನೇ ದೂರ ಮಾಡಿದ ತೆಲುಗು ನಟ ನಾಗಶೌರ್ಯ

Published : Feb 18, 2025, 02:55 PM ISTUpdated : Feb 18, 2025, 05:56 PM IST

ದಕ್ಷಿಣ ಭಾರತದ ಯುವ ನಟ ನಾಗ ಶೌರ್ಯ ಈಗ ಸ್ವಲ್ಪ ಸೈಲೆಂಟ್ ಆಗಿದ್ದಾರೆ. ಸಿನಿಮಾಗಳು ಸೋತಿದ್ದರಿಂದ ಬ್ರೇಕ್ ತಗೊಂಡಿದ್ದಾರಂತೆ. ಈ ನಡುವೆ ಶೌರ್ಯ ಬಗ್ಗೆ ಒಂದು ಸುದ್ದಿ ವೈರಲ್ ಆಗ್ತಿದೆ.

PREV
15
ಮದುವೆ ಆದ್ಮೇಲೆ ತಾಯಿಯನ್ನೇ ದೂರ ಮಾಡಿದ ತೆಲುಗು ನಟ ನಾಗಶೌರ್ಯ

ಟಾಲಿವುಡ್ ಹೀರೋ ನಾಗ ಶೌರ್ಯ ಒಂದೇ ಸಿನಿಮಾದಿಂದ ಸ್ಟಾರ್ ಆಗಿದ್ದರು. ಮೊದಲ ಸಿನಿಮಾ ಹಿಟ್ ಆಗಿ ಚೆನ್ನಾಗಿ ಹೆಸರು ಮಾಡಿದ್ದ ನಂತರ ರಿಲೀಸ್ ಆದ ಅವರ ಸಿನಿಮಾಗಳು ಸೋತಿವೆ. ಕಳೆದ ನಾಲ್ಕೈದು ವರ್ಷಗಳಿಂದ ಸಿನಿಮಾಗಳು ಸೋಲುತ್ತಿದ್ದರಿಂದ ಇದೀಗ ಸಿನಿಮಾಗೆ ಬ್ರೇಕ್ ತೆಗೆದುಕೊಂಡು ಮದುವೆ ಆಗಿದ್ದಾರೆ.

25

ಈ ನಡುವೆ ತಮ್ಮ ಸಿನಿಮಾಗಾಗಿ ಎಷ್ಟೇ ಕಷ್ಟಪಟ್ಟು ವರ್ಕೌಟ್ ಮಾಡಿಕೊಂಡು ಸಿಕ್ಸ್‌ ಪ್ಯಾಕ್ ಕೂರಿಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಏನೇ ಪ್ರಯತ್ನ ಪಟ್ಟರೂ ಶೌರ್ಯ ಅವರ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಇನ್ನು ಈ ನಟನ ಸಿನಿಮಾಗಳ ಬಗ್ಗೆ ಜನರಿಗೂ ಆಸಕ್ತಿ ಕಡಿಮೆ ಆಗಿದೆ.

35

ಶೌರ್ಯ ಅವರ ರಂಗಬಲಿ ಸಿನಿಮಾ ಸೋತ ನಂತರ ಆತ ಸಿನಿಮಾಗಳಿಂದ ದೂರ ಇದ್ದಾರೆ. ಮದುವೆ ಆಗಿ ಫ್ಯಾಮಿಲಿ ಲೈಫ್ ನಲ್ಲಿ ಬ್ಯುಸಿ ಇದ್ದಾರೆ. ಆದರೆ ಶೌರ್ಯ ಬಗ್ಗೆ ಒಂದು ಸುದ್ದಿ ವೈರಲ್ ಆಗುತ್ತಿದೆ.

45

ಶೌರ್ಯ ಅವರ ತಾಯಿ ಉಷಾ ಖಾಸಗಿ ಚಾನೆಲ್ ಒಂದರಲ್ಲಿ ನಡೆಸಲಾದ ಸಂದರ್ಶನದಲ್ಲಿ ತಮ್ಮ ಮಗನ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ಮದುವೆ ತನಕ ನಿಮ್ ಜೊತೆ ಇರ್ತೀನಿ, ಆಮೇಲೆ ದೂರ ಹೋಗುತ್ತೀನಿ ಎಂದು ಶೌರ್ಯ ಹೇಳಿದ್ದನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಈ ವಿಚಾರ ಇದೀಗ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.

55

ನಾಗಶೌರ್ಯ ಅವರ ತಾಯಿ  ಉಷಾ ಅವರು ತೆಲುಗು ಚಿತ್ರರಂಗದಲ್ಲಿ ಪ್ರೊಡಕ್ಷನ್ ಕಂಪನಿ ಹಾಗೂ ರೆಸ್ಟೋರೆಂಟ್ ಒಂದನ್ನು ಆರಂಭಿಸಿ ಈ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದಾರೆ. ಇವರ ರೆಸ್ಟೋರೆಂಟ್‌ಗೆ ಒಳ್ಳೆ ಹೆಸರು ಬಂದಿದೆ.

Read more Photos on
click me!

Recommended Stories