ಬೆಂಗಳೂರು(ಜೂ. 10) ನಟ, ನಿರೂಪಕ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಡ್ಯಾನಿಶ್ ಸೇಠ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ತಿಂಗಳುಗಗಳ ಹಿಂದೆ ತಮ್ಮ ಮನದರಸಿಯನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದರು. ಅನ್ಯಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಫೇಮಸ್. ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್, ಟ್ರ್ಯಾವಲ್ ಮಾಡುವುದೆಂದರೆ ತುಂಬಾನೇ ಇಷ್ಟ ಈ ಹುಡುಗಿಗೆ ನಾನು ಮತ್ತು ಅನ್ಯಾ ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡೆವು. ಜೂನ್ 9ರಂದು ನಾವು ಮದುವೆ ನೋಂದಣಿ ಮಾಡಿದ್ದೇವು. ನಿಮ್ಮೆಲ್ಲರ ಆಶೀರ್ವಾದ ಬೇಕಿದೆ ಎಂದು ಕೇಳಿಕೊಂಡಿದ್ದಾರೆ.. ಆರ್ ಸಿಬಿ ಆಟಗಾರರ ಜತೆ ಕಾಣಿಸಿಕೊಳ್ಳುವ ಸೇಠ್ ಸ್ಯಾಂಡಲ್ ವುಡ್ ನಲ್ಲಿಯೂ ಪ್ರಯೋಗ ಮಾಡಿದ್ದಾರೆ. ವಿಚಿತ್ರ ಮ್ಯಾನರಿಸಂ ಮೂಲಕವೇ ಮೆಚ್ಚುಗೆ ಗಳಿಸಿಕೊಂಡಿರುವ ಸೇಠ್ ಗೆ ಶುಭಾಶಯ ಹೇಳೋಣ Actor Comedian Anchor Danish Sait Marries Fiancee Anya Rangaswami ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್